ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಬಗ್ಗವಳ್ಳಿ ಗ್ರಾಮದ ಲೈನ್ ಮ್ಯಾನ್ ದೇವರಾಜು ಎಂಬ 33 ವರ್ಷ ಪ್ರಾಯದ ವ್ಯಕ್ತಿ ಮೃತ ದುರ್ದೈವಿ.
ಇದನ್ನೂ ಓದಿ : ಮೂಡಿಗೆರೆ : ಭೀಕರ ರಸ್ತೆ ಅಪಘಾತದಲ್ಲಿ ಯುವಕನ ದುರ್ಮರಣ
ಬೀರೂರಿನ ಹಿರಿಯಂಗಳ ಗ್ರಾಮದಲ್ಲಿ ಜಂಗಲ್ ಕಟ್ ಮಾಡಲು ತೆರಳಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದ್ದು ಜಂಗಲ್ ಕಟಿಂಗ್ ವೇಳೆ ಸ್ಪರ್ಶಿಸಿದ ವಿದ್ಯುತ್ ನಿಂದಾಗಿ ಸ್ಥಳದಲ್ಲೇ ದೇವರಾಜು ದುರ್ಮರಣವನ್ನಪ್ಪಿದ್ದಾರೆ.
ಘಟನಾ ಸಂಬಂಧ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೃತನನ್ನು ನೆನೆದು ಮನೆಯವರು ಹಾಗೂ ಸಂಬಂಧಿಕರು ಅತೀವವಾದ ದುಃಖವನ್ನು ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಕೆ.ಎನ್ ರಾಜಣ್ಣ ಅರಳು ಮರಳಿಗೆ ತುತ್ತಾಗಿದ್ದಾರೆ ; ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ಕಿಡಿ
ಶೃಂಗೇರಿ : ಭಾರತದ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಅವರ ಕುರಿತಾಗಿ ಕಾಂಗ್ರೆಸ್ ಮುಖಂಡ ಕೆ.ಎನ್ ರಾಜಣ್ಣ ನೀಡಿರುವ ಹೇಳಿಕೆಯನ್ನು ಖಂಡಿಸಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದೇಶದ ಮಾಜಿ ಪ್ರಧಾನಿ, ಹಿರಿಯ ರಾಜಕೀಯ ಮುತ್ಸದ್ಧಿಯಾದ ಹಾಗೂ ಜೆಡಿಎಸ್ ಪಕ್ಷದ ವರಿಷ್ಠರಾದ ಹೆಚ್.ಡಿ ದೇವೇಗೌಡ ಅವರ ಕುರಿತು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎನ್ ರಾಜಣ್ಣ ಅವರು ನಾಲಿಗೆ ಹರಿಬಿಟ್ಟು ಅವರ ಸಂಸ್ಕೃತಿಯನ್ನು ಬಿಂಬಿಸಿದ್ದಾರೆ. ಹಿರಿಯ ಮುತ್ಸದ್ದಿ ದೇವೇಗೌಡ ಅವರ ಕುರಿತಾಗಿ ಈ ರೀತಿಯ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವಂಥದ್ದಲ್ಲ, ಅವರು ಅರಳು ಮರಳಿಗೆ ತುತ್ತಾದಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ : https://forms.gle/APPtk8M3ZDk2oMka6
ಜಾತಿ ಬೇಧವನ್ನು ಮರೆತು, ಪಕ್ಷಗಳ ಅಂತರವನ್ನೂ ಮೀರಿ, ಭಾರತದ ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಸೇರಿದಂತೆ ಅನೇಕ ಗಣ್ಯರು ಗೌರವಿಸುವ ವ್ಯಕ್ತಿಯನ್ನು ಸ್ವತಃ ಕರ್ನಾಟಕದವರೇ ಆದ ರಾಜಣ್ಣನವರು ಇಂತಹ ಶ್ರೇಷ್ಠ ವ್ಯಕ್ತಿಯನ್ನು ಕಡೆಗಾಣಿಸಿ ಅವರ ಕುರಿತಾಗಿ ಟೀಕೆ ಮಾಡಿ ಮಾತನಾಡಿರುವುದು ಖಂಡನಾರ್ಹ ಎಂದರು.
ರಾಜಣ್ಣನವರ ಶೈಲಿಯಲ್ಲಿಯೇ ಅವರಿಗೆ ನಾವು ತಿರುಗೇಟು ನೀಡಬಹುದು ಆದರೆ ಅದರಿಂದಾಗಿ ನಮಗೂ ಅವರಿಗೂ ಯಾವುದೇ ವ್ಯತ್ಯಾಸಗಳಿರುವುದು ಕಂಡು ಬರುವುದಿಲ್ಲ ಅಂತೆಯೇ ಕಾಂಗ್ರೆಸ್ ಪಕ್ಷವು ತನ್ನ ಘನತೆಯನ್ನು ಉಳಿಸಿಕೊಳ್ಳುವ ಸಲುವಾಗಿ ಇಂತಹ ಕೀಳು ಮನಸ್ಥಿತಿ ಹೊಂದಿರುವ ಮುಖಂಡರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ರಾಜಕೀಯ ನಿವೃತ್ತಿ ಪಡೆಯುವಂತೆ ಆದೇಶಿಸಬೇಕೆಂದು ಆಗ್ರಹಿಸಿದ್ದಾರೆ.







0 Comments