ಬೆಂಗಳೂರು : (ನ್ಯೂಸ್ ಮಲ್ನಾಡ್ ವರದಿ) ವರ್ಷಾಚರಣೆ ಸಂದರ್ಭದಲ್ಲಿ ಅಭಿನಂದನೆ ಹೇಳಲು ಬಂದ ತಮ್ಮದೇ ಪಕ್ಷದ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಮೇಲೆ ಮುಖ್ಯಮಂತ್ರಿ ಗರಂ ಆಗಿದ್ದಾರೆ.
ವಿಧಾನಸೌಧದಲ್ಲಿ 'ಮುಖ್ಯಮಂತ್ರಿಗಳಿಗೆ ಕಂಗ್ರಾಟ್ಸ್' ಎಂದು ಕುಮಾರಸ್ವಾಮಿ ಹೇಳಿ ಕೈ ಕುಲುಕಲು ಹೊರಟರು. ‘ನಿನ್ನ ಕಂಗ್ರಾಟ್ಸ್ ಬೇಡ, ಏನು ಬೇಡ, ಏನೇನೊ ಟ್ವಿಟ್ ಮಾಡಿ ಟೀಕೆ ಮಾಡಿದ್ದೀಯ’ ಎಂದು ಗರಂ ಆದರು. ಅದು ಹಾಗಲ್ಲ ಸಾ ಎನ್ನುತ್ತಿದ್ದಂತೆ ಮಾತು ತುಂಡರಿಸಿದ ಸಿಎಂ, ‘ನನಗೂ ಗೊತ್ತು ಸುಮ್ಮನಿರಪ್ಪ’ ನೀನು ಸರ್ಕಾರದ ಭಾಗ ಅನ್ನೋದನ್ನು ಮರೆತಿದ್ದೀಯಾ ಅನ್ಸುತ್ತೆ ಎಂದು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ : ಪ್ರವೀಣ್ ನೆಟ್ಟಾರ್ ಬರ್ಬರ ಹತ್ಯೆ ಖಂಡಿಸಿ ಹಿಂದೂಪರ ಸಂಘಟನೆಗಳಿಂದ ನಾಳೆ ಸ್ವಯಂ ಪ್ರೇರಿತ ಶೃಂಗೇರಿ ಬಂದ್
‘ನಮ್ಮದೇ ಸರ್ಕಾರವಿದ್ರು ನಮ್ಮದೇ ಕಾರ್ಯಕರ್ತನ ಕೊಲೆ; ಹೇಳಿಕೊಳ್ಳಲು ನನಗೆ ನಾಚಿಗೆಯಾಗ್ತಿದೆ’ ಎಂದು ಫೇಸ್ ಬುಕ್ ಪೋಸ್ಟ್:
ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಕುರಿತಂತೆ ತಮ್ಮ ಫೇಸ್ ಬುಕ್ ನಲ್ಲಿ ಶಾಸಕ ಎಂ. ಪಿ ಕುಮಾರಸ್ವಾಮಿ ‘ನಮ್ಮದೇ ಸರ್ಕಾರ! ನಮ್ಮದೇ ಕಾರ್ಯಕರ್ತರ ಕೊಲೆ! ನನಗೆ ಹೇಳಿ ಕೊಳ್ಳಲು ನಾಚಿಕೆ ಯಾಗುತ್ತಿದೆ! ಕ್ಷಮಿಸಿ ಬಿಡು ಪ್ರವೀಣ್’ ಎಂದು ಬರೆದುಕೊಂಡಿದ್ದರು. ಇದು ಸಾಕಷ್ಟು ವೈರಲ್ ಆಗಿದ್ದಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಬಾರೀ ಚರ್ಚೆಗೊಳಗಾಗಿತ್ತು. ಅನೇಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕಮೆಂಟ್ ನಲ್ಲಿ ಒತ್ತಾಯಿಸಿದ್ದರು. ಘಟನೆ ಬಳಿಕ ಸುದ್ದಿಗಾರರಿಗೆ ಮಾತನಾಡಿದ ಎಂ ಪಿ ಕುಮಾರಸ್ವಾಮಿ ಘಟನೆ ಬಗ್ಗೆ ನಮ್ಮ ಸರ್ಕಾರ ಇದ್ದರೂ ನಿನ್ನನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಪೋಸ್ಟ್ ಮಾಡಿದ್ದು ಸಿ.ಎಂ ಸಿಟ್ಟಿಗೆ ಕಾರಣ ಎಂದು ಹೇಳಿದ್ದಾರೆ.
ನಮ್ಮದೇ ಸರ್ಕಾರ! ನಮ್ಮದೇ ಕಾರ್ಯಕರ್ತರ ಕೊಲೆ! ನನಗೆ ಹೇಳಿ ಕೊಳ್ಳಲು ನಾಚಿಕೆ ಯಾಗುತ್ತಿದೆ! ಕ್ಷಮಿಸಿ ಬಿಡು ಪ್ರವೀಣ್ 🙏🏿
Posted by MP Kumara Swamy on Wednesday, 27 July 2022
ಶಾಸಕ ಎಂ ಪಿ ಕುಮಾರಸ್ವಾಮಿ ಯಾವಾಗಲೂ ಒಂದಿಲ್ಲೊಂದು ವಿವಾದ ಸೃಷ್ಟಿಸಿಕೊಂಡು ಸುದ್ದಿಯಲ್ಲಿ ಇರುತ್ತಾರೆ. ಈ ಹಿಂದೆ ಸಿ.ಟಿ ರವಿ ಅವರ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿ ಬಾರೀ ಚರ್ಚೆಯಲ್ಲಿದ್ದರು, ರಾಜ್ಯದಲ್ಲಿ ತಮ್ಮದೇ ಪಕ್ಷವು ಆಡಳಿತದಲ್ಲಿದ್ದರೂ ಪಕ್ಷದ ನಾಯಕರ ವಿರುದ್ಧ ಅನುದಾನದ ವಿಚಾರವಾಗಿ ಪ್ರತಿಭಟನೆ ಮಾಡಿದ್ದು ವಿಪಕ್ಷಗಳಿಗೆ ಆಹಾರವಾಗಿತ್ತು. ಇತ್ತೀಚಿಗೆ ತಮ್ಮ ಕ್ಷೇತ್ರದ ಮಲ್ಲಂದೂರು ಠಾಣೆಗೆ ಹೊಸದಾಗಿ ಚಾರ್ಜ್ ತೆಗೆದುಕೊಂಡ ಪಿಎಸ್ಐ ರವೀಶ್ ಅವರಿಗೆ ಏಕವಚನದಲ್ಲಿ ಬೈದು ‘ನೀನು ಬಂದ್ರೆ ಒದ್ದು ಓಡಿಸ್ತೀನಿ, ಯಾವ IG? ಮೂಡಿಗೆರೆಗೆ ನಾನು’ ಎಂದು ಹೇಳಿದ ಆಡಿಯೋವೊಂದು ರಾಜ್ಯಮಟ್ಟದಲ್ಲಿ ಸದ್ದು ಮಾಡಿತ್ತು.



.jpeg)

0 Comments