ಭದ್ರಾವತಿ : (ನ್ಯೂಸ್ ಮಲ್ನಾಡ್ ವರದಿ) ಕಳೆದೆರಡು ದಿನಗಳ ಹಿಂದೆ ಶಿವಮೊಗ್ಗದಲ್ಲಿ ಚಾಕು ಇರಿತ ನಡೆದಿತ್ತು, ಈ ನಂತರದಲ್ಲಿ ಭದ್ರಾವತಿಯಲ್ಲಿ ಸಹ ಚಾಕು ಇರಿತಕ್ಕೆ ವ್ಯಕ್ತಿ ಒಳಗಾಗಿದ್ದ. ಇದನ್ನೂ ಬಿಜೆಪಿಯವರುಬೇಕೆಂದೇ ಕೋಮು ಗಲಭೆ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಚಲಿಸುತ್ತಿದ್ದ KKB ಬಸ್ ನ ಬ್ರೇಕ್ ಫೇಲ್ ; ಬಸ್ ನಿಲ್ಲಿಸಲು ಚಾಲಕ ಮಾಡಿದ್ದೇನು ಗೊತ್ತಾ ?
ಈ ಕುರಿತು ಮಾತನಾಡಿದ ಅವರುಆತ್ಮಸಾಕ್ಷಿ ಎಂಬುದು ಇದ್ದರೆ ಬಿಜೆಪಿಯವರು ಭದ್ರಾವತಿಯಲ್ಲಿ ವೈಯುಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದ ಗಲಾಟೆಯನ್ನ ಕೋಮುಗಲಭೆ ಅಂತ ಸಾಬೀತುಪಡಿಸಲಿ. ಒಂದು ವೇಳೆ ಅವರು ಕೋಮುಗಲಭೆ ಎಂದೇ ಸಾಬೀತು ಪಡಿಸಿದ್ದು ಆದಲ್ಲಿ ರಾಜಕೀಯದಿಂದ ನಿವೃತ್ತಿ ಕೈಗೊಳ್ಳುವುದಾಗಿ ಶಾಸಕ ಸಂಗಮೇಶ್ವರ್ ತಿಳಿಸಿದರು.
ಕೆ.ಎಸ್ ಈಶ್ವರಪ್ಪ ವಿರುದ್ಧ ಕಿಡಿ :
ವೈಯುಕ್ತಿಕ ದ್ವೇಷದಿಂದ ಬಡಿದಾಡಿಕೊಂಡ ಸುನೀಲ್ ವಿಚಾರದಲ್ಲಿ ಈಶ್ವರಪ್ಪ ಆಸ್ಪತ್ರೆಗೆ ಭೇಟಿ ನೀಡಿರುವುದು ರಾಜಕೀಯದ ಹಿನ್ನಲೆಯಿಂದಾಗಿದೆ. ಅನೇಕ ಬಾರಿ ಕಾರ್ಮಿಕರ, ಅಧಿಕಾರಿಗಳ ಪ್ರತಿಭಟನೆ ವೇಳೆ ಅವರ ಸಮಸ್ಯೆಯನ್ನು ಕೇಳಲು ಬಾರದ ಈಶ್ವರಪ್ಪ ಈ ಹೊಡೆದಾಟಕ್ಕೆ ಕೋಮುಬಣ್ಣವನ್ನ ಹಚ್ಚಲು ಬಂದಿದ್ದಾರೆ. ಭದ್ರಾವತಿ ಜನ ಪ್ರಭುದ್ದರು ಇಂತಹ ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದು ಮನವಿ ಮಾಡಿಕೊಂಡರು. ಹಾಗೂ ಪ್ರಚೋದನೆಗೆ ಒಳಗಾಗದಂತೆ ಕೋರಿದರು.
ಹಲ್ಲೆ ನಡೆಸಿದ ಮುಬಾರಕ್ ಮತ್ತು ಸುನೀಲ್ ಇಬ್ಬರೂ ಜೂಜು ಆಡಿದ ವ್ಯಕ್ತಿಗಳು, ವೈಯುಕ್ತಿಕ ದ್ವೇಷ ಬೇರಾವುದೋ ಹಿನ್ನೆಲೆಯಿಂದ ಹಲ್ಲೆಮಾಡಿಕೊಂಡಿದ್ದಾರೆ. ಆದರೆ ಬಿಜೆಪಿಯ ಕೆಲವರು ಇದನ್ನ ಕೋಮುದಳ್ಳುರಿ ಎಂಬಂತೆ ಬಿಂಬಿಸುತ್ತಿದ್ದಾರೆ, ಇದಕ್ಕೆ ಇನ್ನೇನು ಕೆಲವೇ ತಿಂಗಳುಗಳಲ್ಲಿ ಎದುರಾಗುವ ಚುನಾವಣೆಯೇ ಕಾರಣವೆಂಬ ಗಂಭೀರ ಆರೋಪವನ್ನು ಮಾಡಿದರು.
ನಾನು ನನ್ನ ಮಕ್ಕಳ ಮೇಲೆ ಯಾವ ದೇವಸ್ಥಾನಕ್ಕೆ ಬಂದು ಬೇಕಾದರೂ ಆಣೆ ಮಾಡಿ ಹೇಳುತ್ತೇನೆ ಇದು ಕೋಮುಗಲಭೆ ಅಲ್ಲ, ಬಿಜೆಪಿಯ ನಾಯಕರು ಅವರ ಮಕ್ಕಳನ್ನ ದೇವಸ್ಥಾನಕ್ಕೆ ಕರೆದುಕೊಂಡು ಬಂದು ಆಣೆ ಮಾಡಲಿ ಎಂದು ಕಿಡಿಕಾರಿದರು. ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಭದ್ರಾವತಿಯಲ್ಲಿ ಅಭಿವೃದ್ಧಿ ಮಾಡಬೇಕಿರುವ ಸಾಕಷ್ಟು ವಿಚಾರಗಳಿದೆ. ಅದನ್ನ ಬಿಜೆಪಿಯವರು ಮಾಡಲಿ, 500 ದೇವಸ್ಥಾನಕ್ಕೆ ಅನುದಾನ ನೀಡಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇನೆ ನಾನು ಕಾಂಗ್ರೆಸ್ ಪಕ್ಷದ ಶಾಸಕ ಎಂಬ ಕಾರಣಕ್ಕೆ ಅನುದಾನ ಬಿಡುಗಡೆ ಮಾಡಿಲ್ಲ. ಹಿಂದುತ್ವ ಎನ್ನುವ ಬಿಜೆಪಿ ದೇವಸ್ಥಾನಕ್ಕೆ ಅನುದಾನ ನೀಡಬಹುದಿತ್ತು. ಆದರೆ ನೀಡಿಲ್ಲ ಇದು ವಿಪರ್ಯಾಸ ಎಂದರು




.jpeg)

0 Comments