ಇದನ್ನೂ ಓದಿ : ರಣಮಳೆ ಭಾರೀ ಗಾಳಿಗೆ ಧರೆಗುರುಳಿದ ಬೃಹತ್ ಗಾತ್ರದ ಮರಗಳು ಹಾಗೂ ವಿದ್ಯುತ್ ಕಂಬ
ರಾತ್ರಿಯ ವೇಳೆಯಲ್ಲಿ ಮುಸ್ಲಿಂ ಮಹಿಳೆಯಿದ್ದ ಮನೆಗೆ ತೆರಳಿದ್ದ ಕಾರಣಕ್ಕಾಗಿ ವ್ಯಕ್ತಿಯ ಮೇಲೆ ಹಲ್ಲೆಗೈದು ಅದನ್ನು ವೀಡಿಯೋ ಮಾಡಲಾಗಿದೆ, ವಿಡಿಯೋದಲ್ಲಿ ಹಣ ನೀಡುವಂತೆ ಒತ್ತಾಯಿಸಿರುವುದು ಸಹ ಕೇಳುತ್ತದೆ, ಅನೈತಿಕ ಪೊಲೀಸ್ ಗಿರಿ ನಡೆಸಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಚಿಕ್ಕಮಗಳೂರಿನ ಉಪ್ಪಳ್ಳಿಯ ರೌಡಿ ಶೀಟರ್ ಅಜೀಜ್ ಎಂಬಾತನು ಸಹ ಸಹಚರರೊಂದಿಗೆ ತೆರಳಿ ಹಲ್ಲೆಗೈದು ಹಣಕ್ಕೆ ಬೇಡಿಕೆಯಿಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.
ಚಿಕ್ಕಮಗಳೂರಿನ ದಂಟರಮಕ್ಕಿಯಲ್ಲಿ ವಾಸಿಸುವ, ಬೇಲೂರು ಮೂಲದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಲಾಗಿದ್ದು, ಮುಸ್ಲಿಂ ಮಹಿಳೆಯ ಜೊತೆಗೆ ಏಕಿದ್ದೆ ಎಂದು ನಿಂದಿಸಿ ಬಟ್ಟೆ ಬಿಚ್ಚಿಸಿ ಹೊಡೆದು ಅದನ್ನು ವೀಡಿಯೋ ಸಹ ಮಾಡಲಾಗಿದೆ.
ಹನಿಟ್ರ್ಯಾಪ್ ಶಂಕೆ: ವೀಡಿಯೋದಲ್ಲಿ ಈ ವಿಡಿಯೋ ಅನ್ನು ನಿನ್ನ ಹೆಂಡತಿಗೆ ಕಳಿಸಬೇಕಾ ಎಂದು ಬ್ಲ್ಯಾಕ್ ಮೇಲ್ ಮಾಡಿರುವುದು, ಹಾಗೆಯೇ ವೀಡಿಯೊ ಕೊನೆಯಲ್ಲಿ ಎಷ್ಟು ಕೊಡುತ್ತೀಯ ಎಂದು ಕೇಳಿರುವುದು ಸಹ ರೆಕಾರ್ಡ್ ಆಗಿದ್ದು. ಈ ತಂಡ ಪುರುಷನನ್ನು ಹನಿಟ್ರ್ಯಾಪ್ ಗೆ ಸಿಲುಕಿಸಿದೆಯಾ ಎಂಬ ಅನುಮಾನ ಸಹ ವ್ಯಕ್ತವಾಗುತ್ತಿದೆ.






0 Comments