ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಕರಿದ್ದಾರೆ ಅವರನ್ನು ಉಳಿಸಿಕೊಂಡು ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಸರ್ಕಾರ ಹಾಗೂ ಪೋಷಕರಲ್ಲಿದೆ ಎಂದು ಅಮ್ಮ ಫೌಂಡೇಶನ್ ಸಂಸ್ಥಾಪಕ ಸುಧಾಕರ್ ಎಸ್ ಶೆಟ್ಟಿ ಅವರು ಹೇಳಿದರು.
ಇಂದು ಕೋಡೂರು ಶಾಲೆಯ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ದೇಶದ ಪ್ರತಿಷ್ಠಿತ ರಾಜಕೀಯದವರು, ಅಧಿಕಾರಿಗಳು ಇರಬಹುದು ಅಥವಾ IAS, IPSಗಳು ಇರಬಹುದು ಹೆಚ್ಚಿನವರು ಸರ್ಕಾರಿ ಶಾಲೆಯಲ್ಲಿ ಓದಿದವರು ಇದ್ದಾರೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಕಾಣಬಹುದು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪೋಷಕರಿಗೆ ಜನರ ಜೀವನಾಡಿಯ ಅರ್ಥವಾಗಿರುತ್ತದೆ ಎಂದು ಹೇಳಿದರು.
ಶಿಕ್ಷಣ ಮತ್ತು ಶಿಕ್ಷಕ ಎರಡು ಅತ್ಯುತ್ತಮವಾಗಿದ್ದರೆ ಆ ಶಾಲೆಯ ಗುಣಮಟ್ಟ ಉತ್ತಮವಾಗಿರುತ್ತದೆ. ಆ ದೃಷ್ಟಿಯಲ್ಲಿ ಕೊಡೂರು ಗ್ರಾಮ ಸರ್ಕಾರಿ ಶಾಲೆಯು ಇಂದು ಶಿಕ್ಷಣ ಮತ್ತು ಶಿಕ್ಷಕ ಇಬ್ಬರು ಸಮರ್ಥರಾಗಿದ್ದಾರೆ. ಆದ್ದರಿಂದ ಸರ್ಕಾರಿ ಶಾಲೆಯಿಂದ ಖಾಸಗಿ ಶಾಲೆಗಳ ವ್ಯಾಮೋಹವನ್ನು ಪೋಷಕರು ಕಮ್ಮಿ ಮಾಡಬೇಕೆಂದು ಈ ಸಂದರ್ಭದಲ್ಲಿ ಹೇಳಿದರು.
ಸರ್ಕಾರಿ ಶಾಲೆ ಎಂಬ ತಿರಸ್ಕಾರ ಭಾವನೆಯು ಪೋಷಕರಲ್ಲಿ ಕಡಿಮೆ ಆಗಬೇಕಿದೆ ಅದರಲ್ಲೂ ಖಾಸಗಿ ಶಾಲೆಗಳ ಆಕರ್ಷಣೆಗೆ ಒತ್ತು ನೀಡುವ ಬದಲು ಸರ್ಕಾರಿ ಶಾಲೆಯ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪೋಷಕರು ಸಹ ಶಿಕ್ಷಕರೊಂದಿಗೆ ಸಹಕರಿಸಬೇಕೆನ್ನುವ ಮಾತನ್ನು ಒತ್ತಿ ಹೇಳಿದರು.
ಕೋಡೂರು ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಆನಂದರವರು, ಶಾನುವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಂದಿನಿ ಸಂತೋಷ್,ಮಾಜಿ ಅಧ್ಯಕ್ಷರಾದ ಶಿವಕರ್ ಶೆಟ್ಟಿ, ತಾಲ್ಲೂಕು ಪಂಚಾಯಿತಿಯ ಸದಸ್ಯರಾಗಿದ್ದ ಶ್ರೀಮತಿ ಮಂಜುಳ ಮಂಜುನಾಥ್, ಶಾಲೆಯ ಮುಖ್ಯ ಶಿಕ್ಷಕರಾದ ಓಂಕಾರಪ್ಪ ಹಾಗೂ ಶಾಲೆಯ ಹಿಂದಿನ ಮುಖ್ಯ ಶಿಕ್ಷಕರು ಹಾಗೂ ಇಂದು ಜೆಡಿಎಸ್ ಪಕ್ಷದ ಶಿಕ್ಷಣ ಇಲಾಖೆಯನ್ನು ನೋಡಿಕೊಳ್ಳುತ್ತಿರುವ ಶ್ರೀ ಸತೀಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಕರುವಾನೆ ನವೀನ್ ರವರು ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.





0 Comments