ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಕರ್ನಾಟಕ ರಾಜ್ಯದ ಯುವ ಘಟಕಗಳ ಒಕ್ಕೂಟ ಹಾಗೂ ಜಿಲ್ಲಾ ಘಟಕ ಚಿಕ್ಕಮಗಳೂರು ಇವರ ವತಿಯಿಂದ ಆಗಸ್ಟ್ 07 ರಂದು ರಾಜ್ಯ ಯುವ ಪ್ರಶಸ್ತಿ ಹಾಗೂ ಜಿಲ್ಲಾ ಯುವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಆಯೋಜನೆಗೊಂಡಿದೆ.
ಇದನ್ನೂ ಓದಿ : ಸ್ವಾತಂತ್ರ್ಯಾ ನಂತರವೂ ಬಸ್ಸನ್ನೇ ಕಾಣದ ಗ್ರಾಮಗಳಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೊರೆತ ಬಸ್ ವ್ಯವಸ್ಥೆ
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಆಗಸ್ಟ್ 07 ರಂದು 2022 - 2023 ನೇ ಸಾಲಿನ ರಾಜ್ಯ ಯುವಪ್ರಶಸ್ತಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಯುವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ನಡೆಯಲಿದೆ. ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಸೇವೆ ನೀಡುತ್ತಿರುವ ಯುವಕ ಯುವತಿಯರನ್ನು ಗುರುತಿಸಿ ಜಿಲ್ಲಾ ಯುವ ಘಟಕ ಉದ್ಘಾಟನಾ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ನಡೆಸುವುದಾಗಿ ಜಿಲ್ಲಾ ಯುವಸಂಘಗಳ ಒಕ್ಕೂಟದ ಅಧ್ಯಕ್ಷ ಅಹಮದ್ ಬೇಗ್ ಮಾಹಿತಿ ನೀಡಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಯವಕ ಯುವತಿಯರ ಗಣನೀಯ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ಪ್ರಧಾನ ನಡೆಯಲಿದೆ.
ಮಾಧ್ಯಮ ವಿಭಾಗದಲ್ಲಿ ನ್ಯೂಸ್ ಮಲ್ನಾಡ್ ನ ಗಿರಿಜಾಪ್ರಸಾದ್ ಗೆ ಪ್ರಶಸ್ತಿ :
ರಾಜ್ಯ ಹಾಗೂ ಜಿಲ್ಲಾ ಮಟ್ಟದ ಯುವ ಪ್ರಶಸ್ತಿಗಳ ವಿಜೇತರ ಪಟ್ಟಿ ಪ್ರಕಟವಾಗಿದ್ದು, ನ್ಯೂಸ್ ಮಲ್ನಾಡ್ ನ ವರದಿಗಾರ ಹಾಗೂ ಮಾರ್ಕೆಟಿಂಗ್ ಅಸೋಸಿಯೇಟ್ ಗಿರಿಜಾಪ್ರಸಾದ್ ಅವರಿಗೆ ಮಾಧ್ಯಮ ವಿಭಾಗದಿಂದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ ವರುಣ್ ಡಿ. ಆರ್ಯ ಯುವಜನ ಸೇವೆ, ಅಜಿತ್ ಸಾಂಸ್ಕೃತಿಕ ವಿಭಾಗ, ಕಡೂರಿನ ಪೃಥ್ವಿ ಸೂರಿ ಸಾಹಿತ್ಯ ವಿಭಾಗ, ಎಸ್.ಸಿ ಜೀವನ್ ಕ್ರೀಡಾ ವಿಭಾಗ, ರಂಜಿತ್ ಕುಮಾರ್ ಕ್ರೀಡೆ ಮತ್ತು ಯೋಗ, ಸುಧಾಕರ್ ಸಮಾಜ ಸೇವೆ, ರಂಜಿತ ಕೊಪ್ಪ ಗಾಯನ, ಕಳಸದ ಸುಪ್ರತಾ, ಮಂಜುನಾಥ್ ಮೂಡಿಗೆರೆ, ಮಮತಾ ಮಹಿಳಾ ಸಮಾಜ ತರೀಕೆರೆ ಈ ಬಾರಿ ಪ್ರಶಸ್ತಿ ಪುರಸ್ಕೃತಗೊಳ್ಳಲಿದ್ದಾರೆ.
ತರೀಕೆರೆ ಶಾಸಕ ಡಿ.ಎಸ್ ಸುರೇಶ್, ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಡಾ.ಜನಪದ ಎಸ್ ಬಾಲಾಜಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸೇರಿದಂತೆ ಅನೇಕ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

.jpeg)



0 Comments