ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬೆಳಗಿನಕೊಡುಗೆ ಗ್ರಾಮದಲ್ಲಿರುವ ಬಿ.ಜಿ ಕಟ್ಟೆ ಮತ್ತು ಅಗಳಗಂಡಿ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬೃಹದಾಕಾರದ ಮರವಿದ್ದು ಅದನ್ನು ಸಾರ್ವಜನಿಕರ ಸಂಚಾರದ ಅನುಕೂಲಕ್ಕಾಗಿ ತೆರವುಗೊಳಿಸಿ ಕೊಡಬೇಕೆಂದು ಸ್ಥಳೀಯರು ಕೋರಿದ್ದಾರೆ.
ಇದನ್ನೂ ಓದಿ : ಭಾರೀ ಮಳೆಯಿಂದ ಮೂಡಿಗೆರೆಯಲ್ಲಿ ಸಾಲು ಸಾಲು ಅವಾಂತರ
ಈ ಹಿಂದಿನಿಂದಲೂ ಮರವನ್ನು ತೆರವುಗೊಳಿಸಿಕೊಡುವಂತೆ ಅರಣ್ಯ ಇಲಾಖೆಯ ಅಧಿಕಾರಿವರ್ಗಕ್ಕೆ ಮನವಿ ಸಲ್ಲಿಸಿದರೂ ಕೂಡ ಅವರು ಸೂಕ್ತವಾದ ಸ್ಪಂದನೆ ನೀಡುತ್ತಿಲ್ಲ ಎಂಬುದು ಸ್ಥಳೀಯರ ದೂರಾಗಿದ್ದು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ತುರ್ತಾಗಿ ಗಮನಹರಿಸಬೇಕೆಂದು ಇಲ್ಲಿನ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತುಂಬಾ ತಿರುವುಗಳನ್ನು ಹೊಂದಿರುವ ಹಾಗೂ ಇಕ್ಕಟ್ಟಿನ ರಸ್ತೆಯಿದಾಗಿದ್ದು ಬೃಹದಾಕಾರದ ಮರ ರಸ್ತೆಯ ಪಕ್ಕದಲ್ಲೇ ಇರುವುದರಿಂದ ವಾಹನ ಸವಾರರಿಗೆ ತೀವ್ರ ಸ್ವರೂಪದ ತೊಂದರೆಯಾಗಿದೆ. ಎದುರಾಗಿರುವ ಸಮಸ್ಯೆಯ ಕುರಿತಾಗಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು - ಬಿ.ಜಿ ಶ್ರೀಕಾಂತ್ ಗ್ರಾಮ ಪಂಚಾಯತ್ ಸದಸ್ಯ, ಭುವನಕೋಟೆ
ಈ ರಸ್ತೆ ಮಾರ್ಗದಲ್ಲಿ ಹೆಚ್ಚಿನ ತಿರುವುಗಳಿದ್ದು ಹಾಗೂ ಕಡಿದಾದ ರಸ್ತೆ ಇದಾಗಿದ್ದು ಈ ಸ್ಥಳದಲ್ಲಿ ಅನೇಕ ಅಪಘಾತಗಳು ಸಂಭವಿಸಿದೆ ಎಂಬುದು ಸ್ಥಳೀಯರ ಗಂಭೀರ ಸಮಸ್ಯೆಯಾಗಿದ್ದು ಅಧಿಕಾರಿಗಳು ಈ ಕುರಿತು ಗಮನಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.






0 Comments