NR ಪುರ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯಿಂದ ಶಿವಮೊಗ್ಗದ ಕಡೆಗೆ ತೆರಳುತ್ತಿದ್ದ KSRTC ಬಸ್ ಹಾಗೂ ಶಿವಮೊಗ್ಗದಿಂದ ಶೃಂಗೇರಿ ಕಡೆಗೆ ಬರುತ್ತಿದ್ದ ಕೆಕೆಬಿ ಬಸ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. 

ನರಸಿಂಹರಾಜಪುರ ಸಮೀಪದ ಉಂಬಳೆ ಬೈಲು ಪಂಚಾಯತ್ ಹುರಳಿಹಳ್ಳಿ ತೋಟದಕೆರೆ ಕ್ರಾಸ್ ಬಳಿ ಮುಖಾಮುಖಿ ಅಪಘಾತ ಸಂಭವಿಸಿದ್ದು ಶೃಂಗೇರಿಯಿಂದ ಮಧ್ಯಾಹ್ನ ಒಂದು ಗಂಟೆಗೆ ಹೊರಟಿದ್ದ KSRTC ಬಸ್ (KA 17 F 1528) ಹಾಗೂ ಶಿವಮೊಗ್ಗದಿಂದ ಶೃಂಗೇರಿಗೆ ಮೂರು ಗಂಟೆಗೆ ಹೊರಟಿದ್ದ ಕೆಕೆಬಿ (KA 18 B 4759) ಎರಡು ಬಸ್ಸುಗಳ ನಡುವೆ ಈ ಮುಖಾಮುಖಿ ಅಪಘಾತ ಸಂಭವಿಸಿದ್ದು, ಎರಡೂ ಬಸ್ಸುಗಳ ಚಾಲಕ ಹಾಗೂ ಬಸ್ಸಿನಲ್ಲಿದ್ದ ಕೆಲ ಪ್ರಯಾಣಿಕರಿಗೆ ತೀವ್ರ ಗಾಯಗಳಾಗಿದೆ. ಕೆಕೆಬಿ ಬಸ್ ನಲ್ಲಿ 35ಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ಕೆಎಸ್ ಆರ್ ಟಿಸಿ ಬಸ್ ನಲ್ಲಿ 45ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. 


ಅಪಘಾತದ ತೀವ್ರತೆಗೆ ಎರಡೂ ಬಸ್ಸುಗಳು ಜಖಂಗೊಂಡಿದ್ದು ಗಾಯಾಳುಗಳನ್ನು ಬೇರೆ ಬಸ್ಸಿನ ಮುಖಾಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ಘಟನೆ ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಈ ಸಂಬಂಧ ಪರಿಶೀಲನೆ ನಡೆಸುತ್ತಿದ್ದಾರೆ.

ಹಕ್ಕುಪತ್ರ ಹಗರಣದ ಬಳಿಕ ಶೃಂಗೇರಿಗೆ ಮೂರನೇ ತಹಸೀಲ್ದಾರ್ ಆಗಿ ಗೌರಮ್ಮ.ಪಿ ನೇಮಕ 

ಶೃಂಗೇರಿ : ಶೃಂಗೇರಿಗೆ ನೂತನ ತಹಸೀಲ್ದಾರ್ ಆಗಿ ಶ್ರೀಮತಿ ಗೌರಮ್ಮ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಹಸೀಲ್ದಾರ್ ಆಗಿ ಒಂದು ತಿಂಗಳು ಹತ್ತು ದಿನಗಳ ಕಾಲ ಡಾ. ಲೋಕೇಶ್ ಇವರು ಕಾರ್ಯ ನಿರ್ವಹಿಸಿದ್ದರು. ಪ್ರಸ್ತುತ ಇವರ ಸ್ಥಳ ನಿಯುಕ್ತಿಗಾಗಿ ಸರ್ಕಾರದಲ್ಲಿ ವರದಿ ಮಾಡಿಕೊಳ್ಳಬೇಕೆಂದು ಆದೇಶಿಸಲಾಗಿದ್ದು, ಇವರ ಸ್ಥಾನಕ್ಕೆ ಜಿಲ್ಲಾಧಿಕಾರಿ ಕಚೇರಿ ಬೆಂಗಳೂರು ಇಲ್ಲಿನ ಸಾಮಾಜಿಕ ಭದ್ರತಾ ವಿಭಾಗದಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಗೌರಮ್ಮ ಪಿ ಇವರನ್ನು ಶೃಂಗೇರಿಯ ನೂತನ ತಹಸೀಲ್ದಾರ್ ಆಗಿ ಕರ್ನಾಟಕ ಸರ್ಕಾರ ನೇಮಕಗೊಳಿಸಿದೆ. 

ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ : 


ಶೃಂಗೇರಿಯ ತಾಲೂಕು ಕಛೇರಿಯಲ್ಲಿ ನಡೆದ  ಹಕ್ಕುಪತ್ರ ಹಗರಣದ ಬಳಿಕ ಇದೀಗ ಮೂರನೇ ತಹಸೀಲ್ದಾರ್ ಆಗಿ ಗೌರಮ್ಮ.ಪಿ ನೇಮಕಗೊಂಡಿದ್ದಾರೆ.