ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಪ್ರವಾಸಿ ತಾಣ ಹಾಗೂ ಧಾರ್ಮಿಕ ಕ್ಷೇತ್ರವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಕ್ರಮವಾಗಿ ತಲೆಎತ್ತಿರುವ ಹೋಂ ಸ್ಟೇಗಳನ್ನು ಶೀಘ್ರವೇ ಮುಚ್ಚಿಸುವ ಕೆಲಸ ನಡೆಯಲಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದರು.
ಇದನ್ನೂ ಓದಿ : ಸಾರ್ವಜನಿಕ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ಸಾಧ್ಯತೆ; ಇಬ್ಬರು ರೌಡಿ ಶೀಟರ್ ಗಳು ಗಡಿಪಾರು
ಈ ಕುರಿತು ಮಾಹಿತಿ ನೀಡಿದ ಅವರು ಜಿಲ್ಲೆಯಲ್ಲಿರುವ ಅನಧಿಕೃತ ಹೋಂಸ್ಟೇಗಳಿಗೆ ನೋಟಿಸ್ ಜಾರಿಮಾಡಿ ಸದ್ಯದಲ್ಲೇ ಮುಚ್ಚಿಸಲಾಗುವುದು, ಚಿಕ್ಕಮಗಳೂರು ಜಿಲ್ಲೆಯ 730 ಹೋಂ ಸ್ಟೇಗಳಲ್ಲಿ 503 ಹೋಂ ಸ್ಟೇಗಳು ಪರವಾನಗಿ ಹೊಂದಿವೆ. ಉಳಿದವು ಪರವಾನಗಿ ಹೊಂದಿವೆಯೇ ಎಂಬುದರ ಕುರಿತು ಸರ್ವೇ ನಡೆಸಲಾಗುತ್ತಿದೆ, ಸರ್ವೇ ಕಾರ್ಯ ಮುಗಿದ ನಂತರದಲ್ಲಿ ಈ ಕುರಿತಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಹಿಂದೆ ಜಿಲ್ಲೆಯಲ್ಲಿ ಅನಧಿೃತವಾಗಿ ತಲೆಯೆತ್ತಿರುವ ಹೋಂ ಸ್ಟೇ ಗಳಿಂದ ಎದುರಾಗುತ್ತಿರುವ ಸಮಸ್ಯೆಯ ಕುರಿತು ಕ್ರಮ ಕೈಗೊಳ್ಳಬೇಕು ಇದರಿಂದಾಗಿ ನೋಂದಣಿ ಮಾಡಿಕೊಂಡು ಜನರಿಗೆ ಉತ್ತಮ ಹಾಗೂ ಉತ್ಕೃಷ್ಟವಾದ ಸೇವೆಗಳನ್ನು ನೀಡುತ್ತಾ ಬಂದಿರುವ ಅಧಿಕೃತ ಹೋಂ ಸ್ಟೇಗಳಿಗೂ ತೊಂದರೆ ಎದುರಾಗಿದೆ ಎಂದು ಹೋಂ ಸ್ಟೇ ಅಸೋಸಿಯೇಶನ್ ಪದಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್, ಜಿಲ್ಲಾಧಿಕಾರಿಗಳಾದ ಕೆ.ಎನ್ ರಮೇಶ್ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಜಿ ಪ್ರಭು ಅವರಲ್ಲಿ ಮನವಿ ಮಾಡಿದ್ದರು. ಈ ನಿಟ್ಟಿನಲ್ಲಿ ಮಾಹಿತಿ ಸಂಗ್ರಹಿಸಲು ಸೂಚಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸರ್ವೇ ನಂತರದಲ್ಲಿ ಕ್ರಮದ ಭರವಸೆ ನೀಡಿದ್ದಾರೆ.
ಇದಲ್ಲದೇ ಪೋಲೀಸ್ ಠಾಣೆಗಳಿಗೆ ದೂರು ನೀಡಲು ಬರುವವರನ್ನು ಕೂರಿಸಿ ಅವರ ಸಮಸ್ಯೆಯನ್ನು ಆಲಿಸಿ ಸಾರ್ವಜನಿಕರೊಂದಿಗೆ ಒಳ್ಳೆಯ ರೀತಿಯಲ್ಲಿ ವರ್ತಿಸಿದರೆ ಅರ್ಧ ಸಮಸ್ಯೆ ಅಲ್ಲೇ ಬಗೆಹರಿದಂತಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೆಂದು ಠಾಣಿಗಳಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಚಿಸಲಾಗಿದೆ ಎಂಬುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಗಾಂಜಾ ಮಾರಾಟ ಜಾಲವನ್ನು ಹಂತಹಂತವಾಗಿ ತಡೆಗಟ್ಟಲಾಗುವುದು. ಕಳವು ಪ್ರಕರಣ ತಡೆಯಲು 57 ನೈಟ್‌ಬೀಟ್ ವ್ಯವಸ್ಥೆ ಮಾಡಲಾಗಿದ್ದು, 599 ಪಾಯಿಂಟ್‌ಗಳನ್ನು ಗುರುತಿಸಲಾಗಿದೆ. ಲಾಕ್‌ಹೌಸ್ ರಿಜಿಸ್ಟರ್ ತೆರೆಯುತ್ತಿದ್ದು ಮನೆಯಿಂದ ಬೇರೆ ಊರಿಗೆ ಹೋಗುವವರು ಆನ್‌ಲೈನ್ ಮೂಲಕ ಮಾಹಿತಿ ದಾಖಲಿಸಿಕೊಳ್ಳುವ ವ್ಯವಸ್ಥೆ ಮಾಡಲಾಗುವುದು ಎಂದರು.



.jpeg)


0 Comments