ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಹಿರಿಯ ಉಪ ವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. H.L ನಾಗರಾಜ್ ವರ್ಗಾವಣೆಗೊಳಿಗೆ ಸರ್ಕಾರದ ಅದೇಶ ಹೊರಡಿಸಿದೆ.

RELATED NEWS : ಸನ್ಯಾಸ ದೀಕ್ಷೆ ಪಡೆಯಲು ಹೊರಟಿದ್ದ ಎ.ಸಿ ನಾಗರಾಜ್ ಲೈಫ್ ಜರ್ನಿಯ ಸ್ಟೋರಿ ಇಲ್ಲಿದೆ

ಚಿಕ್ಕಮಗಳೂರು ಜಿಲ್ಲೆಯ ಉಪ ವಿಭಾಗಾಧಿಕಾರಿಯಾಗಿ ಕಾರ್ಯ ನಿರ್ವಹಣೆ ನಡೆಸಿದ್ದ, ಅವರು ಜಿಲ್ಲೆಯ ಜನರ ಅನೇಕ ಸಂಕಷ್ಟಗಳಿಗೆ ಸ್ಪಂದಿಸಿದ್ದರು. ಹಿರಿಯ ಉಪ ವಿಭಾಗಾಧಿಕಾರಿಯಾಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ್ದ ಹೆಗ್ಗಳಿಕೆ ಅವರದ್ದಾಗಿತ್ತು. ಪ್ರಸ್ತುತ ಚಿಕ್ಕಮಗಳೂರು ಜಿಲ್ಲೆಯಿಂದ ಮುಂಬಡ್ತಿಗೊಂಡು ಅಪರ ಜಿಲ್ಲಾಧಿಕಾರಿಯಾಗಿ ಮಂಡ್ಯಕ್ಕೆ ವರ್ಗಾವಣೆಗೊಂಡಿದ್ದಾರೆ. 


ಈ ಹಿಂದೆ ಸರ್ಕಾರವು ಅಪರ ಜಿಲ್ಲಾಧಿಕಾರಿಯಾಗಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾವಣೆ ಮಾಡಿತ್ತು. ಕೆಲ ಸಮಯದ ಬಳಿಕ ಆದೇಶವನ್ನು ಸರ್ಕಾರವೇ ಹಿಂಪಡೆದಿತ್ತು. ಮಂಡ್ಯದ ಅಪರ ಜಿಲ್ಲಾಧಿಕಾರಿಯಾಗಿದ್ದ ವಿ.ಆರ್ ಶೈಲಜಾ ಅವರ ಸ್ಥಾನಕ್ಕೆ ಡಾ. ನಾಗರಾಜ್ ಅವರನ್ನು ಮುಂದಿನ ಆದೇಶದವರೆಗೆ ಸರ್ಕಾರ ನೇಮಕ ಮಾಡಿ ವರ್ಗಾವಣೆಯ ಆದೇಶ ನೀಡಿದೆ.

ಅನೇಕ ಜನಪರ ಕಾರ್ಯಗಳನ್ನು ಜಿಲ್ಲೆಯ ಜನರಿಗಾಗಿ ನಡೆಸಿರುವ ಜನಪರ ಕಾಳಜಿಯನ್ನು ಹೊಂದಿರುವ ಡಾ. ನಾಗರಾಜ್ ಅವರಿಗೆ ಜಿಲ್ಲೆಯ ಜನರು ಶುಭಹಾರೈಸಿದ್ದಾರೆ.