ಬಾಳೆಹೊನ್ನೂರು : (ನ್ಯೂಸ್ ಮಲ್ನಾಡ್ ವರದಿ) ಮನೆಯ ಮಾಲೀಕರನ್ನು ವಂಚಿಸಿ 27 ಲಕ್ಷ ರೂಪಾಯಿ ವಂಚನೆ ಮಾಡಿದ್ದ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ : ಇನ್ಮುಂದೆ ಧರ್ಮದ ವಿಷಯಕ್ಕೆ ಎಂಟ್ರಿ ಆಗಲ್ಲ ಅಂದ್ರಾ ಸಿದ್ದರಾಮಯ್ಯ?

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಪಟ್ಟಣದ ಕಗ್ಗಿನಗದ್ದೆ ರಸ್ತೆ ವಾಸಿ ಜೀವನ್ ಬಂಧಿತ ಆರೋಪಿ, ಈತನು ಕಳೆದ 12 ವರ್ಷಗಳಿಂದ ಕಡ್ಲೇಮಕ್ಕಿಯ ಜೋಗಿ ಹಡ್ಲುವಿನ ಅನ್ನಿ ಕ್ರಿಸ್ತೀನಾ ಸಿಕ್ವೇರಾ ಎಂಬುವವರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಜೀವನ್ ಮನೆಯವರನ್ನು ವಂಚಿಸಿ ಬ್ಯಾಂಕ್ ನ ಲಾಕರ್ ನಲ್ಲಿ ಇರಿಸಿದ್ದ ಆಭರಣಗಳನ್ನು ಬೇರೆ ಬ್ಯಾಂಕ್ ನ ಲಾಕರ್ ನಲ್ಲಿ ಇಡೋಣ ಎಂದು ನಂಬಿಸಿ ಅವರಿಂದ ಸಹಿ ಹಾಕಿಸಿಕೊಂಡು ಲಾಕರ್ ನಲ್ಲಿ ಒಡವೆ ಇಡದೇ ಅವರನ್ನು ವಂಚಿಸಿದ್ದ. 


ಇದಲ್ಲದೇ ಅವರ ಅಂಚೆ ಕಚೇರಿಯಲ್ಲಿದ್ದ ಆರ್.ಡಿ.ಎಂ.ಇ.ಎಸ್ ಖಾತೆಯ ಒಂದು ಲಕ್ಷ ರೂಪಾಯಿಗಳನ್ನು ಬಿಡಿಸಿಕೊಂಡು ವಂಚನೆ ನಡೆಸಿದ್ದ. ಈ ಕುರಿತಾಗಿ ಅನ್ನಿ ಸೀಕ್ವೆರಾ ಅವರ ಸೊಸೆ ಜೂಲಿಯಾನ ಸಿಕ್ವೇರಾ ಬಾಳೆಹೊನ್ನೂರಿನ ಪೋಲಿಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿದ್ದ ಪೋಲಿಸರು ಗುರುವಾರ ಆರೋಪಿ ಜೀವನ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಘಟನಾ ಸಂಬಂಧ ಆರೋಪಿಯನ್ನು ಬಂಧಿಸಿರುವ ಪೊಲೀಸರು ಈ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದು, ಅವರ ಸಂಪೂರ್ಣ ತನಿಖೆಯ ನಂತರವಷ್ಟೇ ಆರೋಪಿಯ ಕೃತ್ಯದ ಕುರಿತಾಗಿ ಸಂಪೂರ್ಣ ಮಾಹಿತಿ ಹೊರಬೀಳಲಿದೆ.