ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ಇಡೀ ದೇಶವೇ 75 ನೆಯ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಯ ಖುಷಿಯಲ್ಲಿ ಮಿಂದೆದ್ದು ಸಡಗರ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ. ಹರ್ ಘರ್ ತಿರಂಗಾ ಅಭಿಯಾನದ ಸಲುವಾಗಿ ಮನೆ, ಅಂಗಡಿಗಳ ಮೇಲೆ ತ್ರಿವರ್ಣ ಧ್ವಜಗಳು ರಾರಾಜಿಸುತ್ತಿದೆ ಆದರೆ ಕೆಲ ಕಿಡಿಗೇಡಿಗಳು ಭಾರತದ ತ್ರಿವರ್ಣ ಧ್ವಜವನ್ನು ಚರಂಡಿಗೆ ಎಸೆದು ಧ್ವಜಕ್ಕೆ ಅಪಮಾನ ಮಾಡಿದ್ದಾರೆ. 

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಪಟ್ಟಣದ ಚರಂಡಿಯಲ್ಲಿ ತ್ರಿವರ್ಣಧ್ವಜ ದೊರೆತಿದೆ. ಯಾವುದೋ ಕೆಲ ಕಿಡಿಗೇಡಿಗಳು ಈ ಕೃತ್ಯವನ್ನು ನಡೆಸಿದ್ದು ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅಥವಾ ಯಾವುದಾದರೂ ಕಟ್ಟಡಕ್ಕೆ ಕಟ್ಟಿದ ಧ್ವಜ ಮಳೆಗೆ ಬಿದ್ದಿರುವ ಸಾಧ್ಯತೆ ಸಹ ಇದೆ.

ಮೂಡಿಗೆರೆ : ಆನೆ ದಾಳಿಗೆ ವ್ಯಕ್ತಿ ಬಲಿ


ಇದನ್ನು ಕಂಡ ಶ್ರೀ ಕ್ಷೇತ್ರ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಕೂಡಲೇ ಚರಂಡಿಯಿಂದ ಧ್ವಜವನ್ನು ಮೇಲಕ್ಕೆತ್ತುವ ಕೆಲಸ ಮಾಡಿದ್ದಾರೆ. ಸಂಪೂರ್ಣವಾಗಿ ಕೆಸರಿನಿಂದ ತುಂಬಿದ್ದ ತ್ರಿವರ್ಣ ಧ್ವಜವನ್ನು ಮೇಲಕ್ಕೆತ್ತಿದ್ದಾರೆ.

ಸರ್ಕಾರ ಧ್ವಜವನ್ನು ಯಾವ ರೀತಿಯಾಗಿಟ್ಟುಕೊಳ್ಳಬೇಕು, ಹೇಗೆ ಹಾರಿಸಬೇಕು ಎಂಬೆಲ್ಲದರ ಕುರಿತಾಗಿ ನಿಯಮಾವಳಿಗಳನ್ನು, ಸೂಚನೆಗಳನ್ನು ಜನರಿಗೆ ತಲುಪಿಸಿದ್ದರೂ ಕೂಡ ಈ ರೀತಿಯ ಆಗೌರವವನ್ನು ಜನರು ರಾಷ್ಟ್ರಧ್ವಜಕ್ಕೆ ತೋರುತ್ತಿರುವುದು ವಿಪರ್ಯಾಸವಾಗಿದೆ. 

- ತನು ಕೊಟ್ಟಿಗೆಹಾರ, ವರದಿಗಾರರು