ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ನಾಲ್ಕು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ಕೊಪ್ಪದ ಕೆಸವೆ ಗ್ರಾಮದ ಯುವಕನ ಮೃತ ಶರೀರವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೆಸವೆ ನಿವಾಸಿ ಶಶಿಕುಮಾರ್ (26) ಎಂಬ ಯುವಕ ಕಳೆದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ. ಈ ಕುರಿತಾಗಿ ಮನೆಯವರು ಎಲ್ಲೆಡೆ ಹುಡುಕಿ ಕೊನೆಗೆ ಸಿಗದೇ ಇದ್ದಾಗ ಆತನ ಪತ್ತೆಗಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ : 36,000 ಕಿ.ಮೀ ಸೈಕಲ್ ತುಳಿದ ಮಾಜಿ ಯೋಧನಿಂದ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮ
ಎಷ್ಟು ಹುಡುಕಿದರೂ ಎಲ್ಲೂ ಆತನ ಸುಳಿವು ದೊರೆಯದೇ ಇದ್ದು, ಇಂದು ಮನೆಯ ಹಿಂಭಾಗದ ಕಾಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶಶಿಕುಮಾರ್ ನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾಣೆಯಾದ ದಿನದಿಂದ ಮನೆಯವರು, ಸ್ಥಳೀಯರು ಸೇರಿ ಹಲವೆಡೆ ಹುಡುಕಾಟ ನಡೆಸಿದ್ದರು. ಆದರೆ ಆತನ ಸುಳಿವು ಸಿಕ್ಕಿರಲಿಲ್ಲ. ಇಂದು ಮತ್ತೆ ಹುಡುಕಾಟ ನಡೆಸಿದಾಗ ಮನೆಯ ಹಿಂಬದಿಯ ಕಾಡಿನಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಆತನ ದೇಹ ಪತ್ತೆಯಾಗಿದೆ.
ಮೃತನ ಸಾವಿನ ಕುರಿತು ಮನೆಯವರು ಹಾಗೂ ಸ್ನೇಹಿತರು ಅತೀವವಾದ ನೋವನ್ನು ವ್ಯಕ್ತಪಡಿಸಿದ್ದು ಆತನ ಸಾವಿಗೆ ನಿಖರ ಕಾರಣಗಳೇನು ಎಂಬ ಕುರಿತಾಗಿ ಪೊಲೀಸರ ಸಂಪೂರ್ಣ ತನಿಖೆಯ ನಂತರವಷ್ಟೇ ಮಾಹಿತಿ ಹೊರಬೀಳಬೇಕಿದೆ.
![]() |

.jpeg)




0 Comments