ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಸುಳ್ಳು ಭರವಸೆ ನಿಲ್ಲಿಸಿ ಶೃಂಗೇರಿ ತಾಲೂಕು ಆಸ್ಪತ್ರೆಗೆ ವೈದ್ಯರ ನಿಯೋಜನೆ ಮಾಡುವಂತೆ ಒತ್ತಾಯಿಸಿ ಹಾಗೂ ಸ್ಥಳಾವಕಾಶ ಸಮಸ್ಯೆ ಬಗೆಹರಿಸುವಂತೆ ಶೃಂಗೇರಿ ಸಾರ್ವಜನಿಕರು ಒತ್ತಾಯಿಸಿದ್ದು ಜುಲೈ 10ರೊಳಗೆ ಬೇಡಿಕೆ ಈಡೇರದೆ ಇದ್ದಲ್ಲಿ ಡಿ.ಎಚ್.ಓ ಕಛೇರಿ ಎದುರು ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಮಾಡುವುದಾಗಿ ತಿಳಿಸಿದ್ದಾರೆ. ತಮ್ಮ ಬೇಡಿಕೆ ಪತ್ರವನ್ನು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನೀಡಿದ್ದಾರೆ.
ಇದನ್ನೂ ಓದಿ : ABVP ನಾಯಕನ ಮೇಲೆ ಅನ್ಯಕೋಮಿನ ಯುವಕರ ಗುಂಪಿನಿಂದ ಹಲ್ಲೆ
ಶೃಂಗೇರಿ ತಾಲೂಕು ಆಸ್ಪತ್ರೆಯಲ್ಲಿ ಕಣ್ಣಿನ ವೈದ್ಯರು, ಕಿವಿ ಮೂಗು, ಗಂಟಲು ತಜ್ಞರು, ಸರ್ಜನ್, ಮಕ್ಕಳ ತಜ್ಞರು ಇಲ್ಲದೆ ಸಾರ್ವಜನಿಕರು ಕಳೆದ ಹಲವು ವರ್ಷಗಳಿಂದ ತೀವ್ರ ಅನಾನುಕೂಲ ಅನುಭವಿಸುತ್ತಿದ್ದಾರೆ. ಶೃಂಗೇರಿಗೆ ನೇಮಕವಾದ ಮಕ್ಕಳ ತಜ್ಞರನ್ನು ಸಹ ಕೊಪ್ಪ ಆಸ್ಪತ್ರೆಗೆ ವರ್ಗಾಯಿಸಿ ಕೋವಿಡ್ ಮುಗಿದ ನಂತರವೂ ಶೃಂಗೇರಿಗೆ ಕರ್ತವ್ಯ ನಿರ್ವಹಿಸಲು ಹಾಕಿರುವುದಿಲ್ಲ.
ಈ ಹಿಂದೆ ಹಲವು ಬಾರಿ ಡಿ.ಎಚ್‌ಓ ಹಾಗೂ ಜನಪ್ರತಿನಿಧಿಗಳಲ್ಲಿ ಈ ಬಗ್ಗೆ ಮನವಿ ಮಾಡಿದ್ದು, ತಕ್ಷಣವೇ ಡೆಪ್ಯುಟೇಶನ್ ಆಧಾರದ ಮೇಲೆ ಶೃಂಗೇರಿ ಆಸ್ಪತ್ರೆಗೆ ನಿಯೋಜಿಸುವುದಾಗಿ ತಿಳಿಸಿದ್ದರೂ ಸಹ ಭರವಸೆ ಸುಳ್ಳಾಗಿಸಿದ್ದಾರೆ ಎಂದು ತಿಳಿಸಿದ್ದಾರೆ.
ಆದಕಾರಣ ಈ ಬಗ್ಗೆ ಸಾರ್ವಜನಿಕರು ಸಹ ತೀವ್ರ ಅಸಮಾಧಾನ ಹೊಂದಿದ್ದು, ಹೋರಾಟಕ್ಕೆ ತೀರ್ಮಾನಿಸಿದ್ದು ಜುಲೈ ತಿಂಗಳ 10ನೇ ತಾರೀಖಿನ ಒಳಗೆ ಡೆಪ್ಯುಟೇಶನ್ ಆಧಾರದ ಮೇಲೆ ನಿಯೋಜನೆಗೊಳಿಸದೆ ಇದ್ದಲ್ಲಿ ಹಾಗೂ ಆಸ್ಪತ್ರೆಗೆ ಸಂಬಂಧಿಸದ ಕೆಲವು ವಿಭಾಗಗಳನ್ನು ಈಗಿರುವ ಆಸ್ಪತ್ರೆಯ ಕಟ್ಟಡದಿಂದ ಬೇರೆಡೆಗೆ ವರ್ಗಾಯಿಸದೆ ಇದ್ದಲ್ಲಿ ಡಿ.ಎಚ್.ಓ ಕಛೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಹೇಳಿದ್ದಾರೆ.
ಕೆಲವು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದು ಅವು ಇಂತಿವೆ:
- ಶೃಂಗೇರಿ ಆಸ್ಪತ್ರೆಗೆ ನೇಮಕವಾಗಿರುವ ಮಕ್ಕಳ ತಜ್ಞರನ್ನು ಕೊಪ್ಪಕ್ಕೆ ವರ್ಗಾಯಿಸಿದ್ದು ಶೃಂಗೇರಿಯಲ್ಲೇ ವಾರದಲ್ಲಿ ಕನಿಷ್ಠ 3ದಿನ ಕರ್ತವ್ಯ ನಿರ್ವಹಿಸತಕ್ಕದ್ದು.
- ಕಣ್ಣಿನ ವೈದ್ಯರನ್ನು ವಾರದಲ್ಲಿ ಕನಿಷ್ಠ 2 ದಿನ ಶೃಂಗೇರಿಗೆ ನಿಯೋಜನೆ ಮಾಡಬೇಕು. ಪ್ರಸ್ತುತ ಅಂಗವಿಕಲರ ಕಾರ್ಡ್ ಗೆ ಸಹ ಶೃಂಗೇರಿ ಜನರು ಕೊಪ್ಪಕ್ಕೆ ತೆರಳುತ್ತಿದ್ದಾರೆ.
- ಸರ್ಜನ್ ಅವರನ್ನು ಕನಿಷ್ಠ ಒಂದು ದಿನ ಶೃಂಗೇರಿ ಆಸ್ಪತ್ರೆಗೆ ನಿಯೋಜನೆ ಮಾಡಬೇಕು.
- ಕಿವಿ ಮೂಗು ಗಂಟಲು ತಜ್ಞ ವೈದ್ಯರನ್ನು ವಾರದಲ್ಲಿ ಕನಿಷ್ಠ ಒಂದು ದಿನ ಶೃಂಗೇರಿ ಆಸ್ಪತ್ರೆಗೆ ನಿಯೋಜನೆ ಮಾಡಬೇಕು ಹಾಗೆಯೇ ಈಗಿರುವ ಆಸ್ಪತ್ರೆಯಲ್ಲಿ ಸಾಕಷ್ಟು ಸ್ಥಳಾವಕಾಶ ಕೊರತೆ ಇದ್ದು ಅದರಿಂದಾಗಿ ಸಾರ್ವಜನಿಕರು ಸಾಕಷ್ಟು ಅನಾನುಕೂಲ ಅನುಭವಿಸುತ್ತಿದ್ದಾರೆ ಈ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕೆಂದು ಸಾರ್ವಜನಿಕರು ಬೇಡಿಕೆ ಇಟ್ಟಿದ್ದಾರೆ.
ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ : https://forms.gle/APPtk8M3ZDk2oMka6
ಶೃಂಗೇರಿ ತಾಲೂಕು ಆಸ್ಪತ್ರೆಯಲ್ಲಿರುವ ಧರ್ಮಸ್ಥಳ ಪ್ರಕೃತಿ ಚಿಕಿತ್ಸಾಲಯ ಹಾಗೂ ಆಯುಷ್ ವಿಭಾಗವನ್ನು ಶೃಂಗೇರಿ ಪಟ್ಟಣದಲ್ಲಿ ಇರುವ ಹಳೆಯ ಸರ್ಕಾರಿ ಆಸ್ಪತ್ರೆಯ ಜಾಗಕ್ಕೆ ವರ್ಗಾಯಿಸುವುದು ಸೂಕ್ತವಾಗಿದ್ದು, ಈ ಬಗ್ಗೆ ಹಿಂದೆಯೂ ಮನವಿ ಸಲ್ಲಿಸಿದ್ದೆವು. ತಕ್ಷಣವೇ ಎರಡೂ ವಿಭಾಗಗಳನ್ನು ಸ್ಥಳಾಂತರ ಮಾಡುವಂತೆ ಒತ್ತಾಯಿಸಿದ್ದಾರೆ.
ಹಾಗೆಯೇ ಶೃಂಗೇರಿ ಆಸ್ಪತ್ರೆ ಹಾಗೂ ಜನರ ಮೂಲಭೂತ ಸಮಸ್ಯೆಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರುತ್ತಿರುವ ಶೃಂಗೇರಿ ಕ್ಷೇತ್ರದ ರಾಜಕಾರಣಿಗಳಿಗೆ ಹಾಗೂ ಸರ್ಕಾರದ ಪ್ರತಿನಿಧಿಗಳಿಗೆ ಕಂಡಕಂಡಲ್ಲಿ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ.



.jpeg)



0 Comments