ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಭಾರೀ ಮಳೆಯಿಂದಾಗಿ ಮನೆಯೊಂದು ಕುಸಿದಿರುವ ಘಟನೆ ಮಲೆನಾಡಿನಲ್ಲಿ ಸಂಭವಿಸಿದೆ. 

ಚಿಕ್ಕಮಗಳೂರು ಕೊಡಗು ಹಾಗೂ ಕರಾವಳಿ ಭಾಗಗಳಲ್ಲಿ ಸಂಭವಿಸಿದ ಮಳೆಯು ಭಾರೀ ಪ್ರಮಾಣದ ಸಂಕಷ್ಟಗಳನ್ನು ಜಿಲ್ಲೆಯ ಜನರಿಗೆ ತಂದೊಡ್ಡಿದ್ದು ಅದರಲ್ಲೂ ಈ ಬಾರಿ ಚಿಕ್ಕಮಗಳೂರಿನ ಅನೇಕ ಸೇತುವೆಗಳು, ರಸ್ತೆ ಹಾಗೂ ಬಹುತೇಕ ಮನೆಗಳು ಹಾನಿಗೊಳಗಾಗಿದೆ. 

ಇದನ್ನೂ ಓದಿ : ಚಿಕ್ಕಮಗಳೂರು : ಮಹಿಳೆ ಮೇಲೆ ಹಲ್ಲೆ ನಡೆಸಿದ ಆರೋಪಿಗಳಿಗೆ ಬಾಂಡ್ ನೀಡುವಂತೆ ಆದೇಶಿಸಿದ ಕೋರ್ಟ್


ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೆರೇಕೊಡಿಗೆ ಮೇಲಿಬಿಲ್ರೆ ಗ್ರಾಮದ ದುಗ್ಗಪ್ಪ ಎಂಬುವವರ ಮನೆಯು ಮಳೆಯಿಂದ ಕುಸಿದು ಬಿದ್ದಿದೆ. ಮನೆಯಲ್ಲಿ ಮೂವರು ವಾಸಿಸುತ್ತಿದ್ದು ಮಳೆಯ ತೀವ್ರತೆಗೆ ಮನೆ ಕುಸಿದು ಬಿದ್ದು ಕೆಲ ವಸ್ತುಗಳು ನಾಶವಾಗಿದೆ. 

ದಾಖಲೆಗಳನ್ನು ಸಂಗ್ರಹಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ತಲುಪಿಸಲಾಗಿದೆ. ಸರ್ಕಾರದಿಂದ ಹಣ ಬಿಡುಗಡೆಯಾದ ಬಳಿಕದಲ್ಲಿ ಹಣ ತಲುಪಲಿದೆ  - ಅನೀಶ್ H.T,  ಗ್ರಾಮ ಲೆಕ್ಕಿಗ

ಘಟನಾ ಸ್ಥಳಕ್ಕೆ ಅಧಿಕಾರಿಗಳು ತೆರಳಿದ್ದು ಈ ಕುರಿತಾಗಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅತೀ ಶೀಘ್ರವಾಗಿ ಪರಿಹಾರ ಒದಗಿಸಿ ಮನೆಯನ್ನು ಪುನರ್ ನಿರ್ಮಾಣ ಮಾಡಲು ಸಹಕಾರ ನೀಡಬೇಕೆಂದು ಕುಟುಂಬಸ್ಥರು ಸರ್ಕಾರವನ್ನು ಹಾಗೂ ಜನಪ್ರತಿನಿಧಿಗಳನ್ನು ಆಗ್ರಹಿಸಿದ್ದಾರೆ.