ಹಾಸನ : (ನ್ಯೂಸ್ ಮಲ್ನಾಡ್ ವರದಿ) ಮಹಿಳೆಯೋರ್ವರ ಶವವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಈ ಸಂಬಂಧ ಅನುಮಾನ ವ್ಯಕ್ತಪಡಿಸಿರುವ ಆಕೆಯ ಸಂಬಂಧಿಕರು ಆಕೆಯ ಪತಿಯೇ ಮಹಿಳೆಯನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದಾರೆ.
ಬೆಂಗಳೂರಿನ ಖಾಸಗೀ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಧು ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುತ್ತಿದ್ದ ಇದರಿಂದಾಗಿ ದಂಪತಿಗಳ ಮಧ್ಯದಲ್ಲಿ ಸದಾ ಕಲಹ ಉಂಟಾಗುತ್ತಿತ್ತು ಎಂದು ಆರೋಪಿಸಿರುವ ಮೃತ ತೇಜಸ್ವಿನಿ ಕುಟುಂಬಸ್ಥರು ಆಕೆಯ ಪತಿ ಮಧು ವಿರುದ್ಧ ಕಿಡಿಕಾರಿದ್ದಾರೆ.
ಕಳಸ: ಭಾರಿ ಮಳೆಯಿಂದಾಗಿ ಮನೆ ಮೇಲೆ ಬಿದ್ದ ಮರ, ಕೂದಲೆಳೆ ಅಂತರದಲ್ಲಿ ದಂಪತಿ ಮಕ್ಕಳು ಪಾರು.
ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ : https://forms.gle/APPtk8M3ZDk2oMka6
ಮೃತ ತೇಜಸ್ವಿನಿ ಹಾಸನ ತಾಲೂಕಿನ ದೊಡ್ಡ ಮಂಡಿಗನ ಹಳ್ಳಿ ಗ್ರಾಮದವರು, ಪತಿ ಮಧು ಕ್ರಿಕೆಟ್ ಬೆಟ್ಟಿಂಗ್ ನ ವ್ಯಸನಿಯಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದ್ದು ದಂಪತಿಗಳ ನಡುವೆ ಬೆಟ್ಟಿಂಗ್ ಗೆ ಸಂಬಂಧಿಸಿದಂತೆ ಕಲಹ ಏರ್ಪಡುತ್ತಿತ್ತು ಅಂತೆಯೇ ಬೆಟ್ಟಿಂಗ್ ಆಡಲೆಂದು ಇಪ್ಪತ್ತು ಲಕ್ಷಕ್ಕೂ ಅಧಿಕ ಹಣವನ್ನು ಸಾಲ ಮಾಡಿಕೊಂಡಿದ್ದ ಎನ್ನಲಾಗಿದ್ದು ಇದಕ್ಕೆ ಸಂಬಂಧಿಸಿ ಪತ್ನಿ ಪ್ರಶ್ನೆ ಮಾಡಿದ್ದಕ್ಕೆ ಆಕೆಯನ್ನು ಪತಿಯೇ ಹತ್ಯೆ ಮಾಡಿದ್ದಾನೆ ಎಂದು ಮನೆಯವರು ದೂರಿದ್ದಾರೆ. ರೊಚ್ಚಿಗೆದ್ದ ಮನೆಯವರು ಮನೆಯವರು ಮಧು ಮನೆಮುಂದೆ ಮೃತಳ ಶವವನ್ನಿಟ್ಟು ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ. ಪೊಲೀಸರ ಸಂಪೂರ್ಣ ತನಿಖೆಯ ನಂತರ ಈ ಕುರಿತಾಗಿನ ಇನ್ನಷ್ಟು ಮಾಹಿತಿಗಳು ಲಭ್ಯವಾಗಲಿದೆ. ಮೃತಳನ್ನು ಕಳೆದುಕೊಂಡಿರುವ ಕುಟುಂಬಸ್ಥರು ಶೀಘ್ರವೇ ನಮಗೆ ನ್ಯಾಯ ದೊರೆಯಬೇಕೆಂದು ಆಗ್ರಹಿಸಿದ್ದಾರೆ.
ಶೃಂಗೇರಿ ಸರ್ಕಾರಿ ಆಸ್ಪತ್ರೆಗೆ ವೈದ್ಯರ ನಿಯೋಜನೆ ಮಾಡುವಂತೆ ಒತ್ತಾಯಿಸಿ ಹಾಗೂ ಸ್ಥಳಾವಕಾಶ ಸಮಸ್ಯೆ ಬಗೆಹರಿಸುವಂತೆ ಒತ್ತಾಯ :
ಸುಳ್ಳು ಭರವಸೆ ನಿಲ್ಲಿಸಿ ಶೃಂಗೇರಿ ತಾಲೂಕು ಆಸ್ಪತ್ರೆಗೆ ವೈದ್ಯರ ನಿಯೋಜನೆ ಮಾಡುವಂತೆ ಒತ್ತಾಯಿಸಿ ಹಾಗೂ ಸ್ಥಳಾವಕಾಶ ಸಮಸ್ಯೆ ಬಗೆಹರಿಸುವಂತೆ ಶೃಂಗೇರಿ ಸಾರ್ವಜನಿಕರು ಒತ್ತಾಯಿಸಿದ್ದು ಜುಲೈ 10ರೊಳಗೆ ಬೇಡಿಕೆ ಈಡೇರದೆ ಇದ್ದಲ್ಲಿ ಡಿ.ಎಚ್.ಓ ಕಛೇರಿ ಎದುರು ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಮಾಡುವುದಾಗಿ ತಿಳಿಸಿದ್ದಾರೆ.
ಶೃಂಗೇರಿ ತಾಲೂಕು ಆಸ್ಪತ್ರೆಯಲ್ಲಿ ಕಣ್ಣಿನ ವೈದ್ಯರು, ಕಿವಿ ಮೂಗು, ಗಂಟಲು ತಜ್ಞರು, ಸರ್ಜನ್, ಮಕ್ಕಳ ತಜ್ಞರು ಇಲ್ಲದೆ ಸಾರ್ವಜನಿಕರು ಕಳೆದ ಹಲವು ವರ್ಷಗಳಿಂದ ತೀವ್ರ ಅನಾನುಕೂಲ ಅನುಭವಿಸುತ್ತಿದ್ದಾರೆ. ಶೃಂಗೇರಿಗೆ ನೇಮಕವಾದ ಮಕ್ಕಳ ತಜ್ಞರನ್ನು ಸಹ ಕೊಪ್ಪ ಆಸ್ಪತ್ರೆಗೆ ವರ್ಗಾಯಿಸಿ ಕೋವಿಡ್ ಮುಗಿದ ನಂತರವೂ ಶೃಂಗೇರಿಗೆ ಕರ್ತವ್ಯ ನಿರ್ವಹಿಸಲು ಹಾಕಿರುವುದಿಲ್ಲ.
ಈ ಹಿಂದೆ ಹಲವು ಬಾರಿ ಡಿ.ಎಚ್‌ಓ ಹಾಗೂ ಜನಪ್ರತಿನಿಧಿಗಳಲ್ಲಿ ಈ ಬಗ್ಗೆ ಮನವಿ ಮಾಡಿದ್ದು, ತಕ್ಷಣವೇ ಡೆಪ್ಯುಟೇಶನ್ ಆಧಾರದ ಮೇಲೆ ಶೃಂಗೇರಿ ಆಸ್ಪತ್ರೆಗೆ ನಿಯೋಜಿಸುವುದಾಗಿ ತಿಳಿಸಿದ್ದರೂ ಸಹ ಭರವಸೆ ಸುಳ್ಳಾಗಿಸಿದ್ದಾರೆ.
ಆದಕಾರಣ ಈ ಬಗ್ಗೆ ಸಾರ್ವಜನಿಕರು ಸಹ ತೀವ್ರ ಅಸಮಾಧಾನ ಹೊಂದಿದ್ದು ಹೋರಾಟಕ್ಕೆ ತೀರ್ಮಾನಿಸಿದ್ದು ಜುಲೈ ತಿಂಗಳ 10ನೇ ತಾರೀಖಿನ ಒಳಗೆ ಡೆಪ್ಯುಟೇಶನ್ ಆಧಾರದ ಮೇಲೆ ನಿಯೋಜನೆಗೊಳಿಸದೆ ಇದ್ದಲ್ಲಿ ಹಾಗೂ ಆಸ್ಪತ್ರೆಗೆ ಸಂಬಂಧಿಸದ ಕೆಲವು ವಿಭಾಗಗಳನ್ನು ಈಗಿರುವ ಆಸ್ಪತ್ರೆಯ ಕಟ್ಟಡದಿಂದ ಬೇರೆಡೆಗೆ ವರ್ಗಾಯಿಸದೆ ಇದ್ದಲ್ಲಿ ನಿಮ್ಮ ಕಛೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಹೇಳಿದ್ದಾರೆ.
ಕೆಲವು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದು ಅವು ಇಂತಿವೆ:
⭕ಶೃಂಗೇರಿ ಆಸ್ಪತ್ರೆಗೆ ನೇಮಕವಾಗಿರುವ ಮಕ್ಕಳ ತಜ್ಞರನ್ನು ಕೊಪ್ಪಕ್ಕೆ ವರ್ಗಾಯಿಸಿದ್ದು ಶೃಂಗೇರಿಯಲ್ಲೇ ವಾರದಲ್ಲಿ ಕನಿಷ್ಠ 3ದಿನ ಕರ್ತವ್ಯ ನಿರ್ವಹಿಸತಕ್ಕದ್ದು.
⭕ ಕಣ್ಣಿನ ವೈದ್ಯರನ್ನು ವಾರದಲ್ಲಿ ಕನಿಷ್ಠ 2 ದಿನ ಶೃಂಗೇರಿಗೆ ನಿಯೋಜನೆ ಮಾಡಬೇಕು.
ಪ್ರಸ್ತುತ ಅಂಗವಿಕಲರ ಕಾರ್ಡ್ ಗೆ ಸಹ ಶೃಂಗೇರಿ ಜನರು ಕೊಪ್ಪಕ್ಕೆ ತೆರಳುತ್ತಿದ್ದಾರೆ.
⭕ ಸರ್ಜನ್ ಅವರನ್ನು ಕನಿಷ್ಠ ಒಂದು ದಿನ ಶೃಂಗೇರಿ ಆಸ್ಪತ್ರೆಗೆ ನಿಯೋಜನೆ ಮಾಡಬೇಕು.
⭕ಕಿವಿ ಮೂಗು ಗಂಟಲು ತಜ್ಞ ವೈದ್ಯರನ್ನು ವಾರದಲ್ಲಿ ಕನಿಷ್ಠ ಒಂದು ದಿನ ಶೃಂಗೇರಿ ಆಸ್ಪತ್ರೆಗೆ ನಿಯೋಜನೆ ಮಾಡಬೇಕು
ಹಾಗೆಯೇ ಈಗಿರುವ ಆಸ್ಪತ್ರೆಯಲ್ಲಿ ಸಾಕಷ್ಟು ಸ್ಥಳಾವಕಾಶ ಕೊರತೆ ಇದ್ದು ಅದರಿಂದಾಗಿ ಸಾರ್ವಜನಿಕರು ಸಾಕಷ್ಟು ಅನಾನುಕೂಲ ಅನುಭವಿಸುತ್ತಿದ್ದಾರೆ.
ಶೃಂಗೇರಿ ತಾಲೂಕು ಆಸ್ಪತ್ರೆಯಲ್ಲಿರುವ ಧರ್ಮಸ್ಥಳ ಪ್ರಕೃತಿ ಚಿಕಿತ್ಸಾಲಯ ಹಾಗೂ ಆಯುಷ್ ವಿಭಾಗವನ್ನು ಶೃಂಗೇರಿ ಪಟ್ಟಣದಲ್ಲಿ ಇರುವ ಹಳೆಯ ಸರ್ಕಾರಿ ಆಸ್ಪತ್ರೆಯ ಜಾಗಕ್ಕೆ ವರ್ಗಾಯಿಸುವುದು ಸೂಕ್ತವಾಗಿದ್ದು ಈ ಬಗ್ಗೆ ಹಿಂದೆಯೂ ಮನವಿ ಸಲ್ಲಿಸಿದ್ದೆವು. ತಕ್ಷಣವೇ ಎರಡೂ ವಿಭಾಗಗಳನ್ನು ಸ್ಥಳಾಂತರ ಮಾಡುವಂತೆ ಒತ್ತಾಯಿಸಿದ್ದಾರೆ.
ಹಾಗೆಯೇ ಶೃಂಗೇರಿ ಆಸ್ಪತ್ರೆ ಹಾಗೂ ಜನರ ಮೂಲಭೂತ ಸಮಸ್ಯೆಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರುತ್ತಿರುವ ಶೃಂಗೇರಿ ಕ್ಷೇತ್ರದ ರಾಜಕಾರಣಿಗಳಿಗೆ ಹಾಗೂ ಸರ್ಕಾರದ ಪ್ರತಿನಿಧಿಗಳಿಗೆ ಕಂಡಕಂಡಲ್ಲಿ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ.


.jpeg)




0 Comments