ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರ ಘೋಷಿಸಿರುವ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಇಂದು ಕಾವಡಿ ಗ್ರಾಮದ ಮನೆಗಳಿಗೆ ತ್ರಿವರ್ಣ ಧ್ವಜವನ್ನು ಉಚಿತವಾಗಿ ತಲುಪಿಸುವ ಕೆಲಸವನ್ನು ಜನಪ್ರತಿನಿಧಿಗಳು ನಡೆಸಿದರು. 

ಶೃಂಗೇರಿ ತಾಲೂಕಿನ ಅಡ್ಡಗದ್ದೆ ಗ್ರಾಮ ಪಂಚಾಯತ್ ಸದಸ್ಯರಾದ ರಾಘವೇಂದ್ರ ಹಂಚಲಿ ರವರು ಕಾವಡಿ ಗ್ರಾಮದ ಮನೆಗಳಿಗೆ ಖಾದಿವಸ್ತ್ರದ ತ್ರಿವರ್ಣ ಧ್ವಜವನ್ನು ಉಚಿತವಾಗಿ ವಿತರಿಸಿ ಅಮೃತ ಮಹೋತ್ಸವದ ಸಡಗರದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಹಾಗೂ ದೇಶಭಕ್ತಿಯನ್ನು ಇನ್ನಷ್ಟು ಇಮ್ಮಡಿಗೊಳಿಸಿಕೊಳ್ಳುವಂತೆ ಕೋರಿದರು. 

ರಾಷ್ಟ್ರ ಧ್ವಜದ ಕುರಿತಾಗಿನ ಪಾವಿತ್ರ್ಯತೆಯನ್ನು ಸಾರ್ವಜನಿಕರಿಗೆ ಈ ಸಂದರ್ಭದಲ್ಲಿ ತಿಳಿಸಿದರು. ರಾಘವೇಂದ್ರ ಹಂಚಲಿ ಅವರೊಂದಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿವಾಜಿ ಹುಲಿಮನೆ, ಸಂಜಯ್ ಮೀಗಿನಕಲ್ಲು, ಗ್ರಾಮ ಸೇವಕ ಸುನೀಲ್ ಕುಮಾರ್ ಉಪಸ್ಥಿತರಿದ್ದರು.