ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಮೃತ ವ್ಯಕ್ತಿಯೋರ್ವರ ದೇಹವನ್ನು ಅಂತ್ಯಕ್ರಿಯೆಯ ಬಳಿಕದಲ್ಲಿ ಸ್ಮಶಾನದಿಂದ ಮರಣೋತ್ತರ ಪರೀಕ್ಷೆಗಾಗಿ ಅನುಮಾನದ ಮೇರೆಗೆ ತೆಗೆದುಕೊಂಡು ಹೋಗಿರುವ ವಿಚಿತ್ರ ಘಟನೆಯೊಂದು ಶಿವಮೊಗ್ಗದಲ್ಲಿ ನಡೆದಿದೆ.
ಇದನ್ನೂ ಓದಿ : ಶೃಂಗೇರಿ : ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು
ಕಾಡಿನಲ್ಲಿ ಕುಳಿತು ಮದ್ಯಪಾನ ಮಾಡಿರುವ ಶಿವಮೊಗ್ಗದ ಉರುಳಿಹಳ್ಳಿ ಮಾರುತಿ ಕ್ಯಾಂಪ್ ನಿವಾಸಿ ವಿಠಲ ಮತ್ತು ಆತನ ಸ್ನೇಹಿತ ಮದ್ಯ ಕುಡಿದು ಮಲಗಿದ್ದಾರೆ. ಕೆಲ ಸಮಯದ ನಂತರ ಸ್ನೇಹಿತ ಎದ್ದು ಗ್ರಾಮಕ್ಕೆ ಹೋಗಿದ್ದಾನೆ, ಆದರೆ ವಿಠಲ ಎಂಬ ವ್ಯಕ್ತಿ ಗ್ರಾಮಕ್ಕೆ ಹಿಂದಿರುಗಲಿಲ್ಲ ಎನ್ನಲಾಗಿದೆ. ಈ ನಂತರದಲ್ಲಿ ಕಾಡಿಗೆ ತೆರಳಿದ ಗ್ರಾಮಸ್ಥರೊಬ್ಬರು ವಿಠಲ ಮೃತಪಟ್ಟಿರುವುದನ್ನು ಕಂಡು ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಹೆಚ್ಚು ಮದ್ಯ ಸೇವಿಸಿದ್ದರಿಂದ ಮೃತಪಟ್ಟಿರಬಹುದು ಎಂದು ಭಾವಿಸಿದ ಕುಟುಂಬಸ್ಥರು, ದುಃಖ ವ್ಯಕ್ತಪಡಿಸಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ : https://forms.gle/APPtk8M3ZDk2oMka6
ಈ ಮಧ್ಯದಲ್ಲಿ ಆತನ ಸಾವಿನ ಕುರಿತು ಮನೆಯವರು ಹಾಗೂ ಸ್ಥಳೀಯರು ಅನುಮಾನಗೊಂಡು ತುಂಗಾನಗರ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಕೂಡಲೇ ಸ್ಮಶಾನಕ್ಕೆ ಧಾವಿಸಿದ ಪೊಲೀಸರು ಅಂತ್ಯಸಂಸ್ಕಾರಕ್ಕೆ ತಡೆಯೊಡ್ಡಿ ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ವಿಠಲ ಅವರ ಮೃತದೇಹವನ್ನು ರವಾನಿಸಿದ್ದಾರೆ.
ಸಾವಿನ ಕುರಿತಾಗಿ ಕುಟುಂಬದವರಿಗೆ ಹಾಗೂ ಸ್ಥಳೀಯರಿಗೆ ಅನುಮಾನ ಕಾಡಿದ್ದು, ಈ ಸಂಬಂಧ ದೂರು ನೀಡಿ ತನಿಖೆ ನಡೆಸುವಂತೆ ಕೋರಿದ್ದಾರೆ. ಪೊಲೀಸರು ಘಟನಾ ಸಂಬಂಧ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಸಂಪೂರ್ಣ ತನಿಖೆಯ ನಂತರ ಸಾವಿಗೆ ನಿಖರ ಕಾರಣಗಳೇನು ಎಂಬ ಕುರಿತಾಗಿ ಮಾಹಿತಿ ದೊರೆಯಲಿದೆ.
ನಾಪತ್ತೆಯಾಗಿದ್ದ ಯುವಕನ ಶವ ಕವಲೇದುರ್ಗ ಕೆರೆಯಲ್ಲಿ ಪತ್ತೆ :
ಹಿರಿಯ ರಾಜಕಾರಣಿ, ಬಿಜೆಪಿ ಮುಖಂಡ ಕಟ್ಟೇಗದ್ದೆ ಹಾಲಪ್ಪ ಅವರ ಪುತ್ರ ಸಾವನ್ನಪ್ಪಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಕ್ಷೇತ್ರದ ಹಿರಿಯ ಬಿಜೆಪಿ ನಾಯಕರಾದ ಕಟ್ಟೇಗದ್ದೆ ಹಾಲಪ್ಪ ಅವರ ಪುತ್ರ ಆಕರ್ಷ್ ರಾಜ್ ಶವ ಕವಲೇದುರ್ಗದ ಕೆರೆಯಲ್ಲಿ ಪತ್ತೆಯಾಗಿದೆ. ಕಳೆದ ಮೂರು ದಿನಗಳ ಹಿಂದಷ್ಟೇ ಆಕರ್ಷ್ ರಾಜ್ ಕಾರ್ ಅಪಘಾತವಾಗಿತ್ತು. ಮನೆಯಿಂದ ತೆಗೆದುಕೊಂಡು ಹೋಗಿದ್ದ ಬ್ರೀಜಾ ಕಾರು ಸಾಲೂರು ಕೊಂಡ್ಲೂರು ಸಮೀಪದ ಕವಲೇ ದುರ್ಗ ರಸ್ತೆಯಲ್ಲಿ ಅಪಘಾತಕ್ಕೀಡಾಗಿತ್ತು. ಕಾರು ಓಡಿಸುವ ಸ್ಥಿತಿಯಲ್ಲಿರಲಿಲ್ಲ ಹಾಗೂ ಅಂದಿನಿಂದಲೇ ಆಕರ್ಷ್ ರಾಜ್ ಕಣ್ಮರೆಯಾಗಿದ್ದರು. ಮೃತ ಆಕರ್ಷ್ ರಾಜ್ ಶವವು ಕವಲೇದುರ್ಗ ಕೆರೆಯಲ್ಲಿ ಪತ್ತೆಯಾಗಿದ್ದು ಈ ಸಾವು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಮೃತನ ಸಾವಿನ ಕುರಿತಾಗಿ ರಾಜ್ಯದ ಗೃಹ ಸಚಿವರಾದ ಆರಗಜ್ಞಾನೇಂದ್ರ, ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಘಟನಾ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಸಂಬಂಧ ಹೆಚ್ಚಿನ ತನಿಖೆಯನ್ನು ಆರಂಭಿಸಿದ್ದಾರೆ ಹಾಗೂ ಮಾಹಿತಿ ಕಲೆ ಹಾಕುತ್ತಿದ್ದಾರೆ.


.jpeg)



0 Comments