ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಜೂಜಾಟದಲ್ಲಿ ಭಾಗಿಯಾಗಿದ್ದ 08 ಜನರನ್ನು ಪೊಲೀಸರು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 

ಇದನ್ನೂ ಓದಿ : 112 ವರ್ಷ ಪ್ರಾಯದ ವಯೋವೃದ್ಧೆಯನ್ನು ಗುರುತಿಸಿ ಸನ್ಮಾನಿಸಿದ ಮಣಿಕಂಠ ಯುವಕ ಸಂಘದ ಪದಾಧಿಕಾರಿಗಳು

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಳಗುಳದಲ್ಲಿ ಈ ಘಟನೆ ನಡೆದಿದ್ದು ಅಕ್ರಮವಾಗಿ ಜೂಜಾಟದಲ್ಲಿ ಭಾಗಿಯಾಗಿದ್ದ 08 ಜನರನ್ನು ಮೂಡಿಗೆರೆ ಠಾಣೆಯ ಪಿಎಸ್ಸೈ ನೇತೃತ್ವದ ಪೊಲೀಸರ ತಂಡ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.


ಕಾರ್ಯಾಚರಣೆ ನಡೆಸಿದ ಪೊಲೀಸರು ಜೂಜಾಟ ಆಡುತ್ತಿದ್ದವರ ಬಳಿಯಿದ್ದ 5,320 ರೂಪಾಯಿ ನಗದು ಹಾಗೂ 08 ಜನ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. 

ಈ ಸಂಬಂಧ ಎಚ್ಚರಿಕೆ ನೀಡಿರುವ ಅಧಿಕಾರಿಗಳು ಹಣ ಕಳೆದುಕೊಳ್ಳುವ ಇಂತಹ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಯಾರಾದರೂ ಭಾಗಿಯಾಗಿರುವುದು ಕಂಡುಬಂದಲ್ಲಿ ಅಂತಹವರನ್ನು ಸೆರೆ ಹಿಡಿದು ಕಾನೂನಿನ ಅಡಿಯಲ್ಲಿ ಸೂಕ್ತವಾದ ಶಿಕ್ಷೆಗೆ ಒಳಪಡಿಸುವುದಾಗಿ ತಿಳಿಸಿದ್ದಾರೆ.