ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ದೇಶದಾದ್ಯಂತ ನಡೆಯುತ್ತಿರುವ ಹರಘರ್ ತಿರಂಗಾ ಅಭಿಯಾನವು ರಾಜ್ಯದಲ್ಲೂ ನಡೆಯುತ್ತಿದ್ದು ಅಂಗಡಿ ಮನೆಗಳ ಮೇಲೆ ತ್ರಿವರ್ಣಧ್ವಜವನ್ನು ಹಾರಿಸಿ ಭಾರತೀಯರು ಸಂಭ್ರಮಿಸುತ್ತಿದ್ದಾರೆ.
ಅಂತೆಯೇ ಕಾಫಿ ನಾಡು ಚಿಕ್ಕಮಗಳೂರಿನಲ್ಲೂ ಕೂಡ ವಿಶೇಷವಾಗಿ ಕುರಿಕಾಯುವ ಕುರಿಗಾಯಿಗಳು ತಾವು ವಾಸಿಸುವ ಟೆಂಟ್ ನ ಮೇಲೆ ಭಾರತದ ತ್ರಿವರ್ಣಧ್ವಜವನ್ನು ಹಾರಿಸುವ ಮೂಲಕ ರಾಷ್ಟ್ರಭಕ್ತಿಯನ್ನು ಮೆರೆದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿ ತೋಟವೊಂದರಲ್ಲಿ ಟೆಂಟ್ ಕಟ್ಟಿಕೊಂಡು ವಾಸಮಾಡುವ ಚಿತ್ರದುರ್ಗ ಮೂಲದ ಕುರಿಗಾಯಿ ಕುಟುಂಬವರ್ಗದವರು ರಾಷ್ಟ್ರಧ್ವಜ ಹಾರಿಸಿ ಸಂಭ್ರಮಿಸಿದ್ದಾರೆ. .
ಇದನ್ನೂ ಓದಿ : ಶೃಂಗೇರಿಯ ಈ ಗ್ರಾಮವನ್ನು ತಲುಪಲು ರಸ್ತೆಯಿಲ್ಲ, ವಿದ್ಯುತ್ ಸಂಪರ್ಕವಂತೂ ಸ್ವಾತಂತ್ರ್ಯಾಪೂರ್ವದಿಂದಲೇ ಇಲ್ಲ
ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ಅದರ ಆಚರಣೆಯ ನಿಮಿತ್ತ ತಾತ್ಕಾಲಿಕವಾಗಿ ನಿರ್ಮಿಸಿಕೊಂಡ ತೋಟದೊಳಗಿನ ಟೆಂಟ್ ನ ಮೇಲೆ ತ್ರಿವರ್ಣಧ್ವಜವನ್ನು ಹಾರಿಸಿ ಗೌರವ ಮೆರೆದಿರುವ ಈ ಕುಟುಂಬದ ಮೇಲೆ ಸ್ಥಳೀಯರು ಕೂಡ ಉತ್ತಮವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಬಡವರಾದರೂ ಕೂಡ ಅಪಾರವಾದ ದೇಶಭಕ್ತಿಯನ್ನು ಹೊಂದಿ ಈ ಅಭಿಯಾನದಲ್ಲಿ ಭಾಗವಹಿಸಿ ರಾಷ್ಟ್ರಭಕ್ತಿ ಮೆರೆದಿರುವುದನ್ನು ಸ್ಥಳೀಯರು ಪ್ರಶಂಸಿಸಿದ್ದಾರೆ.
ಈ ಬಾರಿಯ 75 ನೆಯ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಜಿಲ್ಲೆಯ ಹಲವು ಭಾಗಗಳಲ್ಲಿ ತಿರಂಗಾ ಯಾತ್ರೆ, ಬೈಕ್ ಕಾರ್ ರ್ಯಾಲಿಗಳು ಅದ್ದೂರಿಯಾಗಿ ನಡೆಯುತ್ತಿದೆ.






0 Comments