ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಇಂದು ತೆರೆಗೆ ಅಬ್ಬರಿಸಿದ್ದು, ಸಿನಿಮಾ ಪ್ರದರ್ಶನದ ವೇಳೆಯೇ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರಿನ ಮಿಲನ ಥಿಯೇಟರ್ ಬಳಿ ಕ್ಷುಲ್ಲಕ ಕಾರಣಕ್ಕಾಗಿ ಎರಡು ಗುಂಪುಗಳ ಯುವಕರು ಹೊಡೆದಾಡಿಕೊಂಡಿದ್ದಾರೆ. (ವೀಡಿಯೋ ನೋಡಿ)
ಬ್ರೇಕಿಂಗ್ ನ್ಯೂಸ್; ಚಿಕ್ಕಮಗಳೂರಿನಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ, ಲಾಂಗ್ ನಲ್ಲಿ ಯುವಕನ ಮೇಲೆ ಹಲ್ಲೆ#Chikkamagaluru #NewsMalnad pic.twitter.com/yqSUEXFJXU
— News Malnad (@NewsMalnadMedia) July 28, 2022
ಎರಡು ಗುಂಪುಗಳ ನಡುವೆ ಜಗಳ ಉಂಟಾಗಿದ್ದು, ಒಂದು ಗುಂಪಿನ ಯುವಕ ಭರತ್ ಎಂಬಾತನ ಮೇಲೆ ಮತ್ತೊಂದು ಗುಂಪಿನ ಯುವಕರು ಲಾಂಗ್ನಿಂದ ಹಲ್ಲೆ ಮಾಡಿದ್ದಾರೆ. ಬಳಿಕ ಯುವಕ ನೆಲಕ್ಕೆ ಬಿದ್ದು ಅಂಗಲಾಚಿದ್ರೂ ಬಿಡದೆ ಮಚ್ಚಿನಿಂದ ಬೀಸಿದ್ದಾರೆ.
ಸದ್ಯ ಮಚ್ಚಿನ ಏಟಿನಿಂದ ತೀವ್ರವಾಗಿ ಗಾಯಗೊಂಡಿರೋ ಭರತ್ನನ್ನು ಹಾಸನ ಜಿಲ್ಲಾ ಆಸ್ಪತ್ಸೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕೃತ್ಯವೂ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.





0 Comments