ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ನಕಲಿ ದಾಖಲೆಗಳನ್ನು ಸೃಷ್ಠಿಸಿ ಅಕ್ರಮವಾಗಿ ವ್ಯಕ್ತಿಯೋರ್ವರ ಹೆಸರಿಗೆ ಜಾಗವನ್ನು ಮಂಜೂರುಮಾಡಲಾಗಿದೆ ಎಂದು ಆರೋಪಿಸಿ ಹಾಗೂ ಈ ಕುರಿತಾಗಿ ಸೂಕ್ತ ತನಿಖೆ ನಡೆಸಬೇಕೆಂದು ಸಾಮಾಜಿಕ ಕಾರ್ಯಕರ್ತ ಅಶ್ವಿನ್ ಉಪವಿಭಾಗಾಧಿಕಾರಿಯನ್ನು ಕೋರಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕು ಕಛೇರಿಯಲ್ಲಿ 2021 ರಲ್ಲಿ ಪ್ರಭುಪ್ರಸಾದ್ ಬಿನ್ ಗೋಪಾಲಕೃಷ್ಣ ಇವರ ಹೆಸರಿನಲ್ಲಿ ಶೃಂಗೇರಿ ತಾಲೂಕು ಕಸಬಾ ಹೋಬಳಿಯ ಮೆಣಸೆ ಗ್ರಾಮ ಸರ್ವೇ ನಂ166 ರಲ್ಲಿ ಒಂದು ಎಕರೆ ಭೂಮಿ ಮಂಜೂರಾತಿ ಮಾಡಿರುವುದಾಗಿ ಅರ್ಜಿದಾರರು ಆರೋಪಿಸಿದ್ದು, ಈ ಕುರಿತು ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಅಕ್ರಮ ಸಕ್ರಮ ನಡವಳಿಯಲ್ಲಿ ಮಂಜೂರು ಮಾಡಲಾಗಿರುವ ವ್ಯಕ್ತಿಯ ಹೆಸರು ನಮೂದಾಗಿಲ್ಲ ಎಂಬ ಗಂಭೀರ ಆರೋಪಮಾಡಿದ್ದಾರೆ.
ಹಕ್ಕುಪತ್ರವು ಮಾಜಿ ತಹಸೀಲ್ದಾರ್ ಅಂಬುಜಾ ಅವಧಿಯಲ್ಲಿ ಮಂಜೂರಾಗಿದ್ದು ಶಿರಸ್ತೇದಾರ್ ಶರತ್,ಕಡತ ನಿರ್ವಾಹಕ ಪ್ರೇಮಲತಾ ಹಾಗೂ ಗಣಪತಿ ಇವರುಗಳು ನಕಲಿ ದಾಖಲೆ ಸೃಷ್ಟಿಸಿ ಕೆನರಾ ಬ್ಯಾಂಕ್ ನಲ್ಲಿ ಚಲನ್ ಮೊತ್ತ ಪಾವತಿ ಮಾಡಿರುತ್ತಾರೆ ಎಂದು ಅರ್ಜಿದಾರರು ಆರೋಪಿಸಿದ್ದು, ಅಕ್ರಮ ಭೂಮಿ ಮಂಜೂರಾತಿಯ ಕುರಿತು ಸೂಕ್ತವಾಗಿ ತನಿಖೆ ನಡೆಸಬೇಕೆಂದು ಸಾಮಾಜಿಕ ಕಾರ್ಯಕರ್ತ ಅಶ್ವಿನ್ ಉಪವಿಭಾಗಾಧಿಕಾರಿಗಳನ್ನು ಕೋರಿದ್ದಾರೆ.





0 Comments