ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕಾಮಗಾರಿ ಹಿನ್ನೆಲೆ ಮನೆಗಳಿಗೆ ಹಾನಿ ಉಂಟಾಗುತ್ತಿದೆ, ಮನೆ ಕುಸಿಯುವ ಭೀತಿ ಎದುರಾಗಿದೆ ಎಂದು ಸಾರ್ವಜನಿಕರು ತಮ್ಮ ಸಮಸ್ಯೆಯನ್ನು ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ : ಚಿಕ್ಕಮಗಳೂರು : ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ರೈತ

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೂಲಕ ಹಾದು ಹೋಗುವ ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169 ಅಗಲೀಕರಣಕ್ಕೆ ಸಂಬಂಧಿಸಿ ಕಾಮಗಾರಿಯು ಆರಂಭವಾಗಿದ್ದು, ಈ ಕಾಮಗಾರಿಯಿಂದಾಗಿ ಸಾರ್ವಜನಿಕರ ಮನೆಗಳಿಗೆ ಸಮಸ್ಯೆಯುಂಟಾಗಿದೆ ಮಳೆಗಾಲದ ಅವಧಿಯಲ್ಲಿ ಧರೆಯನ್ನು ತೆಗೆಯುತ್ತಿರುವ ಪರಿಣಾಮ ಮನೆಯು ಕುಸಿಯುವ ಭೀತಿ ಎದುರಾಗಿದೆ ತಡೆಗೋಡೆ ಇಲ್ಲದೆ ಇರುವುದೇ ಮುಖ್ಯ ಕಾರಣವಾಗಿದೆ ಎಂದು ಸ್ಥಳೀಯರು ತಮ್ಮ ಸಮಸ್ಯೆಯನ್ನು ವ್ಯಕ್ತಪಡಿಸಿದ್ದಾರೆ. 

ಮಳೆಯು ಕಡಿಮೆಯಾದ ಬಳಿಕದಲ್ಲಿ ತಡೆಗೋಡೆ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕಾಮಗಾರಿ ನಡೆಸಲಾಗುವುದು, ರಸ್ತೆಗೆ ಬಂದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯವು ನಡೆದಿದೆ - ನಟೇಶ್ A.E

ಈ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಧರೆಯ ಮಣ್ಣು ರಸ್ತೆಯ ಮೇಲೆ ನಿಂತಿದ್ದು ವಾಹನ ಸವಾರರಿಗೆ, ಹಾಗೂ ಈ ದಾರಿಯಲ್ಲಿ ಓಡಾಡುವವರಿಗೆ ಸಮಸ್ಯೆಯಾಗಿದೆ ಅತೀ ಶೀಘ್ರವಾಗಿ ತಡೆಗೋಡೆಗಳನ್ನು ನಿರ್ಮಾಣ ಮಾಡಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


ಹೆದ್ದಾರಿ ಅಗಲೀಕರಣ ಕಾಮಗಾರಿಯ ಸಲುವಾಗಿ ಮಳೆಗಾಲದಲ್ಲಿ ಧರೆ ತೆಗೆಯುವ ಕಾಮಗಾರಿಯನ್ನು ನಡೆಸುತ್ತಿರುವ ಕಾರಣ ಮನೆ ಕುಸಿಯುವ ಭೀತಿ ಎದುರಾಗಿದೆ, ಮಳೆಗಾಲದ ನಂತರದಲ್ಲಿ ತೆಗೆಯುವಂತೆ ಮನವಿ ಮಾಡಿದ್ದರೂ ಮನೆಯಲ್ಲಿರದ ವೇಳೆ ಕಾಮಗಾರಿ ನಡೆಸಿ ತೊಂದರೆಗೀಡು ಮಾಡಿದ್ದಾರೆ ತಡೆಗೋಡೆ ಇಲ್ಲದೇ ಇರುವುದು ಎದುರಾಗಿರುವ ಸಮಸ್ಯೆಗೆ ಮುಖ್ಯ ಕಾರಣವಾಗಿದೆ  - ಅರುಣ್, ಮನೆಯ ಮಾಲೀಕರು    

ಅಂತೆಯೇ ಉಳುವೆ, ಕಾವಡಿ, ಅಡ್ಡಗದ್ದೆ ಭಾಗದವರೆಗೂ ಈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಧರೆಕುಸಿತ ಉಂಟಾಗುವ ಸಾಧ್ಯತೆಗಳಿದ್ದು ಈ ಭಾಗದಲ್ಲಿ ವಾಹನಗಳಲ್ಲಿ ಸಂಚಾರ ಮಾಡುವವರು ಹೆಚ್ಚಿನ ಜಾಗರೂಕತೆವಹಿಸಿ ಸಂಚರಿಸಬೇಕು ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಈ ಕುರಿತು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.