ಕೊಡಗು : (ನ್ಯೂಸ್ ಮಲ್ನಾಡ್ ವರದಿ) ಮೂರು ಆನೆಗಳಿದ್ದ ಗುಂಪು ಕೊಡಗಿನ ಆದಿವಾಸಿ ಬುಡಕಟ್ಟು ಜನಾಂಗದವರು ವಾಸ ಮಾಡುತ್ತಿದ್ದ ಗುಡಿಸಲಿನ ಮೇಲೆ ದಾಳಿ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಕೊಡಗಿನ ಅಮ್ಮತ್ತಿ ಸಮೀಪದ ಚೆನ್ನಯ್ಯನಕೋಟೆ ಗ್ರಾಮದ ಚೊಟ್ಟೆಪಾರೆ ವ್ಯಾಪ್ತಿಯ ಆದಿವಾಸಿ ಬುಡಕಟ್ಟು ಕುಟುಂಬದ ಗುಡಿಸಲಿನ ಮೇಲೆ ದಾಳಿ ಮಾಡಿವೆ. ಗ್ರಾಮಸ್ಥರಾದ ಲಕ್ಷ್ಮಿ ಮತ್ತು ಶಿವ ಚೊಟ್ಟೆಪಾರೆ ಬುಡಕಟ್ಟು ಬಡಾವಣೆಯ ನಿವಾಸಿಗಳಾಗಿದ್ದು ಹಳೆಯ ಗುಡಿಸಲಿನಲ್ಲಿ ವಾಸವಾಗಿದ್ದರು. ಕಳೆದ ರಾತ್ರಿ ಮೂರು ಕಾಡಾನೆಗಳು ಗುಡಿಸಲಿನ ಒಂದು ಭಾಗಕ್ಕೆ ಹಾನಿ ಮಾಡಿ ಮನೆಯಲ್ಲಿ ಕೂಡಿಟ್ಟಿದ್ದ ಆಹಾರ ಪದಾರ್ಥಗಳನ್ನು ತಿಂದು ತೇಗಿದ್ದು ನಂತರ ಇಡೀ ಗುಡಿಸಲನ್ನು ಉರುಳಿಸಿ ಕಾಡಿಗೆ ಮರಳಿವೆ. ಇನ್ನು ಕಾಡಾನೆ ಹಿಂಡು ಕಂಡ ಲಕ್ಷ್ಮಿ ಮತ್ತು ಶಿವ ಸ್ಥಳದಿಂದ ತಪ್ಪಿಸಿಕೊಂಡು ನೆರೆಹೊರೆಯವರ ಗುಡಿಸಲಿನಲ್ಲಿ ಆಶ್ರಯ ಪಡೆದಿದ್ದಾರೆ.
ಇದನ್ನೂ ಓದಿ : ದಲಿತ ಯುವಕನಿಗೆ ಮೂತ್ರ ಕುಡಿಸಿದ್ದ PSI ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಪ್ರಸ್ತುತ ವಾಸಕ್ಕಿದ್ದ ಮನೆ ಕಳೆದುಕೊಂಡು ಲಕ್ಷ್ಮಿ ಮತ್ತು ಶಿವ ನಿರಾಶ್ರಿತರಾಗಿದ್ದು, ಅಕ್ಕಪಕ್ಕದ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ನಿರಾಶ್ರಿತ ದಂಪತಿಗೆ ಅರಣ್ಯ ಇಲಾಖೆ ಯಾವುದೇ ಪರಿಹಾರ ಅಥವಾ ಬೆಂಬಲ ನೀಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಈ ನಡುವೆ ವಿರಾಜಪೇಟೆ ತಾಲೂಕು ತಹಶೀಲ್ದಾರ್ ಅವರು ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ದಂಪತಿಗಳು ಈಗ ನಿರಾಶ್ರಿತರಾಗಿದ್ದು ಬೆಂಬಲಕ್ಕಾಗಿ ಎದುರು ನೋಡುತ್ತಿದ್ದಾರೆ.
ಒಂದೆಡೆ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಕೊಡಗು ನಲುಗಿದ್ದು ಆಗಾಗ ಭೂಕಂಪನ ಹಾಗೂ ಬೆಟ್ಟ ಗುಡ್ಡಗಳ ಕುಸಿತ ಸಂಭವಿಸುತ್ತಲೇ ಇರುತ್ತದೆ, ಈ ಮಧ್ಯೆ ಕಾಡಾನೆಗಳು ದಾಳಿ ನಡೆಸಿ ಗುಡಿಸಲು, ಮನೆ, ಅಗತ್ಯ ವಸ್ತುಗಳನ್ನು ಹಾಗೂ ತೋಟ ಗದ್ದೆಗಳ ಬೆಳೆಯನ್ನು ನಾಶಪಡಿಸುತ್ತಿದೆ.
ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ :
https://forms.gle/APPtk8M3ZDk2oMka6
ಈ ಕುರಿತಾಗಿ ಸರ್ಕಾರವನ್ನು ಆಗ್ರಹಿಸಿರುವ ಸ್ಥಳೀಯರು ಆನೆ ದಾಳಿಗೆ ಸೂಕ್ತ ಪರಿಹಾರ ಹಾಗೂ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯನ್ನು ಕ್ಷಿಪ್ರವಾಗಿ ನಡೆಸಬೇಕೆಂದು ಆಗ್ರಹಿಸಿದ್ದಾರೆ.


.jpeg)



0 Comments