ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಖದೀಮರು ದೇವಸ್ಥಾನದ ಬೀಗ ಓಡೆದು ಕಾಣಿಕೆ ಹುಂಡಿ ಹಾಗೂ ಹುಂಡಿಯಲ್ಲಿದ್ದ ಹಣವನ್ನು ದೋಚಿರುವ ಘಟನೆಯು ಬೆಳಕಿಗೆ ಬಂದಿದೆ. 

ಚಿಕ್ಕಮಗಳೂರು ತಾಲೂಕಿನ ಅಂಬಳೆ ಗ್ರಾಮದ ಶ್ರೀ ಸುಗ್ಗಿಕಲ್ಲು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಈ ಘಟನೆ ಸಂಭವಿಸಿದ್ದು, ದೇವಾಲಯದ ಮುಂಬಾಗಿಲಿನ ಬೀಗ ಮುರಿದು ಕಳ್ಳರು ಹಣವನ್ನು ದೋಚಿದ್ದಾರೆ. ಕಳ್ಳತನ ನಡೆದಿರುವ ಕುರಿತಾಗಿ ದೇವಸ್ಥಾನದ ಪಕ್ಕದ ಮನೆಯವರು ದೇವಸ್ಥಾನ ಸಮಿತಿಯ ಕಾರ್ಯದರ್ಶಿಗಳಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿ ಈ ಕುರಿತು ನೋಡಿದಾಗ ಕಳ್ಳರು ಕಾಣಿಕೆ ಹುಂಡಿಯನ್ನು ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. 

ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ : 

https://forms.gle/APPtk8M3ZDk2oMka6


ಕಾಣಿಕೆ ಹುಂಡಿಯಲ್ಲಿ ಅಂದಾಜು 20 ರಿಂದ 25 ಸಾವಿರ ರೂಪಾಯಿ ಹಣವಿದ್ದು, ಈ ಕೃತ್ಯವನ್ನು ಎಸಗಿರುವ ಕಳ್ಳರನ್ನು  ಅತೀ ಶೀಘ್ರವಾಗಿ ಬಂಧಿಸಿ ಹಣವನ್ನು ಪತ್ತೆ ಮಾಡಿಕೊಡಬೇಕಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಶೃಂಗೇರಿ : ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ ; ಬಾವಿಯಲ್ಲಿ ದೊರೆತ ಮೃತದೇಹ

ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯಿಂದ ಅಮರನಾಥ ಯಾತ್ರೆಗೆ ತೆರಳಿದ್ದವರು ಸೇಫ್ 

ಚಿಕ್ಕಮಗಳೂರು :  ಹಿಂದೂಗಳ ಪ್ರಸಿದ್ಧ ಧಾರ್ಮಿಕ ಹಾಗೂ ಯಾತ್ರಾ ಸ್ಥಳವಾಗಿರುವ ಅಮರನಾಥ ಯಾತ್ರೆಗೆ ಚಿಕ್ಕಮಗಳೂರು ಜಿಲ್ಲೆಯಿಂದ ತೆರಳಿರುವ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಯಾತ್ರಾಸ್ಥಳ ಅಮರನಾಥದಲ್ಲಿ ಮೇಘ ಸ್ಫೋಟವಾಗಿದ್ದು, ಕನಿಷ್ಠ 22 ಮಂದಿ ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದ್ದು, 40ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಿಂದ ತೆರಳಿರುವ ಯಾತ್ರಾರ್ಥಿಗಳು ಯಾವುದೇ ಸಮಸ್ಯೆಗೀಡಾಗದೆ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ದೊರೆತಿದೆ. 

ಅಮರನಾಥಕ್ಕೆ ಚಿಕ್ಕಮಗಳೂರು ಜಿಲ್ಲೆಯಿಂದ 60 ಜನ  ಯಾತ್ರಿಕರು ಸುರಕ್ಷಿತವಾಗಿದ್ದು ಇವರನ್ನು ಸೇನಾ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಸದ್ಯ 58 ಜನ ಮಂದಿ ಬಲ್ಸಾಲ್ ಬಂಕರ್ ನಲ್ಲಿ ವಾಸ್ತವ್ಯವಿದ್ದು, ಇನ್ನಿಬ್ಬರು ಜಮ್ಮುವಿಗೆ ಸುರಕ್ಷಿತವಾಗಿ ವಾಪಸ್ಸಾಗಿದ್ದಾರೆ ಎನ್ನಲಾಗಿದೆ.


ಈ ಘಟನೆಯಲ್ಲಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸುಮಾರು 15 ಸಾವಿರ ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ. 

ಈ ಹಿಂದೆಯೂ ಕೂಡ ಮೇಘಸ್ಫೋಟ ಸಂಭವಿಸಿದಾಗ ಅನೇಕರು ಅಪಯಕ್ಕೀಡಾಗಿದ್ದರು. ತುರ್ತಾಗಿ ಕಾರ್ಯಾಚರಣೆ ನಡೆಸಿದ ಪರಿಣಾಮ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡ ಹಿನ್ನೆಲೆ ಈ ಬಾರಿ ಬಹುತೇಕ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ.

ಶಿವಮೊಗ್ಗದಿಂದ ಯಾತ್ರೆಗೆ ತೆರಳಿದವರೂ ಬಚಾವ್ : 

ಶಿವಮೊಗ್ಗ ಜಿಲ್ಲೆಯಿಂದ ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್ ಸುರೇಖಾ ಮುರಳೀಧರ್ ಸೇರಿದಂತೆ 16 ಮಂದಿ ಮಹಿಳೆಯರು ಅಮರನಾಥ ಯಾತ್ರೆಗೆ ಜೂನ್ 30 ರಂದು ತೆರಳಿದ್ದರು. ತೆರಳಿರುವ ಅಷ್ಟೂ ಜನರು ನಿನ್ನೆ ಸಂಭವಿಸಿದ ಮೇಘಸ್ಪೋಟದ ಸಂದರ್ಭದಲ್ಲಿ ಯಾವುದೇ ತೊಂದರೆಗೀಡಾಗದೇ ಸುರಕ್ಷಿತವಾಗಿದ್ದಾರೆ. ವೈಷ್ಣೋದೇವಿ ದರ್ಶನ ಪಡೆದು ಅಮರನಾಥ ಯಾತ್ರೆಗೆ ತೆರಳಿದ್ದ ಸಂದರ್ಭದಲ್ಲಿ ಮೇಘಸ್ಪೋಟದಿಂದ ಯಾತ್ರೆಗೆ ನಿರ್ಬಂಧ ಹೇರಿದ ಹಿನ್ನಲೆ ಯಾತ್ರಾರ್ಥಿಗಳು ಯಾತ್ರೆಯನ್ನು ಮೊಟಕುಗೊಳಿಸಿದ್ದಾರೆ. ಶ್ರೀನಗರದಿಂದ ಸೋಮವಾರ ಶಿವಮೊಗ್ಗಕ್ಕೆ ವಾಪಸ್ ಬರುತ್ತೇವೆ. ಯಾವುದೇ ಆತಂಕ ಬೇಡ ಎಂದು ಸುರೇಖಾ ಮುರಳೀಧರ್ ಅವರು ಯಾತ್ರಾರ್ಥಿಗಳ ಕುಟುಂಬಸ್ಥರಿಗೆ ಹಾಗೂ ಸಾರ್ವಜನಿಕರಿಗೆ ತಿಳಿಸಿದ್ದಾರೆ