ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗದ ಜನರಿಗೆ ನಿರಂತರವಾಗಿ ಸೇವೆ ನೀಡುತ್ತಾ ಬಂದು ಕಳೆದ ಎರಡು ವರ್ಷಗಳಿಂದ ನಿಂತಿರುವ ಸಹಕಾರ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಚುನಾವಣೆ ಇಂದು ಕೊಪ್ಪದಲ್ಲಿ ನಡೆಯಿತು. 

ಸಹಕಾರ ಸಾರಿಗೆಯದ್ದು ಆತ್ಮಹತ್ಯೆಯಲ್ಲ, ವ್ಯವಸ್ಥಿತ ಕೊಲೆ’ ನ್ಯೂಸ್ ಮಲ್ನಾಡ್ | TCS Bus Ground Report

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ಸಹಕಾರ ಸಾರಿಗೆ ಸಂಸ್ಥೆಯ ನೌಕರರ ವಸತಿ ಗೃಹದಲ್ಲಿ ನಡೆದ ಸಹಕಾರ ಸಾರಿಗೆ ಸಂಸ್ಥೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಸುಬ್ರಮಣ್ಯ ಹಾಗೂ ಉಪಾಧ್ಯಕ್ಷರಾಗಿ ಜಯಪ್ರಕಾಶ್ ಅವರು ಅವಿರೋಧವಾಗಿ ಇಂದು ಆಯ್ಕೆಯಾದರು.

ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ : 

https://forms.gle/APPtk8M3ZDk2oMka6


ಆಯ್ಕೆಗೊಂಡ ನೂತನ ಪದಾಧಿಕಾರಿಗಳಿಗೆ ಸಹಕಾರ ಸಾರಿಗೆ ಸಂಸ್ಥೆಯ ನಿರ್ದೇಶಕರು ಹಾಗೂ ಸಂಸ್ಥೆಯ ಕಾರ್ಮಿಕರು ಅಭಿನಂದನೆಗಳನ್ನು ಸಲ್ಲಿಸಿ ಹಾರೈಸಿದ್ದಾರೆ. 

ಕಾರ್ಮಿಕರಲ್ಲಿ ಮೂಡಿದ ಹೊಸತನದ ವಿಶ್ವಾಸ : 

ಸಂಸ್ಥೆಯು ಆರ್ಥಿಕ ಸಂಕಷ್ಟದಲ್ಲಿದೆ ಎಂಬ ನೆಪವನ್ನು ಒಡ್ಡಿ ಸಹಕಾರ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ನಿಲ್ಲಿಸಿ ಎರಡು ವರ್ಷಕ್ಕೂ ಅಧಿಕ ಸಮಯ ಕಳೆದಿದ್ದು ಸಂಸ್ಥೆಯನ್ನು ಪುನರಾರಂಭಮಾಡಬೇಕೆಂದು ಆಗ್ರಹಿಸಿ ಸಂಸ್ಥೆಯ ಕಾರ್ಯನಿರ್ವಹಿಸಿದ ಕಾರ್ಮಿಕರು ಅನಿರ್ಧಿಷ್ಟಾವಧಿ ಮುಷ್ಕರ ಹಾಗೂ ಪ್ರತಿಭಟನೆಯನ್ನು ಕೊಪ್ಪದ ತಾಲೂಕು ಕಚೇರಿ ಎದುರು ನಡೆಸಿದ್ದರು. ಪ್ರಸ್ತುತ ಅವರ ಹೋರಾಟಕ್ಕೆ ಜಯ ಸಂದಿದ್ದು ಸಂಸ್ಥೆಯು ಅತೀ ಶೀಘ್ರದಲ್ಲಿ ಪುನರಾರಂಭಗೊಳ್ಳುವ ಭರವಸೆಯಲ್ಲಿ ಪದಾಧಿಕಾರಿಗಳು ಹಾಗೂ  ಕಾರ್ಮಿಕರಿದ್ದಾರೆ.