ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಸಾಮಾಜಿಕ ಜಾಲತಾಣದಲ್ಲಿನ ಕಿರಿಕ್ ರಸ್ತೆಯಲ್ಲಿ ಹೊಡೆದಾಟಕ್ಕೆ ಕಾರಣವಾದ ಘಟನೆ ಶೃಂಗೇರಿಯಲ್ಲಿ ನಡೆದಿದ್ದು ಇದು ಹಲವು ಆರೋಪ ಪ್ರತ್ಯಾರೋಪಗಳ ಜೊತೆಗೆ ಇಬ್ಬರೂ ಪರಸ್ಪರ ದೂರು ಪ್ರತಿದೂರು ನೀಡಿದ್ದಾರೆ.
ಇದನ್ನೂ ಓದಿ : ಮಳೆ ಪ್ರಮಾಣ ಹೆಚ್ಚಿದ ಹಿನ್ನಲೆ ; ಶೃಂಗೇರಿ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ
ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಹಾಗೂ ಗ್ರಾಮ ಪಂಚಾಯತ್ ಸದಸ್ಯನ ನಡುವೆ ಹೊಡೆದಾಟ ಹಾಗೂ ಕೊಲೆಗೆ ಯತ್ನ ನಡೆದಿರುವ ಘಟನೆ ಶೃಂಗೇರಿ ಪಟ್ಟಣದಲ್ಲಿ ಭಾನುವಾರದ ದಿನ ನಡೆದಿತ್ತು.
ಬಿಜೆಪಿ ಯುವಮೋರ್ಚಾ ತಾಲೂಕು ಅಧ್ಯಕ್ಷ ನೀಡಿರುವ ದೂರಿನಂತೆ ;
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದ ಭಾರತಿ ಬೀದಿಯಲ್ಲಿ ನಾನು ಕಾರಿನಲ್ಲಿ ತೆರಳುತ್ತಿದ್ದ ವೇಳೆ ತನ್ನ ಕಾರನ್ನು ಶಬರೀಶ್ ಅಡ್ಡಗಟ್ಟಿ, ಬಟನ್ ಚಾಕುವಿನಿಂದ ಕುತ್ತಿಗೆಗೆ ಚುಚ್ಚಲು ಯತ್ನಿಸಿದ್ದಾರೆ ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಚಾಕು ಎಡಗೈಗೆ ಚುಚ್ಚಿದೆ ಹಾಗೂ ಈ ನಂತರದಲ್ಲಿ ಕಾರಿನಿಂದ ಇಳಿದು ನನ್ನ ಎದೆಯ ಭಾಗಕ್ಕೆ ಹಲ್ಲೆ ನಡೆಸಲಾಗಿದೆ ಹಾಗೂ ಮುಂದಿನ ದಿನಗಳಲ್ಲಿ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂದು ಶಬರೀಶ್ ಮೇಲೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಸುನೀಲ್ ದೂರು ದಾಖಲಿಸಿದ್ದಾರೆ ಹಾಗೂ ಕೊಲೆಗೆ ಯತ್ನಿಸಿದ ಶಬರೀಶ್ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ. ಈ ಘಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕುರಿತಾದ ಪೋಸ್ಟ್ ಹಾಕಿರುವುದು ಕಾರಣವಾಗಿದೆ ಎಂದು ಉಲ್ಲೇಖಿಸಲಾಗಿದ್ದು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಈ ಸಂಬಂಧ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಘಟನೆಯ ಕುರಿತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಲಾಗಿದೆ. ಸರ್ಕಾರವಿದೆ, ಅಧಿಕಾರವಿದೆ ಎಂದು ಹೊಡೆಸುವುದು ಗಲಾಟೆ ನಡೆಸುವುದು ಮಾಡುತ್ತಿದ್ದಾರೆ. ಶೃಂಗೇರಿಯಲ್ಲಿ ಈ ಹಿಂದೆ ಶಂಕರಾಚಾರ್ಯರ ಮೇಲೆ ಹಸಿರು ಬಟ್ಟೆ ಹಾಕಿ ಗಲಾಟೆ ಎಬ್ಬಿಸಲು ಯತ್ನಿಸಿದರು ಆದರೆ ಇಂತಹವುಗಳು ಅಲ್ಲಲ್ಲೇ ಶಮನಗೊಂಡಿದೆ. ಸರ್ಕಾರಕ್ಕೆ ಸಂವಿಧಾನ ಹಾಗೂ ಕಾನೂನಿನ ಬಗ್ಗೆ ಕಿಂಚಿತ್ತಾದರೂ ಗೌರವವಿದ್ದಲ್ಲಿ ಇಂತಹ ಘಟನೆಗಳನ್ನು ಮಟ್ಟಹಾಕಬೇಕು - ಟಿ.ಡಿ ರಾಜೇಗೌಡ, ಶಾಸಕರು, ಶೃಂಗೇರಿ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯ ನೀಡಿರುವ ದೂರಿನಂತೆ :
ಈ ಕುರಿತಾಗಿ ವಿದ್ಯಾರಣ್ಯಪುರ ಗ್ರಾಮ ಪಂಚಾಯತ್ ಸದಸ್ಯರಾದ ಶಬರೀಶ್ ಕೂಡ ಪ್ರಕರಣ ದಾಖಲಿಸಿದ್ದು ಶೃಂಗೇರಿ ಪಟ್ಟಣದಲ್ಲಿ ನಾನು ಕಾರಿನಲ್ಲಿ ಕುಳಿತಿದ್ದ ವೇಳೆ ಕಾರಿನ ಬಳಿ ಸುನೀಲ್ ಹಾಗೂ ಆತನ ಸ್ನೇಹಿತ ಬಂದರು, ಕಾರಿನ ಬಾಗಿಲನ್ನು ತೆಗೆದು ಮಾತನಾಡುವ ವೇಳೆ ಏಕಾಏಕಿ ಬಿಯರ್ ಬಾಟಲಿ, ರಾಡ್, ಹಾಗೂ ಕಾರಿನ ವೈಫರ್ ರಾಡನ್ನು ತೆಗೆದು ಅದರಿಂದ ಹಲ್ಲೆ ನಡೆಸಿದ್ದಾರೆ ಸಾಮಾಜಿಕ ಜಾಲತಾಣಗಳಲ್ಲಿ ಡಿ.ಎನ್ ಜೀವರಾಜ್ ಹಾಗೂ ಹರೀಶ್ ವಿ.ಶೆಟ್ಟಿ ವಿರುದ್ದ ಮಾತನಾಡುತ್ತೀಯ ಹೇಗೆ ರಾಜಕೀಯ ಮಾಡುತ್ತೀಯ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿದ್ದಾರೆ ಇದಲ್ಲದೇ ಕೊಲೆ ಮಾಡುವ ಉದ್ದೇಶದಿಂದಲೇ ಬಂದು ಈ ಕೃತ್ಯವನ್ನು ಎಸಗಿದ್ದಾರೆ ಎಂದು ಶಬರೀಶ್ ಪ್ರಕರಣ ದಾಖಲು ಮಾಡಿದ್ದಾರೆ ಹಾಗೂ ಈ ಕೃತ್ಯವನ್ನು ಎಸಗಿದ ವ್ಯಕ್ತಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.
ಇದು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಸಾಕಷ್ಟು ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದ್ದು ಎರಡೂ ಪಕ್ಷದವರು ತಮ್ಮ ಕಾರ್ಯಕರ್ತನ ಮೇಲೆ ದುರುದ್ದೇಶದಿಂದ ಹಲ್ಲೆ ಮಾಡಲಾಗಿದೆ ಎಂದು ಆರೋಪ ಮಾಡುತ್ತಿದ್ದಾರೆ.






0 Comments