ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಮೂರು ದಿನಗಳ ಹಿಂದೆ ಕೆಲಸಕ್ಕೆಂದು ತೆರಳಿ ದಿನಗಳು ಕಳೆದರೂ ನಾಪತ್ತೆಯಾಗಿದ್ದ ವ್ಯಕ್ತಿ ಇಂದು ಶವವಾಗಿ ಪತ್ತೆಯಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಅಡ್ಡಗದ್ದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡೇಮನೆ ಹೆಗ್ಗದ್ದೆ ರಸ್ತೆಯ ಸಮೀಪದಲ್ಲಿ ಮನೆ ಹೊಂದಿದ್ದ ಚಂದ್ರಶೇಖರ ಎಂಬುವವರು ಮೂರುದಿನಗಳ ಹಿಂದೆ ನಾಪತ್ತೆಯಾಗಿದ್ದರು. ಈ ಕುರಿತಂತೆ ಮನೆಯವರು ಕುಟುಂಬಸ್ಥರನ್ನು ವಿಚಾರ ಮಾಡಿದ್ದರು ಹಾಗೂ ಗ್ರಾಮಸ್ಥರು ಎಲ್ಲೆಡೆ ಹುಡುಕಾಟ ನಡೆಸಿದ್ದರು. ಆದರೂ ಅವರು ದೊರೆಯದ ಕಾರಣ ವ್ಯಕ್ತಿಯನ್ನು ಪತ್ತೆಮಾಡಿ ಕೊಡುವಂತೆ ದೂರು ನೀಡಿದ್ದರು. ಪೊಲೀಸರು ಈ ಸಂಬಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ : https://forms.gle/APPtk8M3ZDk2oMka6
ಆದರೆ ಇಂದು ಬೆಳಗ್ಗೆ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ಅಡ್ಡಗದ್ದೆ ವ್ಯಾಪ್ತಿಯ ಕುಂಬ್ರಿ ರಾಘವೇಂದ್ರ ಎಂಬುವವರ ಮನೆಯ ಹತ್ತಿರವಿರುವ ಬಾವಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.
ಮರಣೋತ್ತರ ಪರೀಕ್ಷೆಯ ಬಳಿಕದಲ್ಲಿ ಹಾಗೂ ಸಂಪೂರ್ಣ ತನಿಖೆಯ ನಂತರವಷ್ಟೇ ಘಟನೆಗೆ ನಿಖರಕಾರಣಗಳೇನು ಎಂಬುದಾಗಿ ಮಾಹಿತಿ ಹೊರಬೀಳಲಿದೆ.
ಎನ್.ಆರ್.ಪುರ : ದ್ವಿಚಕ್ರ ವಾಹನ ಸವಾರನಿಗೆ ಕಾರಿನಿಂದ ಗುದ್ದಿ ದರೋಡೆ ಮಾಡಿದ್ದ ಖತರ್ನಾಕ್ ದಂಪತಿಗಳು ಅಂದರ್
ಕಳೆದ ವರ್ಷ ವಾಹನದಲ್ಲಿ ತೆರಳುತ್ತಿದ್ದ ವ್ಯಕ್ತಿಯೋರ್ವರನ್ನು ಅಡ್ಡಗಟ್ಟಿ ಕಳ್ಳತನ ನಡೆಸಿದ್ದ ಆರೋಪಿಗಳನ್ನು ಕಾರ್ಯಾಚರಣೆಯ ಮೂಲಕ ಪೊಲೀಸರು ಸೆರೆಹಿಡಿದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಿ.ಎಸ್ ಕೈಮರದಲ್ಲಿ ಹಾರ್ಡ್ ವೇರ್ ಮಾಲೀಕ ನಿಖಿಲ್ ಎಂಬುವವರು ರಾತ್ರಿಯ ವೇಳೆ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುವ ಸಂದರ್ಭದಲ್ಲಿ ಐದು ಜನರ ತಂಡವಿದ್ದ ಸ್ಯಾಂಟ್ರೋ ಕಾರೊಂದು ಸ್ಕೂಟಿ ಗೆ ಡಿಕ್ಕಿ ಹೊಡೆದು ಮಾಲೀಕನನ್ನು ಅಡ್ಡಗಟ್ಟಿ, ಆತನಿಗೆ ಚಾಕು ತೋರಿಸಿ ಹೆದರಿಸಿ, ಆತನ ಮೇಲೆ ಹಲ್ಲೆ ಮಾಡಿ ವ್ಯಕ್ತಿಯ ಬಳಿಯಲ್ಲಿದ್ದ ವಾಚ್, ಪರ್ಸ್, ಮೊಬೈಲ್, ಮುಂತಾದ ವಸ್ತುಗಳನ್ನು ಆತನಿಂದ ದರೋಡೆ ಮಾಡಿ ಎಸ್ಕೇಪ್ ಆಗಿದ್ದರು. ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವ ಸಲುವಾಗಿ ತಂಡವನ್ನು ರಚಿಸಿಕೊಂಡು ಈ ಕುರಿತು ಕಾರ್ಯಾಚರಣೆಗಿಳಿದಿದ್ದರು.
ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರು ನಿರಂತರವಾಗಿ 11 ತಿಂಗಳುಗಳ ಕಾಲ ಈ ಸಂಬಂಧ ಮಾಹಿತಿ ಕಲೆಹಾಕಿ, ಕಾರ್ಯಾಚರಣೆಯನ್ನು ನಡೆಸಿ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. ಮೊಬೈಲ್ ಅಂಗಡಿ ಮಾಲೀಕ ಜಲೀಲ್ ಹಾಗೂ ಆತನ ಪತ್ನಿ ಫಾದಿಮಾ ಇಬ್ಬರು ಬಂಧಿತ ಆರೋಪಿಗಳು. ಪೊಲೀಸರು ಈ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಕೋರ್ಟ್ ಆದೇಶಿಸಿದೆ.
ಈ ಕೃತ್ಯಕ್ಕೆ ಉಪಯೋಗಿಸಿದ್ದ ಹ್ಯುಂಡೈ ಸ್ಯಾಂಟ್ರೋಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬಂಧಿತ ಜಲೀಲ್ ಪತ್ನಿಯ ಅಕ್ಕನ ಮಗ ಪ್ರಥಮ ಆರೋಪಿಯಾಗಿದ್ದಾನೆ, ಅಂತೆಯೇ ಶಾಕೀರ್ ಇನ್ನೋರ್ವ ಆರೋಪಿಯಾಗಿದ್ದಾನೆ, ಇನ್ನೋರ್ವ ಆರೋಪಿ ಶಾಹೀದ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದುಬೈನಿಂದಲೇ ಸಂಚು ಮಾಡಿದ್ದಾನೆ ಎನ್ನಲಾಗಿದೆ.
ಘಟನಾ ಸಂಬಂಧ ದಂಪತಿಗಳು ಪೊಲೀಸರ ವಶದಲ್ಲಿದ್ದು ಇಬ್ಬರ ಸಂಪೂರ್ಣ ತನಿಖೆಯ ಬಳಿಕವಷ್ಟೇ ಈ ಕುರಿತಾದ ಸಂಪೂರ್ಣ ಮಾಹಿತಿಗಳು ಹೊರಬೀಳಲಿದೆ.
ಈ ಕಾರ್ಯಾಚರಣೆಯು ಸಿಪಿಐ ವಸಂತ್ಅಶೋಕ್ ಭಾಗವತ್ ಅವರ ಮಾರ್ಗದರ್ಶನದಲ್ಲಿ ನಡೆದಿದ್ದು, ಪಿಎಸೈ ವಿ.ಟಿ ದಿಲೀಪ್ ಕುಮಾರ್, ಅಪರಾಧ ವಿಭಾಗದ ಪಿಎಸೈ ಗುರುಸಜ್ಜನ್, ಸಿಬ್ಬಂದಿಗಳಾದ ಗಿರೀಶ್ ಕುಮಾರ್, ಶಂಕರ್ ಭಾಗಿಯಾಗಿ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.



.jpeg)



0 Comments