ತೀರ್ಥಹಳ್ಳಿ : (ನ್ಯೂಸ್ ಮಲ್ನಾಡ್ ವರದಿ) ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕ ಸಾವನ್ನಪ್ಪಿರುವ ದುರ್ಘಟನೆ ಬೆಳಕಿಗೆ ಬಂದಿದೆ. 

ಇದನ್ನೂ ಓದಿ : ನೇಣು ಬಿಗಿದ ಸ್ಥಿತಿಯಲ್ಲಿ ದೊರೆತ ಮಹಿಳೆಯ ಶವ

ಶಿವಮೊಗ್ಗ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 169 ಎ ಆಗುಂಬೆ ತೀರ್ಥಹಳ್ಳಿ ಮಾರ್ಗ ಮಧ್ಯದ ಪ್ರದೇಶವಾದ ಗುಡ್ಡೆಕೇರಿ ಬಳಿಯಲ್ಲಿ ಕಾರು ಹಾಗೂ ಬೈಕ್ ನ ನಡುವೆ ಈ ಅಪಘಾತ ಸಂಭವಿಸಿದ್ದು ಬೈಕ್ ಚಾಲಕ ಸುನೀಲ್ ದುರ್ಮರಣವನ್ನಪ್ಪಿದ್ದಾರೆ.


ಕೈಮರ ಮೂಲದ ಸೊಸೈಟಿ ಪಿಗ್ಮಿ ಸಂಗ್ರಾಹಕ ಸುನೀಲ್ ಮೃತಪಟ್ಟ ದುರ್ದೈವಿ. ಕೈಮರದಿಂದ ಗುಡ್ಡೆಕೇರಿಗೆ ತೆರಳುವ ಸಮಯದಲ್ಲಿ ಈ ದುರಂತ ಸಂಭವಿಸಿದ್ದು ಗಂಭೀರವಾಗಿ ಗಾಯಗೊಂಡಿದ್ದ ಸುನೀಲ್ ಅವರನ್ನು ಸ್ಥಳೀಯರ ಸಹಕಾರದೊಂದಿಗೆ ತಾಲೂಕು ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ ಕಾರಣ ಆತನನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡುವ ಮಾರ್ಗ ಮಧ್ಯದಲ್ಲಿ ಸುನೀಲ್ ಕೊನೆಯುಸಿರೆಳೆದಿದ್ದಾರೆ.

ಘಟನಾ ಸಂಬಂಧ ಮೃತನ ಪೋಷಕರು ಹಾಗೂ ಸ್ಥಳೀಯರು ತೀವ್ರ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ABVP ಪ್ರಮುಖ ಕಾರ್ಯಕರ್ತನ ಮೇಲೆ ಅನ್ಯಕೋಮಿನ ಯುವಕರ ಗುಂಪಿನಿಂದ ಹಲ್ಲೆ : 

ತೀರ್ಥಹಳ್ಳಿ : ರಾಜ್ಯದ ಗೃಹ ಸಚಿವರಾದ ಆರಗಜ್ಞಾನೇಂದ್ರ ಅವರ ತವರೂರಲ್ಲಿ ಎಬಿವಿಪಿಯ ಪ್ರಮುಖ ಕಾರ್ಯಕರ್ತನ ಮೇಲೆ ಅನ್ಯಕೋಮಿನ ಯುವಕರು ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. 

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಎಬಿವಿಪಿ ತಾಲೂಕು ಅಧ್ಯಕ್ಷ ಮತ್ತು ಆತನ ಸ್ನೇಹಿತನ ಮೇಲೆ 15 ಜನ ಯುವಕರು ನಿನ್ನೆ ಹಲ್ಲೆ ನಡೆಸಿದ್ದು, ಈ ಘಟನೆಯಲ್ಲಿ ಗಾಯಗೊಂಡಿರುವ ಎಬಿವಿಪಿ ಪ್ರಮುಖನನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಒದಗಿಸಲಾಗುತ್ತಿದೆ.


ತೀರ್ಥಹಳ್ಳಿ ಪಟ್ಟಣದ ಬಾಳೆಬೈಲು ಸಮೀಪ ನಿನ್ನೆ ಮಧ್ಯಾಹ್ನ ಈ ಗಲಾಟೆ ನಡೆದಿದ್ದು ತೀರ್ಥಹಳ್ಳಿಯ ಜಿಪಿಎಸ್ ಸಿ ಕಾಲೇಜಿನಲ್ಲಿ ಬಿಸಿಎ ಓದುತ್ತಿರುವ  ಎಬಿವಿಪಿ ವಿದ್ಯಾರ್ಥಿ ಸಂಘಟನೆಯ ತಾಲೂಕು ಅಧ್ಯಕ್ಷ ಪ್ರತೀಕ್ ಗೌಡ ಮನೆಗೆ ತೆರಳಲೆಂದು ಸ್ನೇಹಿತನೊಂದಿಗೆ ಕಾರಿನಲ್ಲಿ ಕಾಲೇಜು ಆವರಣದಿಂದ ಹೊರಹೋಗುವ ಸಂದರ್ಭದಲ್ಲಿ ಕಾಲೇಜಿನ ಹೊರಭಾಗದಲ್ಲಿದ್ದ ಅದೇ ಕಾಲೇಜಿನ ಮತ್ತು ಇತರೆ ಇಬ್ಬರು ಯುವಕರು ಕಾರನ್ನ ತಡೆದು ಕಾರಿನ ಡೋರನ್ನ ಒಡೆದು ಕಾರಿನಲ್ಲಿರುವ ಇಬ್ಬರು ಯುವಕರನ್ನ ಹೊರಗೆ ಎಳೆಯಲು ಯತ್ನಿಸಿದ್ದಾರೆ ಎನ್ನಲಾಗಿದೆ. ಅಬ್ದುಲ್ ವಾಜಿದ್, ನಿಹಾರ್, ನಿಹಾನ್ ,ಹ್ಯಾರಿಸ್, ಸದಾಪ್ ಸಾವಿದ್ ರಿಜ್ವಾನ್, ಜೇಶನ್,ಮಾಸೂಮ್ ಬ್ಯಾರಿ ಇನ್ನಿತರೆ ಹೊರಗಿನ ಯುವಕರು ಈ ಇಬ್ಬರು  ಯುವಕರನ್ನ ಕಾರಿನಿಂದ ಹೊರಗೆ ಎಳೆದು ಥಳಿಸಿ ನೆಲಕ್ಕೆ ಉರುಳಿಸಿ ಥಳಿಸಿದ್ದಾರೆ, ಕೈಕಾಲುಗಳಿಗೆ ಕಲ್ಲುಗಳಿಂದ ಥಳಿಸಿದ್ದಾರೆ. ನಮ್ಮ ತಂಟೆಗೆ ಬಂದರೆ ನಿಮ್ಮನ್ನ ಜೀವಂತವಾಗಿ ಬಿಡುವುದಿಲ್ಲವೆಂದು ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಿಸಲಾಗಿದೆ. 

ಈ ವೇಳೆ ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಜಗಳ ಬಿಡಿಸಲು ಯತ್ನಿಸಿದ್ದು, ಇಬ್ಬರು ಯುವಕರನ್ನ 15 ಜನರ ಗ್ಯಾಂಗ್ ಬಿಡಲು ಸಿದ್ದವಿರಲಿಲ್ಲ ಎನ್ನಲಾಗಿದೆ. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ  ಸ್ಥಳದಿಂದ ಚದರುವಂತೆ ಮಾಡಲಾಗಿದೆ. 

ಈ ಘಟನೆ ಹಳೆಯ ದ್ವೇಷದಿಂದ ನಡೆದಿದೆ ಎಂದು ಆರೋಪಿಸಿ ಪ್ರತೀಕ್ ಗೌಡ,  ಅಬ್ದುಲ್ ವಾಜಿದ್, ನಿಹಾರ್, ನಿಹಾನ್ ,ಹ್ಯಾರಿಸ್, ಸದಾಪ್ ಸಾವಿದ್ ರಿಜ್ವಾನ್, ಜೇಶನ್,ಮಾಸೂಮ್ ಬ್ಯಾರಿ ಇನ್ನಿತರರ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಸ್ಥಳೀಯರ ಪ್ರಕಾರ ಹಳೆಯ ದ್ವೇಷ ಹಿಜಾಬ್ ವಿಚಾರದಲ್ಲಿ ಗಲಾಟೆ ನಡೆದಿದೆ ಎನ್ನಲಾಗುತ್ತಿದ್ದು ಪೊಲೀಸರ ಸಂಪೂರ್ಣ ತನಿಖೆಯ ನಂತರವಷ್ಟೇ ಈ ಕುರಿತಾದ ಹೆಚ್ಚಿನ ಮಾಹಿತಿಗಳು ಹೊರಬೀಳಲಿದೆ.

ಘಟನಾ ಸಂಬಂಧ ಸ್ಥಳೀಯರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ಉಂಟಾಗಿದ್ದು, ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯನ್ನು ನೀಡಿ ವಿದ್ಯಾರ್ಥಿಗಳ ನಡುವೆ ಇರುವ ಈ ರೀತಿಯ ದ್ವೇಷ ಭಾವನೆಯನ್ನು ಹೋಗಲಾಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.