ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಕಾರು ಹಾಗೂ ಬೈಕ್ ನಡುವೆ ಬೆಳ್ಳಂ ಬೆಳಿಗ್ಗೆ ಆಲ್ಟೋ ಕಾರ್ ಹಾಗೂ ಆಟೋ ರಿಕ್ಷಾ ನಡುವೆ ರಸ್ತೆ ಅಪಘಾತ ಸಂಭವಿಸಿದೆ.
ಇದನ್ನೂ ಓದಿ : ಶೃಂಗೇರಿ : ರಾಜ್ಯ ಹೆದ್ದಾರಿಯಲ್ಲಿ ಮೂಡಿದ ಬಿರುಕು ; ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್ ಅಳವಡಿಕೆ
ಶೃಂಗೇರಿ ಪಟ್ಟಣದಲ್ಲಿರುವ ಚಪ್ಪರದಾಂಜನೇಯ ದೇವಸ್ಥಾನದ ಸಮೀಪದಲ್ಲಿ ಆಲ್ಟೊ ಕಾರ್ ಹಾಗೂ ಆಟೋ ರಿಕ್ಷಾ ನಡುವೆ ಅಪಘಾತ ಸಂಭವಿಸಿದ್ದು ಆಟೋ ರಿಕ್ಷಾ ಚಾಲಕ ಗಾಯಗಳಿಗೆ ತುತ್ತಾಗಿದ್ದಾರೆ. ಅವರನ್ನು ಶೃಂಗೇರಿಯ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.
ಆಲ್ಟೋ ಕಾರ್ ಕಟ್ಟೆಬಾಗಿಲಿನ ಕಡೆಗೆ ಹಾಗೂ ಆಟೋ ಶೃಂಗೇರಿ ಬಸ್ ನಿಲ್ದಾಣದಿಂದ ಭಾರತೀ ಬೀದಿಯಲ್ಲಿ ಚಲಿಸುತ್ತಿದ್ದ ವೇಳೆ ಎರಡು ವಾಹನಗಳ ನಡುವೆ ಈ ಅವಘಡ ನಡೆದಿದೆ.
ಸಂಭವಿಸಿದ ಅಪಘಾತದ ತೀವ್ರತೆಗೆ ಆಟೋ ರಿಕ್ಷಾದ ಮುಂಭಾಗದ ಗಾಜು ಸಂಪೂರ್ಣವಾಗಿ ಜಖಂಗೊಂಡಿದ್ದು, ರಸ್ತೆಯ ತುಂಬಾ ಗಾಜು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಆಟೋ ವಿದ್ಯುತ್ ಕಂಬಕ್ಕೆ ಸಹ ಗುದ್ದಿದ್ದು ಮುಂಭಾಗ ಜಖಂಗೊಂಡಿದೆ.






0 Comments