ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ)  ಶೃಂಗೇರಿ ಭಾಗದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು ಮರಗಳು ರಸ್ತೆಗೆ ಅಡ್ಡಲಾಗಿ ಉರುಳುವುದು, ಧರೆ ಕುಸಿತ  ಸೇರಿದಂತೆ ಅಲ್ಲಲ್ಲಿ ಕೆಲ ಅವಘಡಗಳು ಸಂಭವಿಸಿದೆ. 

ಶೃಂಗೇರಿ ತಾಲೂಕಿನ ಬೆಳಂದೂರು ಗ್ರಾಮದ ಹಾಸ್ಟೆಲ್ ಸರ್ಕಲ್ ನೇರಳೆಕುಡಿಗೆ ಗೋಪಾಲ ಕೃಷ್ಣ ಎಂಬುವವರ ಮನೆಯ ವರಾಂಡ ಮಳೆಯಿಂದಾಗಿ ಕುಸಿಯುವ ಸ್ಥಿತಿಯಲ್ಲಿದ್ದು ಈ ಭಾಗವು ಕುಸಿದಲ್ಲಿ ಮನೆಗೆ ಸಂಪೂರ್ಣ ಹಾನಿಯಾಗಲಿದೆ, ಈ ಕುರಿತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಹಾಗೂ ಈ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ಅವರು ಜಿಲ್ಲಾಧಿಕಾರಿಗಳನ್ನು ಕೋರಿದ್ದಾರೆ. 

ಗೋಪಾಲ ಕೃಷ್ಣ ಅವರ ಪರಿವಾರವು ಆರ್ಥಿಕವಾಗಿ ಹಿಂದುಳಿದವರಾಗಿರುವುದರಿಂದ ಸಂಬಂಧಿಸಿದ ಅಧಿಕಾರಿಗಳನ್ನು ತ್ವರಿತಗತಿಯಲ್ಲಿ ಸ್ಥಳ ಪರಿಶೀಲನೆ ಗೆ ಕಳುಹಿಸಿ ಈ ಕುರಿತಾಗಿ ಕ್ರಮ ಕೈಗೊಳ್ಳುವಂತೆ ಮಾನ್ಯ ಜಿಲ್ಲಾಧಿಕಾರಿಗಳಾದ ಕೆ.ಎನ್ ರಮೇಶ್ ಅವರನ್ನು ಕೋರಿದ್ದಾರೆ. 

ಘಟನಾ ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದು, ಮಳೆ ಹೆಚ್ಚಾಗಿರುವುದರಿಂದ ಸುರಕ್ಷತೆಯನ್ನು ನೋಡಿಕೊಂಡು ವಾಸಮಾಡುವಂತೆ ಮನೆಯವರಿಗೆ ತಿಳಿಸಲಾಗಿದೆ. ಅಗತ್ಯ ಸಂದರ್ಭದಲ್ಲಿ ನಮ್ಮ ಅಧಿಕಾರಿಗಳ ತಂಡವು  ಅವರ ಕ್ಷೇಮಕ್ಕಾಗಿ ಕಾರ್ಯ ನಿರ್ವಹಿಸುತ್ತದೆ - ಗೌರಮ್ಮ, ತಹಸೀಲ್ದಾರ್, ಶೃಂಗೇರಿ ತಾಲೂಕು

ಆರಂಭಗೊಂಡ ಮಳೆಗೆ ಮಲೆನಾಡಿಗರ ಜೀವನ ಅಸ್ತವ್ಯಸ್ತವಾಗಿದ್ದು, ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೆಲ ಮನೆಗಳಿಗೆ ಹಾನಿಯಾಗಿದೆ ಹಾಗೂ ಪ್ರವಾಹ ಪರಿಸ್ಥಿತಿ ಎದುರಾಗಿದೆ, ಶೃಂಗೇರಿಯ ಬೈಪಾಸ್ ರಸ್ತೆ ತುಂಗಾ ನದಿಯ ಪ್ರವಾಹಕ್ಕೆ ಮುಳುಗಡೆಯಾಗಿದೆ.   

ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ : https://forms.gle/APPtk8M3ZDk2oMka6


ಕಳಸ: ಭಾರಿ ಮಳೆಯಿಂದಾಗಿ ಮನೆ ಮೇಲೆ ಬಿದ್ದ ಮರ, ಕೂದಲೆಳೆ ಅಂತರದಲ್ಲಿ ದಂಪತಿ ಮಕ್ಕಳು ಪಾರು.

ಚಿಕ್ಕಮಗಳೂರು :  ಮಲೆನಾಡಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವು ಅವಾಂತರಗಳು ಸೃಷ್ಟಿಯಾಗಿದೆ. ಇಂದೂ ಸಹ ಮಳೆ ಮುಂದುವರಿದಿದ್ದು ಬಿರುಗಾಳಿ ಆರ್ಭಟಕ್ಕೆ ಮರ ಬಿದ್ದು ಮನೆಯೊಂದು ಸಂಪೂರ್ಣ ಜಖಂ ಆಗಿದೆ.

ಕಳಸ ತಾಲೂಕಿನ ಹೆಮ್ಮಕ್ಕಿ ಗ್ರಾಮದ ಈ ಘಟನೆ ನಡೆದಿದ್ದು ಮ, ಕೂಲಿ ಕಾರ್ಮಿಕ ಕ್ಲೆಮೆಂಡ್ ಡಿಸೋಜ ಎಂಬುವರ ಮನೆ ಮೇಲೆ  ಮರ ಬಿದ್ದ ಪರಿಣಾಮ ಮನೆ ಜಖಂಗೊಂಡಿದೆ.


ಬೆಳಗಿನ ಜಾವ ಸುಮಾರು 4.30ರ ಸಮಯದಲ್ಲಿ ಮರ ಬಿದ್ದಿದ್ದು ಮನೆಯಲ್ಲಿದ್ದ ದಂಪತಿ ಹಾಗೂ ಇಬ್ಬರು ಮಕ್ಕಳು ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಮನೆಯ ಮೇಲೆ ಮರಗಳು ಬೀಳುವ ಸಂಧರ್ಭವಿರುವ ಜನರು ಅರಣ್ಯ ಇಲಾಖೆ ಹಾಗೂ ಸಂಬಂಧಿಸಿದ ಇಲಾಖೆಯ ನೆರವಿನೊಂದಿಗೆ ಮುಂಜಾಗ್ರತಾ ಕ್ರಮ ಕೈಗೊಂಡು ಅಪಾಯಕಾರಿ ಮರಗಳನ್ನು ತೆರವುಗೊಳಿಸಿ ಜಾಗರೂಕತೆ ವಹಿಸುವುದು ಸೂಕ್ತ.