ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶ್ರೀ ಜೆಸಿಬಿಎಂ ಕಾಲೇಜು ಶೃಂಗೇರಿಯಲ್ಲಿ ಇನ್ವೆಸ್ಟರ್ಸ್ ಕ್ಲಬ್ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿ ದೆಸೆಯಲ್ಲೇ ಉತ್ತಮವಾಗಿ ಷೇರು ಮಾರುಕಟ್ಟೆಯ ಕುರಿತು ಜ್ಞಾನಾರ್ಜನೆ ಮಾಡಿಕೊಂಡು ತನ್ಮೂಲಕ ಮುಂದಿನ ಭವಿಷ್ಯದಲ್ಲಿ ಹೊಸ ಹೊಸ ಆಶಾದಾಯಕ ಕನಸುಗಳನ್ನು ಸಾಕಾರಗೊಳಿಸುವಲ್ಲಿ ವಿದ್ಯಾರ್ಥಿಗಳು ಸಫಲರಾಗಲಿ ಎಂದು ಉದ್ಘಾಟಕರಾದ ಹಾಗೂ ನಿವೃತ್ತ ಪ್ರಾಧ್ಯಾಪಕರಾದ ಪ್ರೊ ಶ್ರೀನಿವಾಸ್ ರಾವ್ ಹಾರೈಸಿದರು. 

ಶೃಂಗೇರಿ: ಜಗದ್ಗುರುಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಕಮೆಂಟ್ ಮಾಡಿದ್ದ ಕಿಡಿಗೇಡಿ ಮುನ್ನಾ ಅಜರ್ ಗೆ 3 ವರ್ಷ ಜೈಲು ಶಿಕ್ಷೆ


ವಿದ್ಯಾರ್ಥಿ ದೆಸೆಯಲ್ಲೇ ಷೇರು ಮಾರುಕಟ್ಟೆ ಬಗ್ಗೆಯ ಅರಿವು, ಅದರ ಮಹತ್ವಗಳ ಬಗ್ಗೆ ಉದ್ಘಾಟಕರು ಮಾತನಾಡಿದರು. ಷೇರು ಮಾರುಕಟ್ಟೆಯ ತಿಳುವಳಿಕೆ ಹೇಗೆ ಭವಿಷ್ಯದಲ್ಲಿ ಉಪಯೋಗಕ್ಕೆ ಬರಲಿದೆ ಎಂಬ ಬಗ್ಗೆ ಕಾಲೇಜಿನ ಪ್ರಾಂಶುಪಾಲರಾದ ಡಾ ಎಂ ಸ್ವಾಮಿ ವಿವರಿಸಿದರು. ಇನ್ವೆಸ್ಟರ್ಸ್ ಕ್ಲಬ್ ನ ಸಂಚಾಲಕರಾದ ರಾಘವೇಂದ್ರ ಎಂ ಪಿ, ಅರ್ಥ ಶಾಸ್ತ್ರ ಉಪನ್ಯಾಸಕರಾದ ಪ್ರೊ ವಿದ್ಯಾಧರ್, ವಿಧ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿಯಾದ ಪ್ರೊ ಪ್ರಕಾಶ್ ಕೆ ಪಿ, IQAC ಸಂಯೋಜಕರಾದ ಪ್ರೊ ನಾಗಭೂಷಣ್, ಇನ್ವೆಸ್ಟರ್ ಕ್ಲಬ್ ನ ಅಧ್ಯಕ್ಷರಾದ ಗಣೇಶ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕೊಡವ ಮಹಿಳೆಯರ ಕುರಿತಾಗಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ಆರೋಪಿಯ ಬಂಧನ :

ಕಾವೇರಿ ಮಾತೆಗೆ ಹಾಗೂ ಕೊಡವ ಮಹಿಳೆಯರ ಕುರಿತಾಗಿ ಅವಹೇಳನಕಾರಿ ಪೋಸ್ಟ್ ನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ ಆರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. 

ಈ ಪ್ರಕರಣದ ಪ್ರಮುಖ ಆರೋಪಿಯನ್ನು  ಕೊಡಗು ಜಿಲ್ಲೆ ವಿರಾಜಪೇಟೆ ಪಾರಾಂಗಾಲ ಗ್ರಾಮದ ಕೆದಮುಳ್ಳೂರು ನಿವಾಸಿ ಕೆ.ಸಿ. ದಿವಿನ್‌ ದೇವಯ್ಯ (29) ಎಂದು ಗುರುತಿಸಲಾಗಿದೆ. ಕೆಲ ದಿನಗಳ ಹಿಂದೆ ಕಾವೇರಿ ಮಾತೆ ಹಾಗೂ ಕೊಡವ ಮಹಿಳೆಯರ ಕುರಿತಾಗಿ ಆಕ್ಷೇಪಾರ್ಹ ಪೋಸ್ಟ್ ನ್ನು ಈ ಯುವಕ ಹಾಕಿದ್ದ. ಈ ಪೋಸ್ಟ್ ನ ವಿರುದ್ಧವಾಗಿ ಕೊಡಗಿನ ಅನೇಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಆತನ ಬಂಧನಕ್ಕಾಗಿ ಆಗ್ರಹಿಸಿದ್ದರು. 


ಪ್ರಸ್ತುತ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಕೃತ್ಯಕ್ಕೆ ಬಳಸಿದ ಮೊಬೈಲ್‌ ಫೋನ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೀವಿನ್ ದೇವಯ್ಯ ಮುಸ್ಲಿಂ ಯುವಕನ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ಅವಹೇಳನಕಾರಿ ಪೋಸ್ಟ್ ಮಾಡಿದ್ದ. ಆರೋಪಿಯ ಕುತಂತ್ರ ಕೊನೆಗೂ ಪೊಲೀಸ್ ತನಿಖೆಯಲ್ಲಿ ಬಯಲಾಗಿದ್ದು, ಈಗ ದೀವಿನ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ . 

ಸೋಮವಾರ ಬೃಹತ್ ಪ್ರತಿಭಟನೆ ನಡೆಸಲು ಕೊಡಗಿನ ಹಲವು ಸಂಘಟನೆಗಳು ಸಜ್ಜಾಗಿದ್ದವು. ಆರೋಪಿ ಬಂಧನ ಹಿನ್ನಲೆ ಸಂಘಟನೆಗಳು‌ ಪ್ರತಿಭಟನೆ ಕೈ ಬಿಟ್ಟಿವೆ. ಕೊಡಗು ಸೇರಿದಂತೆ ವಿವಿಧ ಠಾಣೆಗಳಲ್ಲಿ ಈ ಕುರಿತಾಗಿ ಪ್ರಕರಣ ದಾಖಲಾಗಿತ್ತು. ಆರೋಪಿಯ ಬಂಧನದಿಂದಾಗಿ ಎಲ್ಲಾ ಸಂಘಟನೆಗಳು ಪ್ರತಿಭಟನೆಯನ್ನು ಕೈಬಿಟ್ಟಿದೆ.