ಹಾಸನ : (ನ್ಯೂಸ್ ಮಲ್ನಾಡ್ ವರದಿ ) ಅಕ್ರಮವಾಗಿ ಜೂಜಾಟದಲ್ಲಿ ಭಾಗಿಯಾಗಿದ್ದ ಐವರನ್ನು ಕಾರ್ಯಾಚರಣೆಯ ಮೂಲಕ ಹಾಸನದ ಪೊಲೀಸರು ಬಂಧಿಸಿ ಜೂಜಾಡುತ್ತಿದ್ದವರ ಬಳಿಯಿದ್ದ ಹಣವನ್ನು ಹಾಗೂ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : ಮದುವೆ ಮುಗಿಯುತ್ತಿದ್ದಂತೆ ಅರ್ಚಕ, ಫೋಟೋಗ್ರಾಫರ್, ಅಡುಗೆ ಮಾಡಿದವ ಸೇರಿದಂತೆ ಎಲ್ಲರ ಮೇಲೆ ಬಿತ್ತು ಕೇಸ್ : ಏನಿದು ಪ್ರಕರಣ? ಇಲ್ಲಿದೆ ಡೀಟೇಲ್ಸ್

ಹಾಸನ ತಾಲೂಕಿನ ಗವೇನಹಳ್ಳಿ ಗ್ರಾಮದ ಬಳಿಯಲ್ಲಿ ಜೂಜಾಡುತ್ತಿದ್ದ ಸುರೇಶ್, ಸೂರ್ಯನಾರಾಯಣ, ವಸಂತ್ ಕುಮಾರ್, ಯೋಗೇಶ್, ನಾಗೇಶ್ ಎಂಬುವವರನ್ನು ದಸ್ತಗಿರಿ ಮಾಡಿಕೊಂಡು, ಜೂಜಾಡಲು ಇಟ್ಟುಕೊಂಡಿದ್ದ 3680 ರೂಪಾಯಿ ನಗದನ್ನು ಪೊಲೀಸರು ವಶಕ್ಕೆ ಪಡೆದು ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.


ಜಿಲ್ಲೆಯ ವಿವಿಧ ಭಾಗಗಳಲ್ಲಿ ಜನರು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದು ಈ ಕುರಿತು ಕಾರ್ಯಾಚರಣೆ ನಡೆಸಿರುವ ಪೊಲೀಸರು ಯಶಸ್ವಿಯಾಗಿ ಆರೋಪಿಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ. ಈ ಕುರಿತಾಗಿ ಎಚ್ಚರಿಕೆ ನೀಡಿರುವ ಪೊಲೀಸರು ಸಾರ್ವಜನಿಕರು ಇಂತಹ ಕೃತ್ಯಗಳಲ್ಲಿ ಭಾಗಿಯಾಗಬಾರದು ಹಾಗೂ ಈ ರೀತಿಯ ಚಟುವಟಿಕೆಗಳಲ್ಲಿ ಯಾರಾದರೂ ಭಾಗಿಯಾಗಿರುವುದು ಕಂಡುಬಂದಲ್ಲಿ ತಿಳಿಸುವಂತೆ ಸೂಚಿಸಿದ್ದಾರೆ. 

ಘಟನಾ ಸಂಬಂಧ ಹಾಸನದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮಕ್ಕೆ ಅನುವುಮಾಡಿದ್ದಾರೆ.