ತೀರ್ಥಹಳ್ಳಿ : (ನ್ಯೂಸ್ ಮಲ್ನಾಡ್ ವರದಿ) ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡರಾದ ರಘುವೀರ್ ಭಟ್ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ರಥಬೀದಿಯ ನಿವಾಸದಲ್ಲಿ ಇಂದು ರಘುವೀರ್ ಭಟ್ (90) ಅವರು ನಿಧನರಾಗಿದ್ದು ಮೃತರ ಅಗಲುವಿಕೆಯ ಕುರಿತು ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿ ಪಲ್ಟಿಯಾದ ಕಾರು
ಮೃತ ರಘುವೀರ್ ಭಟ್ ಅವರು 1947 ರಲ್ಲಿ ನಡೆದ ಭಾರತದ ಮೊಟ್ಟ ಮೊದಲ ಸ್ವಾತಂತ್ರೋತ್ಸವದಲ್ಲಿ ಭಾಗಿಯಾಗಿದ್ದರು, ಸಮಾಜಕ್ಕಾಗಿ ಅನೇಕ ಕಾರ್ಯಗಳಲ್ಲಿ ಭಾಗಿಯಾಗಿದ್ದ ಅವರು ಭಾರತೀಯ ಜನತಾ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತೀರ್ಥಹಳ್ಳಿ ಭಾಗದ ಹಿರಿಯ ಬಿಜೆಪಿ ಮುಖಂಡರಾಗಿದ್ದರು. ಇಂದು ಸಂಜೆ ತೀರ್ಥಹಳ್ಳಿಯ ಹಿಂದೂ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.
ರಾಜ್ಯದ ಗೃಹ ಸಚಿವರಾದ ಆರಗಜ್ಞಾನೇಂದ್ರ ಸೇರಿದಂತೆ ಅನೇಕ ಗಣ್ಯರು ಮೃತರ ಸಾವಿನ ಕುರಿತು ಸಂತಾಪ ಸೂಚಿಸಿದ್ದಾರೆ. ಅಂತಿಮ ದರ್ಶನವನ್ನು ಪಡೆದುಕೊಳ್ಳುವ ಸಲುವಾಗಿ ಬಿಜೆಪಿಯ ಮುಖಂಡರು, ಕಾರ್ಯಕರ್ತರು ಹಾಗೂ ಅವರ ಆತ್ಮೀಯರು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಅಂತಿಮ ವಿಧಿ ವಿಧಾನ ನಡೆಯುವ ವೇಳೆ ಸಾವಿನ ಕುರಿತು ವ್ಯಕ್ತವಾದ ಅನುಮಾನ :
ಶಿವಮೊಗ್ಗ : ಮೃತ ವ್ಯಕ್ತಿಯೋರ್ವರ ದೇಹವನ್ನು ಅಂತ್ಯಕ್ರಿಯೆಯ ಬಳಿಕದಲ್ಲಿ ಸ್ಮಶಾನದಿಂದ ಮರಣೋತ್ತರ ಪರೀಕ್ಷೆಗಾಗಿ ಅನುಮಾನದ ಮೇರೆಗೆ ತೆಗೆದುಕೊಂಡು ಹೋಗಿರುವ ವಿಚಿತ್ರ ಘಟನೆಯೊಂದು ಶಿವಮೊಗ್ಗದಲ್ಲಿ ನಡೆದಿದೆ.
ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ :
https://forms.gle/APPtk8M3ZDk2oMka6
ಕಾಡಿನಲ್ಲಿ ಕುಳಿತು ಮದ್ಯಪಾನ ಮಾಡಿರುವ ಶಿವಮೊಗ್ಗದ ಉರುಳಿಹಳ್ಳಿ ಮಾರುತಿ ಕ್ಯಾಂಪ್ ನಿವಾಸಿ ವಿಠಲ ಮತ್ತು ಆತನ ಸ್ನೇಹಿತ ಮದ್ಯ ಕುಡಿದು ಮಲಗಿದ್ದಾರೆ. ಕೆಲ ಸಮಯದ ನಂತರ ಸ್ನೇಹಿತ ಎದ್ದು ಗ್ರಾಮಕ್ಕೆ ಹೋಗಿದ್ದಾನೆ, ಆದರೆ ವಿಠಲ ಎಂಬ ವ್ಯಕ್ತಿ ಗ್ರಾಮಕ್ಕೆ ಹಿಂದಿರುಗಲಿಲ್ಲ ಎನ್ನಲಾಗಿದೆ. ಈ ನಂತರದಲ್ಲಿ ಕಾಡಿಗೆ ತೆರಳಿದ ಗ್ರಾಮಸ್ಥರೊಬ್ಬರು ವಿಠಲ ಮೃತಪಟ್ಟಿರುವುದನ್ನು ಕಂಡು ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಹೆಚ್ಚು ಮದ್ಯ ಸೇವಿಸಿದ್ದರಿಂದ ಮೃತಪಟ್ಟಿರಬಹುದು ಎಂದು ಭಾವಿಸಿದ ಕುಟುಂಬಸ್ಥರು, ದುಃಖ ವ್ಯಕ್ತಪಡಿಸಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಈ ಮಧ್ಯದಲ್ಲಿ ಆತನ ಸಾವಿನ ಕುರಿತು ಮನೆಯವರು ಹಾಗೂ ಸ್ಥಳೀಯರು ಅನುಮಾನಗೊಂಡು ತುಂಗಾನಗರ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಕೂಡಲೇ ಸ್ಮಶಾನಕ್ಕೆ ಧಾವಿಸಿದ ಪೊಲೀಸರು ಅಂತ್ಯಸಂಸ್ಕಾರಕ್ಕೆ ತಡೆಯೊಡ್ಡಿ ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ವಿಠಲ ಅವರ ಮೃತದೇಹವನ್ನು ರವಾನಿಸಿದ್ದಾರೆ.
ಸಾವಿನ ಕುರಿತಾಗಿ ಕುಟುಂಬದವರಿಗೆ ಹಾಗೂ ಸ್ಥಳೀಯರಿಗೆ ಅನುಮಾನ ಕಾಡಿದ್ದು, ಈ ಸಂಬಂಧ ದೂರು ನೀಡಿ ತನಿಖೆ ನಡೆಸುವಂತೆ ಕೋರಿದ್ದಾರೆ. ಪೊಲೀಸರು ಘಟನಾ ಸಂಬಂಧ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಸಂಪೂರ್ಣ ತನಿಖೆಯ ನಂತರ ಸಾವಿಗೆ ನಿಖರ ಕಾರಣಗಳೇನು ಎಂಬ ಕುರಿತಾಗಿ ಮಾಹಿತಿ ದೊರೆಯಲಿದೆ.




.jpeg)

0 Comments