ಅಜ್ಜಂಪುರ : (ನ್ಯೂಸ್ ಮಲ್ನಾಡ್ ವರದಿ) ಕನ್ನಡ ಸಾಹಿತ್ಯ ಪರಿಷತ್ತನ್ನು ಹೋಬಳಿ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯ ವರೆಗೆ ವಿಸ್ತರಿಸಿ ಮನೆ ಮನದಲ್ಲಿ ಕನ್ನಡವನ್ನು ಹಚ್ಚ ಹಸಿರಾಗಿರಿಸುವಂತೆ ಮಾಡುವ ಸಲುವಾಗಿ ಕನ್ನಡ ಸಾಹಿತ್ಯ ಪರಿಷತ್ ನ ವಿವಿಧ ಘಟಕಗಳ ಉದ್ಘಾಟನಾ ಕಾರ್ಯಕ್ರಮ ಅಜ್ಜಂಪುರದಲ್ಲಿ ನಡೆಯಿತು.
ಇದನ್ನೂ ಓದಿ : ಚಿಕ್ಕಮಗಳೂರು : ಮಹಿಳೆ ಮೇಲೆ ಹಲ್ಲೆ ನಡೆಸಿದ ಆರೋಪಿಗಳಿಗೆ ಬಾಂಡ್ ನೀಡುವಂತೆ ಆದೇಶಿಸಿದ ಕೋರ್ಟ್
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪಟ್ಟಣದ ತರಳಬಾಳು ಸಮುದಾಯ ಭವನದಲ್ಲಿ ಅಜ್ಜಂಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಹೋಬಳಿ, ಗ್ರಾಮ ಪಂಚಾಯಿತಿ ಕಸಾಪ ಘಟಕಗಳ ಉದ್ಘಾಟನಾ ಸಮಾರಂಭ ಮತ್ತು ತಾಲ್ಲೂಕಿನ ಕಸಾಪ ಪದಾಧಿಕಾರಿಗಳಿಗೆ ಕಾರ್ಯಗಾರ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಈ ಕುರಿತಾಗಿ ಮಾತನಾಡಿದ ಸಾಹಿತಿ ಚಟ್ನಳ್ಳಿ ಮಹೇಶ್ ರಾಜ್ಯದಲ್ಲಿಯೇ ಪ್ರಥಮಬಾರಿಗೆ ಗ್ರಾಮ ಪಂಚಾಯಿತಿ ಘಟಕಗಳನ್ನು ಇಂದು ಬಹಳ ಸಂತಸ ಹಾಗೂ ಹೆಮ್ಮೆಯಿಂದ ಅಸ್ತಿತ್ವಕ್ಕೆ ತರಲಾಗುತ್ತಿದೆ. 2001 ರಲ್ಲಿ ಹರಿಕೃಷ್ಣ ಪುನರೂರು ರಾಜ್ಯಾಧ್ಯಕ್ಷರಾಗಿದ್ದು ಜಿಲ್ಲೆಯಲ್ಲಿ ಅಜ್ಜಂಪುರ ಜಿ. ಸೂರಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಹೋಬಳಿ ಘಟಕಗಳನ್ನು ರಾಜ್ಯದಲ್ಲಿ ಪ್ರಥಮ ಬಾರಿಗೆ ಪ್ರಾರಂಭಿಸಿದ ಕೀರ್ತಿ ನಮ್ಮ ಜಿಲ್ಲೆಗೆ ಸಲ್ಲುತ್ತದೆ. ಹಾಗೆಯೇ ಇದೀಗ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಪ್ರಥಮ ಬಾರಿಗೆ ಗ್ರಾಮ ಪಂಚಾಯಿತಿ ಘಟಕಗಳನ್ನು ಪ್ರಾರಂಭಿಸಿ ಮನೆ-ಮನಗಳಿಗೆ ಸಾಹಿತ್ಯವನ್ನು ಪರಿಚಯಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂಬುದಾಗಿ ಹಂಚಿಕೊಂಡರು.
ಮಹಿಳಾ ಘಟಕ, ಯುವ ಕಸಾಪ ಘಟಕಗಳೂ ಪ್ರಾರಂಭಿಸಿರುವುದು ಸಂತೋಷದ ಸಂಗತಿ. ಈ ರೀತಿಯ ಸಂಘಟನೆಯಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು. ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ ಕನ್ನಡದ ಅಸ್ಮಿತೆಗೆ ಧಕ್ಕೆ ಬಂದಾಗ ಯಾವುದೇ ಸಂದರ್ಭದಲ್ಲಿಯೂ ಕೂಡ ನಾಡು ನುಡಿಯ ರಕ್ಷಣೆಯ ಬಗ್ಗೆ ನಾವೆಲ್ಲರೂ ಸಂಘಟಿತರಾಗೋಣ. ನಮ್ಮ ಹಿಂದಿನ ಕನ್ನಡದ ಪರಂಪರೆ, ಇತಿಹಾಸವನ್ನು ರಕ್ಷಿಸುವಲ್ಲಿ ತಳಮಟ್ಟದಲ್ಲಿ ಕನ್ನಡವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅಜ್ಜಂಪುರದಲ್ಲಿ ಗ್ರಾಮ ಪಂಚಾಯಿತಿ ಘಟಕಗಳ ಸ್ಥಾಪನೆ ರಾಜ್ಯದಲ್ಲಿಯೇ ಹೊಸ ಶಕೆಯನ್ನು ಮೂಡಿಸಿದೆ ಎಂದು ತಿಳಿಸಿದರು.
ಕೊಪ್ಪ ತಾ ಕಸಾಪ ಅಧ್ಯಕ್ಷೆ ಎಸ್.ಎನ್. ಚಂದ್ರಕಲಾ ಚಿಕ್ಕಮಗಳೂರು ಜಿಲ್ಲಾ ಕಸಾಪ ನಡೆದು ಬಂದ ದಾರಿ ಹಾಗು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕ್ರಮ ಆಯೋಜನೆ ಮತ್ತು ನಿರ್ವಹಣೆಯ ಬಗ್ಗೆ ಪದಾಧಿಕಾರಿಗಳ ಕಾರ್ಯಗಾರದಲ್ಲಿ ಮಾತನಾಡಿ ಒಂದು ಕಾರ್ಯಕ್ರಮದ ಯಶಸ್ಸು ಆ ಕಾರ್ಯಕ್ರಮದ ನಿರೂಪಣೆ, ಸ್ವಾಗತ ವಂದನಾರ್ಪಣೆ ಹಾಗೂ ಉಪನ್ಯಾಸಗಳು ಮೈಲಿಗಲ್ಲಾಗಿರುತ್ತದೆ. ಆಗ ಮಾತ್ರ ನಾವು ಶೋತ್ರುಗಳನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಸಮಯವನ್ನು ನಿಗದಿಪಡಿಸಿಕೊಂಡು ಕಾರ್ಯಕ್ರಮ ಆಯೋಜಿಸುವುದು ಯಶಸ್ವಿ ಕಾರ್ಯಕ್ರಮದ ಪ್ರಮುಖ ಲಕ್ಷಣಗಳಾಗುತ್ತದೆ ಎಂದು ತಿಳಿಸಿದರು.
ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ :
https://forms.gle/APPtk8M3ZDk2oMka6
ಕಾರ್ಯಕ್ರಮದಲ್ಲಿ ತಾ ಕಸಾಪ ಗೌರವಾಧ್ಯಕ್ಷ ಎ.ಸಿ. ಚಂದ್ರಪ್ಪ ಮಾತನಾಡಿದರು, ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಜಿ.ಬಿ. ಪವನ್ ಪ್ರಾಸ್ತಾವಿಕವಾಗಿ ಮಾತನಾಡಿದರು, ತಾಲ್ಲೂಕು ಕಸಾಪ ಅಧ್ಯಕ್ಷ ಕೆ.ಹೆಚ್. ರಾಜಣ್ಣ, ತಾ. ಮಹಿಳಾ ಘಟಕ ಅಧ್ಯಕ್ಷೆ ಮುಗುಳಿ ಲಕ್ಷ್ಮೀದೇವಮ್ಮ, ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ವೆಂಕಟೇಶ್, ಜಿಲ್ಲಾ ಮಹಿಳಾ ಘಟಕ ಗೌರವಾಧ್ಯಕ್ಷೆ ನಿರ್ಮಲ ಮಂಚೇಗೌಡ, ಅಧ್ಯಕ್ಷೆ ಸವಿತಾ ಸತ್ಯನಾರಾಯಣ, ಪ್ರಧಾನ ಸಂಚಾಲಕಿ ಎಂ.ಎಸ್. ವಿಶಾಲಾಕ್ಷಮ್ಮ, ಕಸಬಾ ಹೋಬಳಿ ಅಧ್ಯಕ್ಷ ಮಂಜುನಾಥ್, ಗಾಯಿತ್ರಮ್ಮ, ಶಾರದಮ್ಮ, ಟಿ.ಈ ಮಂಜುಳ, ಪುಣ್ಯವತಿ ಹಾಗು ವಿವಿಧ ತಾಲ್ಲೂಕು ಕಸಾಪ ಘಟಕ ಅಧ್ಯಕ್ಷರುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.


.jpeg)



0 Comments