ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮೆಗುಂದಾ ಹೋಬಳಿಯ ಉತ್ತಿನಗದ್ದೆ ಶಾಲೆಗೆ ಅಮ್ಮ ಫೌಂಡೇಶನ್ ವತಿಯಿಂದ, ಸಂಸ್ಥಾಪಕರಾದ ಸುಧಾಕರ್ ಎಸ್ ಶೆಟ್ಟಿ ಅವರು ಓರ್ವ ಶಿಕ್ಷಕರನ್ನು ನೇಮಕಗೊಳಿಸಿದ್ದಾರೆ.
ಸೂಕ್ತ ಮೂಲಭೂತ ಸೌಲಭ್ಯಗಳಿಲ್ಲದೆ ಜನರ ಗೋಳು ; ಬಾಣಂತಿಯನ್ನು ಕಿ.ಮೀ ಗಟ್ಟಲೆ ಹೆಗಲ ಮೇಲೆ ಹೊತ್ತು ಸಾಗಿದ ಸ್ಥಳೀಯರು
ಕಿರಿದಾದ ರಸ್ತೆಗಳನ್ನು ಹಾಗೂ ದೂರ ದೂರದ ಪ್ರದೇಶಗಳಲ್ಲಿ ಮನೆಗಳನ್ನು ಹೊಂದಿರುವ ಈ ಭಾಗದ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಕರ ಕೊರತೆಯಿಂದ ಉಂಟಾಗಿರುವ ಸಮಸ್ಯೆಯನ್ನು ಅರಿತು ಅಮ್ಮ ಫೌಂಡೇಶನ್ ಮುಖಾಂತರ ಓರ್ವ ಶಿಕ್ಷಕರನ್ನು ನೇಮಕಗೊಳಿಸಿ, ಅವರ ಸಂಬಳವನ್ನು ಅಮ್ಮ ಫೌಂಡೇಶನ್ ನಿಂದ ಭರಿಸುವುದಾಗಿ ಹೇಳಿದ್ದಾರೆ.
ಸ್ವಾತಂತ್ರ್ಯ ಪೂರ್ವದಲ್ಲಿರುವಂತೆ ಶೃಂಗೇರಿ ಕ್ಷೇತ್ರದ ಮೇಗುಂದಾ ಹೋಬಳಿಯ ಮುತ್ತಿನಗದ್ದೆಯ ಪರಿಸ್ಥಿತಿಯಿದೆ. ಮೂಲಭೂತ ಸೌಕರ್ಯಗಳಲ್ಲಿ ನೀಡುವ ಆದ್ಯತೆಯಲ್ಲಿ ಪ್ರಮುಖವಾದುದು ಶಿಕ್ಷಣ. ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸಹಕರಿಸಬೇಕಿದೆ. ಈ ನಿಟ್ಟಿನಲ್ಲಿ ಅಮ್ಮ ಫೌಂಡೇಶನ್ ಸದಾ ಈ ಭಾಗದ ವಿದ್ಯಾರ್ಥಿಗಳೊಂದಿಗಿರಲಿದೆ - ಸುಧಾಕರ್ ಎಸ್ ಶೆಟ್ಟಿ, ಸಂಸ್ಥಾಪಕರು, ಅಮ್ಮ ಫೌಂಡೇಶನ್
ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಶಾಲಾ ಬ್ಯಾಗ್ ಹಾಗೂ ಪುಸ್ತಕ ವಿತರಣೆ ನಡೆಸಿ ಈ ಕುರಿತು ಮಾತನಾಡಿದ ಅವರು 18 ಮಂದಿ ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಕಿಲೋಮೀಟರ್ ಅಂತರದಿಂದ ಮಕ್ಕಳು ಬರುತ್ತಾರೆ. ಶಿಕ್ಷಣದ ಅನಿವಾರ್ಯತೆ ಈ ಭಾಗದ ಗ್ರಾಮಗಳಿಗೆ ಬಹಳಷ್ಟಿದ್ದು ಅದನ್ನರಿತು ಶಿಕ್ಷಕರ ನೇಮಕ ಮಾಡಲಾಗಿದೆ, ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಕೊರತೆ ಉಂಟಾದರೂ ಅಥವಾ ವಿದ್ಯಾರ್ಜನೆಗೆ ಬೇಕಿರುವ ಅವಶ್ಯಕತೆಗಳನ್ನು ಅಮ್ಮ ಫೌಂಡೇಶನ್ ಮುಖಾಂತರ ಪೂರೈಸಲಾಗುವುದು ಎಂದರು.
ಶಾಲೆಗೆ ತಲುಪುವ ಮಾರ್ಗವೇ ಒಂದು ರೀತಿಯ ಸಾಹಸಮಯ ಪರಿಸ್ಥಿತಿಯಂತಹದ್ದು ಈ ಮಧ್ಯೆ 03 ಕಿ.ಮೀ ಅಂತರವನ್ನು ಕಾಲ್ನಡಿಗೆಯಲ್ಲಿ ನಡೆದು ವಿದ್ಯಾರ್ಥಿಗಳು ಜ್ಞಾನಾರ್ಜನೆಗಾಗಿ ಬರುತ್ತಾರೆ ಇಂತಹ ವಿದ್ಯಾರ್ಥಿಗಳಿಗೆ ಅವಶ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲು ಅಮ್ಮ ಫೌಂಡೇಶನ್ ಸದಾ ಸಿದ್ಧವಿದೆ ಎಂದರು. ಈ ಹಿಂದೆ ಕೊಪ್ಪ ತಾಲೂಕಿನ ಎರಡು ಸರ್ಕಾರಿ ಶಾಲೆಗೆ ಒಟ್ಟು ಮೂವರು ಶಿಕ್ಷಕರನ್ನು ಅಮ್ಮ ಫೌಂಡೇಶನ್ ಮುಖಾಂತರ ನೇಮಕಗೊಳಿಸಿ ಅವರ ಸಂಬಳವನ್ನು ಭರಿಸಿದ್ದಾರೆ.





0 Comments