ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಲೇ ಇದ್ದು, ಜನರ ಕೆಲಸಗಳಿಗೆ ಅಡೆತಡೆ ಉಂಟಾಗಿದ್ದು ಮಳೆಯಿಂದಾಗಿ ಹಲವೆಡೆ ಸಮಸ್ಯೆಗಳುಂಟಾಗಿದೆ.
ಎನ್.ಆರ್.ಪುರ : ದ್ವಿಚಕ್ರ ವಾಹನ ಸವಾರನಿಗೆ ಕಾರಿನಿಂದ ಗುದ್ದಿ ದರೋಡೆ ಮಾಡಿದ್ದ ಖತರ್ನಾಕ್ ದಂಪತಿಗಳು ಅಂದರ್
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹೇರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶುಂಠಿ ಕುಡಿಗೆಯಲ್ಲಿ ಸಂಚಾರಕ್ಕೆ ಪ್ರಮುಖವಾಗಿದ್ದ ರಸ್ತೆ ಕುಸಿತ ಉಂಟಾಗಿದೆ, ಇದರಿಂದಾಗಿ ಗ್ರಾಮಸ್ಥರಿಗೆ ತೀವ್ರತರವಾದ ಸಮಸ್ಯೆ ಎದುರಾಗಿದೆ. ರಸ್ತೆ ಕುಸಿತ ಉಂಟಾದ ಪರಿಣಾಮ ಬಿಟ್ಟಿಕುಡಿಗೆ, ಶಾಂತಿಕುಡಿಗೆ, ಹಾಗೂ ಬ್ರಹ್ಮರಾಜನಕುಡಿಗೆ ಗ್ರಾಮಗಳಿಗೆ ವಾಹನ ಸಂಪರ್ಕವು ಸ್ಥಗಿತಗೊಂಡಿದೆ. ಈ ಹಿಂದೆ 2020 ರಲ್ಲಿ ಸುರಿದ ಭಾರೀ ಮಳೆಗೆ ರಸ್ತೆಯ ಒಂದು ಭಾಗ ಕುಸಿದಿತ್ತು ಈ ಸಂದರ್ಭದಲ್ಲಿ ಶಾಸಕ ರಾಜೇಗೌಡ, ಅಂದಿನ ಉಸ್ತುವಾರಿ ಸಚಿವರಾಗಿದ್ದ ಸಿಟಿ ರವಿ, ಹಾಗೂ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ನಡೆಸಿ ಸಮರ್ಪಕವಾಗಿ ರಸ್ತೆ ನಿರ್ಮಾಣ ಮಾಡುವ ಭರವಸೆ ನೀಡಿದ್ದರೂ ಕೂಡ ಯಾವುದೇ ರಸ್ತೆ ಕಾಮಗಾರಿಗಳು ನಡೆಯದೇ ಇರುವ ಪರಿಣಾಮ ಈ ರಸ್ತೆ ಮಾರ್ಗವು ಕಡಿತಗೊಂಡಿದೆ ಎಂದು ಸ್ಥಳೀಯರು ಉಂಟಾಗಿರುವ ಸಮಸ್ಯೆಯ ಕುರಿತು ಅಳಲನ್ನು ವ್ಯಕ್ತಪಡಿಸಿದ್ದಾರೆ.
ವಯಸ್ಸಾದವರು, ಮಕ್ಕಳು, ಈ ಭಾಗದಲ್ಲಿ ವಾಸ ಮಾಡುತ್ತಿದ್ದು ಅನಾರೋಗ್ಯಕ್ಕೀಡಾದಲ್ಲಿ ಆಸ್ಪತ್ರೆಗೆ ತೆರಳಲು ಕ್ಲಿಷ್ಟಕರವಾದ ಸನ್ನಿವೇಶ ಎದುರಾಗಿದ್ದು ಪರ್ಯಾಯ ಮಾರ್ಗವಿಲ್ಲದೆ ಜನ ಬಹಳಷ್ಟು ಸಮಸ್ಯೆಗೆ ಸಿಲುಕುವಂತಾಗಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಂದ್ರವಾದ ಹೇರೂರು ಈ ಭಾಗದಿಂದ 10 ಕಿಮೀ ದೂರದಲ್ಲಿದ್ದು ಅತ್ತಿಂದಿತ್ತ ತೆರಳಲು ಜನ ಆತಂಕಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಮಳೆಗಾಲದ ಆರಂಭಕ್ಕೂ ಮೊದಲೇ ಸ್ಥಳೀಯರು ಶಾಸಕ ಟಿ.ಡಿ ರಾಜೇಗೌಡ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್ ಬಳಿಯಲ್ಲಿ ಈ ಕುರಿತಾದ ಸಮಸ್ಯೆಯನ್ನು ಬಗೆಹರಿಸುವಂತೆ ಹೇಳಿದ್ದರೂ ಕೂಡ ಯಾವುದೇ ಪ್ರಯೋಜನಗಳಾಗಿಲ್ಲ, ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಗ್ರಾಮಸ್ಥರು ಸಮಸ್ಯೆ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ಎದುರಾಗಿರುವ ಸಮಸ್ಯೆಯ ಕುರಿತು ತಿಳಿಸಿದ್ದಾರೆ.
ಶೃಂಗೇರಿ : ಹಿಂದೂ ಸೇವಾ ಪ್ರತಿಷ್ಠಾನದ ವತಿಯಿಂದ ಉಚಿತ ಹೊಲಿಗೆ ತರಬೇತಿ ಕಾರ್ಯಾಗಾರ ಉದ್ಘಾಟನೆ
ಹಿಂದೂ ಸೇವಾ ಪ್ರತಿಷ್ಠಾನ ಶೃಂಗೇರಿ ಇವರ ವತಿಯಿಂದ ಶೃಂಗೇರಿಯ ಬೇಗಾರ್ ನಲ್ಲಿ ಉಚಿತ ಹೊಲಿಗೆ ತರಬೇತಿ ಕಾರ್ಯಗಾರ ಉದ್ಘಾಟನೆಗೊಂಡಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾರ್ ಕೈಮರ ವ್ಯಾಪ್ತಿಯ ಗ್ರಾಮಸ್ಥರಿಗೆ ಉದ್ಯೋಗ ದೃಷ್ಟಿಯಿಂದ ಅನುಕೂಲಕರವಾಗುವಂತೆ, ಹಾಗೂ ಸ್ವಾವಲಂಬನೆಯುತ ಜೀವನ ನಡೆಸುವ ನಿಟ್ಟಿನಲ್ಲಿ ಶ್ರೀ ಶ್ರೀ ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ, ಶೃಂಗೇರಿ ಪ್ರೇರಿತ ಹಿಂದೂ ಸೇವಾ ಪ್ರತಿಷ್ಠಾನ ಕರ್ನಾಟಕ ಸಂಚಾಲಿತ ಇವರ ವತಿಯಿಂದ ಉಚಿತ ಹೊಲಿಗೆ ತರಬೇತಿ ಕಾರ್ಯಗಾರವು ಉದ್ಘಾಟನೆಗೊಂಡಿತು. ಈ ಕಾರ್ಯಗಾರವನ್ನು ಹಿಂದೂ ಸೇವಾ ಪ್ರತಿಷ್ಠಾನದ ರಾಜ್ಯ ನಿರ್ದೇಶಕರಾದ ಶ್ರೀ ಸುರೇಶ್ ಜಿ ಇವರು ಉದ್ಘಾಟಿಸಿದರು.
ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ : https://forms.gle/APPtk8M3ZDk2oMka6
ಈ ಕುರಿತು ಮಾತನಾಡಿದ ಅವರು ಕಳೆದ ಅನೇಕ ವರ್ಷಗಳಿಂದ ನಿರಂತರವಾಗಿ ಹಿಂದೂ ಸೇವಾ ಪ್ರತಿಷ್ಠಾನವು ಕಾರ್ಯನಿರ್ವಹಿಸುತ್ತಾ ಸಾಗಿದೆ, ಮಹಿಳಾ ಸ್ವಾವಲಂಬನೆ ಹಾಗೂ ಸಂಸ್ಕಾರಯುತ ಸಮಾಜದ ನಿರ್ಮಾಣಕ್ಕಾಗಿ ಪ್ರತಿಷ್ಠಾನವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಹಿಂದೂ ಸೇವಾ ಪ್ರತಿಷ್ಠಾನದ ರಾಜ್ಯ ಸಂಯೋಜಕರಾದ ನಟರಾಜ ರಾನಡೆ, ತಾಲೂಕು ಸಂಯೋಜಕರಾದ ನೂತನ್ ಸೂರ್ಯ, ಕಿರಣ್ ಹುಕ್ಳಿ, ಉಮೇಶ್ ಮೀಗಾ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

.jpeg)




0 Comments