ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಕಳೆದ ಕೆಲ ದಿನಗಳ ಹಿಂದೆ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದ ಕೊಪ್ಪದ ಆಟೋ ರಿಕ್ಷಾ ಚಾಲಕ ದೀಪಕ್ ನ ಸಾವಿನ ಕುರಿತು ವಿಶೇಷ ತಂಡದ ರಚಿಸಿ ತನಿಖೆ ನಡೆಸಿ ಸಾವಿಗೆ ನಿಖರ ಕಾರಣಗಳೇನು ಎಂಬುದನ್ನು ಪತ್ತೆ ಮಾಡಬೇಕೆಂದು ಬ್ಲಾಕ್ ಕಾಂಗ್ರೆಸ್ ಒತ್ತಾಯಿಸಿದೆ.
ಕಳೆದ ಕೆಲ ದಿನಗಳ ಹಿಂದೆ ಇದ್ದಕ್ಕಿದ್ದಂತೆ ಆಟೋಚಾಲಕ ದೀಪಕ್ ಗೌಡ ನಾಪತ್ತೆಯಾಗಿದ್ದರು. ಆ ನಂತರದಲ್ಲಿ ಆತನ ಪತ್ತೆಗಾಗಿ ಮನೆಯವರು, ಸ್ನೇಹಿತರು ವಿವಿಧ ಕಡೆಗಳಲ್ಲಿ ಹುಡುಕಿ ಎಲ್ಲೂ ಸಿಗದೇ ಇದ್ದಾಗ ಪೊಲೀಸ್ ಕಂಪ್ಲೆಂಟ್ ಸಹ ನೀಡಿದ್ದರು. ಆ ನಂತರದ ದಿನಗಳಲ್ಲಿ ದೀಪಕ್ ಗೌಡ ಅವರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಕೊಪ್ಪದ ಮುಸರೇಹಳ್ಳದಲ್ಲಿ ಪತ್ತೆಯಾಗಿತ್ತು.
ಇದನ್ನೂ ಓದಿ: ಮಲೆನಾಡಿನಲ್ಲಿ ಭಯವಿಲ್ಲದೇ ನಡೆಯುತ್ತಿರುವ ಗೋಹತ್ಯೆ : ರಸ್ತೆಯ ಪಕ್ಕದಲ್ಲೇ ಪ್ಲಾಸ್ಟಿಕ್ ಕವರ್ ನಲ್ಲಿ ದನದ ಕಾಲುಗಳು ಪತ್ತೆ
ಆತನ ಮೈಮೇಲೆ ಶರ್ಟ್ ಇರಲಿಲ್ಲ, ಹಣೆ ಹಾಗೂ ತಲೆಯಲ್ಲಿ ಪೆಟ್ಟಿನ ಗುರುತುಗಳಿದ್ದವು, ಇದು ಸಹಜ ಸಾವಲ್ಲ ಎಂಬುದಾಗಿ ಸಾವಿನ ಕುರಿತು ಅನುಮಾನ ಇದೆ ಎಂಬುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಅವರು, ದೀಪಕ್ ನ ಕೊಲೆಯಾದಂತೆ ಸಂಶಯ ಮೂಡುತ್ತಿದ್ದು, ಇದರಿಂದಾಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಎದುರಾಗಿದ್ದು ಜನರಲ್ಲಿ ಭಯದ ವಾತಾವರಣ ಎದುರಾಗಿದೆ. ವಿಶೇಷ ತಂಡದ ರಚನೆಯ ಮೂಲಕ ತನಿಖೆ ನಡೆಸಿ ದೀಪಕ್ ನ ಸಾವಿಗೆ ಕಾರಣರಾದವರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಿ ನ್ಯಾಯ ಒದಗಿಸಬೇಕೆಂದು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಆಗ್ರಹಿಸಿದರು.
ಕಾಂಗ್ರೆಸ್ ನಿಂದ ಹಕ್ಕೊತ್ತಾಯ :
ದೀಪಕ್ ನ ಸಾವಿಗೆ ನ್ಯಾಯ ಒದಗಿಸಬೇಕು, ವಿಶೇಷ ತಂಡದ ರಚನೆಯ ಮೂಲಕ ಅತೀ ಶೀಘ್ರವಾಗಿ ಸಂಪೂರ್ಣ ತನಿಖೆ ನಡೆಸಬೇಕು ಈ ಮೂಲಕ ಸಮಾಜದಲ್ಲಿ ಮೂಡಿರುವ ಭಯದ ವಾತಾವರಣವನ್ನು ಅಧಿಕಾರಿಗಳು ಶಮನ ಮಾಡಬೇಕು ಎಂಬ ಉದ್ದೇಶದಿಂದ ಆಗಸ್ಟ್ 28 ರಂದು ಠಾಣೆಯ ಎದುರು ಬ್ಲಾಕ್ ಕಾಂಗ್ರೆಸ್ ನಿಂದ ಹಕ್ಕೊತ್ತಾಯ ನಡೆಸಲಾಗುವುದು ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.
ಮೃತ ದೀಪಕ್ ಗೌಡ ಅವರ ಕುಟುಂಬಸ್ಥರಿಗೆ ನ್ಯಾಯ ದೊರಕಿಸುವ ಸಲುವಾಗಿ ಬ್ಲಾಕ್ ಕಾಂಗ್ರೆಸ್ ಕಾರ್ಯನಿರ್ವಹಿಸಲಿದೆ, ಅವರ ಸಾವಿಗೆ ನ್ಯಾಯ ದೋರಕಲೇಬೇಕೆಂದು ಕಾಂಗ್ರೆಸ್ ನ ಮುಖಂಡರು ತಿಳಿಸಿದ್ದಾರೆ.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನುಗ್ಗಿ ಮಂಜುನಾಥ್, ಕಾಂಗ್ರೆಸ್ ಮುಖಂಡರಾದ ಬರ್ಕತ್ ಅಲಿ, ಜಿಲ್ಲಾ ಕಾರ್ಯದರ್ಶಿ ಅನ್ನಪೂರ್ಣ, ರಘು, ಪ್ರವೀಣ್, ರಾಮಪ್ಪ ಕೆಸವೆ, ಐವನ್ ಜೋಯೆಲ್, ಸಂತೋಷ್, ಪ್ರವೀಣ್ ಇದ್ದರು.

.jpeg)




0 Comments