ಶೃಂಗೇರಿ / ದೆಹಲಿ : (ನ್ಯೂಸ್ ಮಲ್ನಾಡ್ ವರದಿ) ಭಾರತದ ಸನ್ಮಾನ್ಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರೊಂದಿಗೆ ಶೃಂಗೇರಿಯ ಪುರೋಹಿತರು ಇಂದು ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.
ಇಂದು ದೆಹಲಿಯಲ್ಲಿ ನಡೆದ ನೂತನ ಸಂಸತ್ ಭವನದ ಮೇಲಿನ ರಾಷ್ಟ್ರ ಲಾಂಛನದ ಅನಾವರಣ ಪೂಜಾ ಕೈಂಕರ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಶೃಂಗೇರಿಯ ಋಷ್ಯಶೃಂಗ ಭಟ್ ರವರು ಭಾಗಿಯಾದರು.
ಇದನ್ನೂ ನೋಡಿ : ಭಾರೀ ಮಳೆಯಿಂದಾಗಿ ಅಪಾಯದ ಮಟ್ಟವನ್ನು ಮೀರಿ ಹರಿದ ತುಂಗೆ ! ಪ್ರವಾಹದ ವೀಡಿಯೋ ನೋಡಿ
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮರ್ಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಂಡಘಟ್ಟ ಗ್ರಾಮದ ದೇವರ ಮನೆಯವರಾದ ಋಷ್ಯಶೃಂಗ ಭಟ್ ಶೃಂಗೇರಿಯ ರಾಜೀವ್ ಗಾಂಧಿ ವಿದ್ಯಾಪೀಠ ಸಂಸ್ಕೃತ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ, ಶೃಂಗೇರಿ ಶಾರದಾ ಮಠದ ಕಛೇರಿಯಲ್ಲಿ ಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸಿ ಕಳೆದ 12 ವರ್ಷಗಳಿಂದ ದೆಹಲಿಯ ಶೃಂಗೇರಿ ಶಂಕರ ಮಠದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶೃಂಗೇರಿಯ ಉಭಯಶ್ರೀಗಳ ಆಶೀರ್ವಾದದಿಂದ ಹಾಗೂ ಶ್ರೀಮಠದ ಆಡಳಿತಾಧಿಕಾರಿಗಳ ಕೃಪೆಯಿಂದಾಗಿ ಪ್ರಧಾನಿಯವರೊಂದಿಗೆ ನೂತನ ಸಂಸತ್ ಭವನದ ರಾಷ್ಟ್ರ ಲಾಂಛನದ ಅನಾವರಣ ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದೇನೆ, ಇದು ನನ್ನ ಪುಣ್ಯ, ಹಿಂದೆಯೂ ನಾನು ನೂತನ ಪಾರ್ಲಿಮೆಂಟ್ ಭವನದ ಭೂಮಿಪೂಜೆ ಸಮಯಲ್ಲಿ ಭಾಗವಹಿಸಿದ್ದೆ. ನನಗೆ ಅವಕಾಶ ಕಲ್ಪಿಸಿದ ಶ್ರೀ ಮಠ ಶೃಂಗೇರಿ ಮರೆಯಲು ಸಾಧ್ಯವಿಲ್ಲ. ಪ್ರಧಾನಮಂತ್ರಿಗಳೊಂದಿಗಿದ್ದ ಸಮಯ ಹೆಚ್ಚಿನ ಸಂತಸ ತಂದಿದೆ - ಋಷ್ಯಶೃಂಗ ಭಟ್, ದೇವರಮನೆ ಗಂಡಘಟ್ಟ ,ದೆಹಲಿ ಶಂಕರ ಮಠದ ವ್ಯವಸ್ಥಾಪಕರು
ಇಂದು ಬೆಳಗ್ಗೆ ದೆಹಲಿಯ ಸಂಸತ್ತಿನ ಕಟ್ಟಡದ ಮೇಲಿರುವ ರಾಷ್ಟ್ರ ಲಾಂಛನದ ಪೂಜಾ ಕೈಂಕರ್ಯ ನೆರವೇರಿದ್ದು, ಬೆಳಗ್ಗೆ 9.30 ರಿಂದ 10.30 ರ ವರೆಗೆ ನಡೆದ ಈ ಪೂಜೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಶೃಂಗೇರಿಯ ಋಷ್ಯಶೃಂಗ ಭಟ್ ಅವರು ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿದ್ದಾರೆ.
ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ : https://forms.gle/APPtk8M3ZDk2oMka6
ಹಣೆಗೆ ತಿಲಕವಿಡುವ ಫೋಟೋ ವೈರಲ್ :
ಪೂಜಾ ಕೈಂಕರ್ಯದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅರ್ಚಕರಾದ ಋಷ್ಯಶೃಂಗ ಭಟ್ ಅವರು ಸಂಪ್ರದಾಯದಂತೆ ಕುಂಕುಮವನ್ನಿಟ್ಟು ಹರಸಿದರು. ಶೃಂಗೇರಿ ಶ್ರೀ ಮಠದಿಂದ ಪ್ರಧಾನಿಗಳಿಗೆ ಕುಂಕುಮ, ಅಕ್ಷತೆ ಹಾಗೂ ಕೇಸರಿ ಶಾಲನ್ನು ಕಳುಹಿಸಲಾಗಿದ್ದು, ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಸಹ ಪ್ರಧಾನ ಮಂತ್ರಿಗಳಿಗೆ ನೀಡಲಾಗಿದೆ. ಮೋದಿ ಜೀ ಹಣೆಗೆ ಕುಂಕುಮವಿಡುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅನೇಕರು ಈ ಫೋಟೋವನ್ನು ಹೆಚ್ಚಿನದಾಗಿ ಶೇರ್ ಮಾಡುತ್ತಿದ್ದಾರೆ.






0 Comments