ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ)  ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿ ಬಹುತೇಕ ಜಖಂಗೊಂಡಿರುವ ದುರ್ಘಟನೆ ಶೃಂಗೇರಿ ಹೊರವಲಯದಲ್ಲಿ ನಡೆದಿದೆ. 

ಇದನ್ನೂ ಓದಿ : ನಾಪತ್ತೆಯಾಗಿದ್ದ ಯುವಕನ ಶವ ಕವಲೇದುರ್ಗ ಕೆರೆಯಲ್ಲಿ ಪತ್ತೆ

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಅಡ್ಡಗದ್ದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾವಡಿಯಲ್ಲಿ ಈ ಘಟನೆ ನಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತಕ್ಕೀಡಾದ ವಾಹನವು ಅಡ್ಡಗದ್ದೆ ಸಮೀಪದವರದ್ದು ಎನ್ನಲಾಗಿದೆ. 

ಬಳಿಕದಲ್ಲಿ ವಾಹನವು ರಸ್ತೆಯ ಮಧ್ಯದಲ್ಲಿ ಮಗುಚಿ ಬಿದ್ದಿದೆ. ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು ಅದೃಷ್ಟವಶಾತ್ ಎಂಬಂತೆ ಮೂವರೂ ಕೂಡ ಪ್ರಾಣಾಪಾಯಗಳಿಂದ ಪಾರಾಗಿದ್ದು ಓರ್ವರಿಗೆ ಗಾಯಗಳಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆ ಸಂಭವಿಸುತ್ತಿದ್ದಂತೆಯೇ ಬೇರೆ ವಾಹನಗಳ ಸವಾರರು ಹಾಗೂ ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಬಹುತೇಕ ಜಖಂಗೊಂಡಿದೆ. ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ. 

ಶೃಂಗೇರಿ, ಕೊಪ್ಪ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು ಅಲ್ಲಲ್ಲಿ ಕೆಲ ಅವಘಡಗಳು ಸಂಭವಿಸುತ್ತಿದೆ. ಹೆಚ್ಚಿನ ತಿರುವುಗಳನ್ನು ಹೊಂದಿರುವ ಮಲೆನಾಡು ಭಾಗದ ರಸ್ತೆಗಳಲ್ಲಿ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಂಡು, ರಸ್ತೆ ನಿಯಮಗಳನ್ನು ಪಾಲಿಸಿ ನಿಧಾನವಾಗಿ ವಾಹನ ಸವಾರರು ವಾಹನಗಳ ಚಾಲನೆ ಮಾಡಬೇಕಿದೆ.


ಜಮೀರ್ ಮನೆ ಮೇಲೆ ಎಸಿಬಿ ದಾಳಿ: ಮುಸ್ಲಿಂ ಅಸೋಸಿಯೇಷನ್ ವತಿಯಿಂದ ಪ್ರತಿಭಟನೆ : 

ಚಿಕ್ಕಮಗಳೂರು ಮುಸ್ಲಿಂ ಅಸೋಸಿಯೇಷನ್ ವತಿಯಿಂದ ನಗರದ ಅಜಾದ್ ಪಾರ್ಕ್ ವೃತದಲ್ಲಿ ಶಾಸಕ ಜಮೀರ್ ಅಹಮದ್ ಖಾನ್ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿರುವುದನ್ನು ಖಂಡಿಸಿ ಪ್ರತಿಭಟನೆ ಮಾಡುವ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿದರು.

ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಲ್ಪಸಂಖ್ಯಾತರು ಹಾಗೂ ಅಲ್ಪಸಂಖ್ಯಾತ ನಾಯಕ ಜನಪ್ರತಿನಿಧಿಗಳ ಮೇಲೆ ಅತಿಯಾದ ದೌರ್ಜನ್ಯ ಎಸಗುತ್ತಿರುವುದನ್ನು ಖಂಡಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಜಹೋ ರಂಜನ್

ಅಲ್ಪಸಂಖ್ಯಾತ ನಾಯಕರು ಹಾಗೂ ಚಾಮರಾಜಪೇಟೆ ಶಾಸಕರಾದ  ಜಮೀರ್ ಅಹಮದ್ ಖಾನ್ ಅವರನ್ನು ಇಡಿ ಹಾಗೂ ಎಸಿಬಿ ಮುಖಾಂತರ ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಹತ್ತಿಕ್ಕುತ್ತಿರುವುದು ನೋಡಿದರೆ ಇದರ ಹಿಂದೆ ಸರ್ಕಾರಗಳು ಮುಂದೆ ಅಲ್ಪಸಂಖ್ಯಾತರ ಮತ್ತು ಜನಪ್ರತಿನಿಧಿಗಳಿಗೆ ರಾಜಕೀಯ ಹಾಗೂ ಆರ್ಥಿಕವಾಗಿ ದಮನಿಸುವ ಸಂಚು ರೂಪಿಸುತ್ತಿರುವುದು ಎದ್ದು ಕಾಣುತ್ತಿದೆ.


ಇಡಿ ಹಾಗೂ ಎಸಿಬಿ ಅವರು ಜನಸಾಮಾನ್ಯರಿಗೆ ಸಂವಿಧಾನಾತ್ಮಕವಾದ ನ್ಯಾಯ ನೀಡದೆ ಸಂವಿಧಾನದ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡುತ್ತಿರುವ ಕೆಲಸಕ್ಕೆ ಅವರು ಕೈ ಗೊಂಬೆಗಳಾಗಿ ಕೆಲಸ ಮಾಡುತ್ತಿರುವುದು ಕಾಣುತ್ತಿದೆ ಎಂದು ಆರೋಪ ಮಾಡಿದರು.

ರಾಜ್ಯ ಬಿಜೆಪಿ ಸರ್ಕಾರದ 40% ಕಮಿಷನ್ ಹಗರಣ, ಪಿಎಸ್ಐ ಹಗರಣ, ಪಠ್ಯಪುಸ್ತಕದಲ್ಲಿ ಗೊಂದಲ ಹೀಗೆ ಹಲವಾರು ಹಗರಣಗಳನ್ನು ಮರೆಮಾಚಲು ಇಂತಹ ದಾಳಿ ಮಾಡುತ್ತಿದ್ದಾರೆ. ಎಸಿಬಿಗೆ ಸಹ ಈ ಹಿಂದೆ ನ್ಯಾಯಾಲಯವು ಚೀಮಾರಿ ಹಾಕಿದ್ದರು ಸಹ ಬುದ್ದಿ ಕಲಿಯದೆ ಸಂವಿಧಾನ ಹಾಗೂ ಕಾನೂನು ಪಾಲಿಸಿದೆ ಅಲ್ಪಸಂಖ್ಯಾತ ನಾಯಕರು ಹಾಗೂ ಜನಪ್ರತಿನಿಧಿಗಳ ಮೇಲೆ ನಿರಂತರ ದಾಳಿ ನಡೆಸುತ್ತಿದ್ದಾರೆ.

ಇದನ್ನು ತಮ್ಮ ಗಮನಕ್ಕೆ ತಂದಿದ್ದು ದಯವಿಟ್ಟು ತಾವು ಈ ಕೂಡಲೇ ಮಧ್ಯಪ್ರವೇಶಿಸಿ ಸಾಮಾಜಿಕ ನ್ಯಾಯವನ್ನು ಹಾಗೂ ಸಂವಿಧಾನ ಮೌಲ್ಯವನ್ನು ಎತ್ತಿ ಹಿಡಿಯುವಂತೆ ಕೆಲಸ ಮಾಡಲು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಅಲ್ಪಸಂಖ್ಯಾತರ ನಾಯಕರು ಹಾಗೂ ಜನಪ್ರತಿನಿಧಿಗಳಿಗೆ ಕಾನೂನು ರಕ್ಷಣೆ ನೀಡಬೇಕೆಂದು ಮನವಿ ಪತ್ರದ ಮೂಲಕ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರಿಜ್ವಾನ್ ಖಾನ್ ಬಾಬರ್, ನಸಿರುಲ್ಲಾ ಜಮೀರ್ ನೈ ಮನ್ ಹಾಜರಿದ್ದರು.