ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಕಳೆದ ಕೆಲ ದಿನಗಳಿಂದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿದೆ, ಇದಲ್ಲದೇ ಮಲೆನಾಡಿನ ಅನೇಕ ಭಾಗಗಳಲ್ಲಿ ಗುಡ್ಡ ಕುಸಿತ, ಮರಗಳು ರಸ್ತೆಗೆ ಅಡ್ಡಲಾಗಿ ಉದುರುವುದು ಸೇರಿದಂತೆ ಅನೇಕ ಅವಘಡಗಳು ಸಂಭವಿಸುತ್ತಿದ್ದು ಈ ಮಧ್ಯೆ ಜಿಲ್ಲೆಗಳನ್ನು ಸಂಪರ್ಕಿಸುವ ಘಾಟಿಗಳು ಹಾನಿಗೀಡಾಗಿದೆ ಕುಸಿತಕಂಡಿದೆ ಎಂಬ ಹಳೆಯ ಫೋಟೋ ವೀಡಿಯೋಗಳನ್ನು  ಹರಡಲಾಗುತ್ತಿದೆ. 

ಇದನ್ನೂ ಓದಿ : ಬೈಕ್ ಹಾಗೂ ಶಾಲಾ ವಾಹನದ ನಡುವೆ ಭೀಕರ ರಸ್ತೆ ಅಪಘಾತ ; ಯುವಕನ ದುರ್ಮರಣ ಇನ್ನೋರ್ವ ವ್ಯಕ್ತಿಯ ಸ್ಥಿತಿ ಗಂಭೀರ

ಕಳೆದ ಹತ್ತುದಿನಗಳಿಂದ ನಿರಂತರವಾಗಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ, ಮೂಡಿಗೆರೆ ಸೇರಿದಂತೆ ವಿವಿಧ ಭಾಗಗಳಲ್ಲಿ ಮಳೆಯಾಗುತ್ತಿದ್ದು ನದಿ ಪಾತ್ರದ ಜನರಿಗೆ ಪ್ರವಾಹ ಭೀತಿಯೂ ಎದುರಾಗಿದೆ. ಈ ಮಧ್ಯೆ ಕಳೆದೊಂದು ವಾರದಿಂದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದ್ದು ಮಳೆಯು ಬಿಟ್ಟುಬಿಡದೆ ಸುರಿಯುತ್ತಿದೆ. ಈ ಮಧ್ಯೆ ಜನರಲ್ಲಿ ಗೊಂದಲ ಉಂಟುಮಾಡುವ, ಭೀತಿ ಹುಟ್ಟಿಸುವ ಅನೇಕ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವ ಮೂಲಕ ಗೊಂದಲ ಸೃಷ್ಟಿಸಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ ಹಾಗೂ ಅಂತರ್ ಜಿಲ್ಲೆಗಳಿಗೆ ಸಂಪರ್ಕ ನೀಡುವ ಶಿರಾಡಿ ಘಾಟ್ ಇವೆರಡೂ ಮಾರ್ಗಗಳು ಸಂಚಾರಕ್ಕೆ ಸೂಕ್ತವಲ್ಲ ಎಂಬ ಸುಳ್ಳು ಮಾಹಿತಿಯನ್ನು ಕೆಲವರು ಹಬ್ಬಿಸುತ್ತಿದ್ದರೆ ಅದನ್ನೇ ಕೆಲವರು ನಂಬಿಕೊಂಡು, ಆ ಭಾಗದ ತಮ್ಮ ಪ್ರಯಾಣವನ್ನು ಅನೇಕರು ಮೊಟಕುಗೊಳಿಸುತ್ತಿದ್ದಾರೆ. 


ಪ್ರಸ್ತುತ ಚಾರ್ಮಾಡಿ ಘಾಟಿಯಲ್ಲಿ ಸಂಚಾರಕ್ಕೆ ಯಾವುದೇ ಅಡಚಣೆಗಳಿಲ್ಲ, ಸಣ್ಣಮಟ್ಟದ ಮರಗಳು ಬಿದ್ದರೂ ಸಂಚಾರಕ್ಕೆ ತೊಂದರೆಯಾಗದಂತೆ ಬೇಗನೆ ತೆರವು ಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು. ಜಲಪಾತಗಳು ತುಂಬಿ ಹರಿಯುತ್ತಿದ್ದು, ಬಂಡೆ ಕಲ್ಲುಗಳ ಮೇಲೆ ನಿಂತು ಸೆಲ್ಫಿ, ಮೋಜುಮಸ್ತಿ ಮಾಡಿದ್ದು ಕಂಡು ಬಂದಲ್ಲಿ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು - ಸೋಮಶೇಖರ್, ಸರ್ಕಲ್ ಇನ್ಸ್ಪೆಕ್ಟರ್, ಮೂಡಿಗೆರೆ

ಎರಡೂ ಘಾಟ್ ಸಂಚಾರಕ್ಕೆ ಯೋಗ್ಯವಾಗಿದೆ : 

ಪ್ರಸ್ತುತ ಶಿರಾಡಿಘಾಟ್ ಹಾಗೂ ಚಾರ್ಮಾಡಿ ಘಾಟ್ ಇವೆರಡೂ ಘಾಟಿಗಳು ಸಂಚಾರಕ್ಕೆ ಯೋಗ್ಯವಾಗಿದೆ. ಈ ಘಾಟ್ ಗಳಲ್ಲಿ ಮಣ್ಣುಕುಸಿತ ಹಾಗೂ ಮರಗಳು ರಸ್ತೆಗೆ ಅಡ್ಡಲಾಗಿ ಬೀಳುವ ಹಲವು ಘಟನೆಗಳು ಆಗಾಗ ಸಂಭವಿಸಿದ್ದು ಸಂಚಾರಕ್ಕೆ ಕೆಲ ಗಂಟೆಗಳ ಅಡೆತಡೆ ಉಂಟಾಗಿರುತ್ತದೆ. ಆದರೆ ಈ ವರ್ಷದಲ್ಲಿ ಘಾಟ್ ಬಂದ್ ಆಗಿರುವುದಿಲ್ಲ. ಶಿರಾಡಿ ಘಾಟ್ ನ ದುರಸ್ಥಿ ಕಾರ್ಯವನ್ನು  ಸಹ ನಡೆಸಲಾಗಿದ್ದು ಸಂಚಾರಕ್ಕೆ ಯೋಗ್ಯವಾಗಿದೆ. 

ಆಗಾಗ ಧರೆಗುರುಳುವ ಬೃಹದಾಕಾರದ ಮರಗಳು : 

ಭಾರೀ ಗಾತ್ರದ ಮರಗಳನ್ನು ಹಾಗೂ ದಟ್ಟ ಅರಣ್ಯ ಪ್ರದೇಶವನ್ನು ಹೊಂದಿರುವ ಚಾರ್ಮಾಡಿ ಹಾಗೂ ಶಿರಾಡಿ ಈ ಎರಡೂ ಘಾಟ್ ಗಳಲ್ಲಿ ಮಳೆಗಾಲದ ಅವಧಿಯಲ್ಲಿ ಸುರಿಯುವ ಮಳೆ ನೀರು ಮಣ್ಣನ್ನು ಸಡಿಲಗೊಳಿಸಿ ಮಣ್ಣು ಕೊಚ್ಚಿಹೋಗುವಂತೆ ಮಾಡುವ ಪರಿಣಾಮ ಆಗಾಗ ಬೃಹದಾಕಾರದ ಮರಗಳು ರಸ್ತೆಗೆ ಉರುಳಿ ಸಂಚಾರಕ್ಕೆ ಕೆಲ ಗಂಟೆಗಳ ಅವಧಿಯನ್ನು ತಡೆ ಹಿಡಿಯುತ್ತದೆ. ಪ್ರಯಾಣಿಕರು ಗೊಂದಲಗಳಿಗೆ ಕಿವಿಗೊಡದೆ ನಿಶ್ಚಿಂತೆಯಿಂದ ರಸ್ತೆ ನಿಯಮಗಳನ್ನು ಪಾಲಿಸಿಕೊಂಡು ಸಂಚಾರ ಮಾಡಬಹುದಾಗಿದೆ.

ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ : 

https://forms.gle/APPtk8M3ZDk2oMka6