ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯು ಹಲವು ಅವಾಂತರಗಳನ್ನು ಸೃಷ್ಟಿ ಮಾಡಿದೆ. 

ಚಿಕ್ಕಮಗಳೂರು ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳಿಗೆ ಬೆಸುಗೆಯಾಗಿರುವ ಆಗುಂಬೆ ಘಾಟ್ ನಲ್ಲಿ ದೊಡ್ಡ ಮಟ್ಟದಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು ದೊಡ್ಡ ಗಾತ್ರದ 20 ಮರಗಳು ರಸ್ತೆಗುರುಳಿವೆ. ಇದರಿಂದಾಗಿ ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಗಿದೆ. ಕಾರ್ಯಾಚರಣೆ ನಡೆಯುತ್ತಲೇ ಇರುವುದರಿಂದ ವಾಹನ ಸಂಚಾರಕ್ಕೆ ತಡೆಯುಂಟಾಗಿದೆ.


ಕುಸಿದಿರುವ ಗುಡ್ಡದ ಮಣ್ಣು ಹಾಗೂ ಮರಗಳ ತೆರವು ಕಾರ್ಯಾಚರಣೆ ನಡೆಯುತ್ತಿರುವುದರಿಂದ ವಾಹನಗಳ ಸಂಚಾರಕ್ಕೆ ತಡೆಯುಂಟಾಗಿದ್ದು. ಈ ಮಾರ್ಗದ ಮುಖಾಂತರ ಅನೇಕ ವಾಹನಗಳು ಪ್ರತಿನಿತ್ಯ ಸಂಚಾರ ನಡೆಸುತ್ತಿದ್ದು ಪ್ರಸ್ತುತ ಗುಡ್ಡ ಕುಸಿತದಿಂದಾಗಿ ರಸ್ತೆ ಸಂಚಾರ ಸಂಪೂರ್ಣಬಂದ್ ಆಗಿದೆ.

ಪ್ರಯಾಣಿಕರು ಹಾಗೂ ವಾಹನ ಸವಾರರು ಬದಲಿ ಮಾರ್ಗದ ಮುಖಾಂತರ ರಸ್ತೆ ಸಂಚಾರ ನಡೆಸುವುದು ಅನಿವಾರ್ಯವಾಗಿದ್ದು. ಇಂದು ಅಥವಾ ನಾಳೆ ಸಂಪೂರ್ಣ ತೆರವು ಕಾರ್ಯಾಚರಣೆ ಮುಗಿಯಬಹುದೆಂದು ಅಂದಾಜಿಸಲಾಗಿದೆ. ಆದರೆ ಇನ್ನೂ ಗುಡ್ಡ ಕುಸಿಯುವ ಸಾಧ್ಯತೆ ಇರುವುದರಿಂದ ಸಧ್ಯಕ್ಕೆ ಎರಡು ದಿನಗಳ ವರೆಗೂ(ಜುಲೈ12 ಬೆಳಿಗ್ಗೆ 8ರವರೆಗೆ) ವಾಹನ ಸಂಚಾರ ನಿಷೇದಿಸಲಾಗಿದೆ. ಹಾಗೆಯೇ ಜುಲೈ 30ವರೆಗೂ ಭಾರಿ ಗಾತ್ರದ ವಾಹನಗಳನ್ನು ನಿಷೇಧಿಸಲಾಗಿದೆ.