ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರಿಗೆ ಯಾರೋ ದುಷ್ಕರ್ಮಿಗಳು ಪತ್ರ ಬರೆದು ನಾಲಿಗೆ ಕತ್ತರಿಸುತ್ತೇವೆ ಎಂಬುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅನಾಮಧೇಯ ಪತ್ರವೊಂದು ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ಕೆ.ಎಸ್ ಈಶ್ವರಪ್ಪ ಅವರ ಮನೆಗೆ ಬಂದಿದ್ದು ಈ ಪತ್ರವನ್ನು ತೆಗೆದು ನೋಡಿದಾಗ ಸದಾ ಮುಸಲ್ಮಾನರನ್ನು ಗೂಂಡಾಗಳು ಎಂಬುದಾಗಿ ಉಚ್ಚರಿಸುವ ನಿನ್ನ ನಾಲಗೆಯನ್ನು ಕತ್ತರಿಸುತ್ತೇವೆ, ಎಂದು ಮುಸಲ್ಮಾನರ ವಿಚಾರಕ್ಕೆ ಬಾರದಂತೆ ಬೆದರಿಕೆ ಹಾಕಿದ್ದಾರೆ. 


ಪತ್ರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ ಯಾರೋ ಹೇಡಿಗಳು ಅನಾಮಧೇಯ ಪತ್ರ ಬರೆದಿದ್ದಾರೆ .ಗೂಂಡಾಗಳಿಗೆ ಗೂಂಡಾ ಅಂತ ಕರೆಯದೇ ಬೇರೆ ಪದ ಬಳಸಲು ಆಗುತ್ತಾ, ಟಿಪ್ಪು ಸುಲ್ತಾನ್ ಗೆ ಮುಸ್ಲಿಂ ಗೂಂಡಾ ಅಂತ ಕರೆದಿದ್ದೇನೆ ಎಂದು ಉಲ್ಲೇಖ ಮಾಡಿದ್ದಾರೆ. ಪತ್ರದ ಬಗ್ಗೆ ತನಿಖೆ ಮಾಡುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದ್ದು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಇಂತಹ ಗೊಡ್ಡು ಬೆದರಿಕೆಗಳಿಗೆ, ಹೇಡಿಗಳಿಗೆ ಭಯಪಡುವ ಪ್ರಶ್ನೆಯೇ ಇಲ್ಲ ಎಂದು ಕಿಡಿಕಾರಿದ್ದಾರೆ.

ಬರೆದ ಬೆದರಿಕೆ ಪತ್ರದಲ್ಲೇನಿದೆ ? 

ಕಾಲೇಜಿಗೆ ಕಟ್ಟಡ ಕಟ್ಟಲು ನಮ್ಮ ಮುಸ್ಲಿಂ ಸಿಮೆಂಟ್ ಬ್ರಿಕ್ಸ್ ಬೇಕು ನಿನಗೆ. ಮುಸ್ಲಿಂರು ಮಾತ್ರ ಬೇಡ ನಾಚಿಕೆಯಾಗಬೇಕು. ನಾಲಿಗೆ ಕಟ್ ಮಾಡುತ್ತೇನೆ ಹುಷಾರ್ ಮಗನೆ ಬಾಲ ಬಿಚ್ಚಬೇಡ ಎಂಬುದಾಗಿ ಪತ್ರ ಬರೆದು ಬೆದರಿಕೆಯೊಡ್ಡಿದ್ದು, ಈ ಬಗ್ಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಶಿವಮೊಗ್ಗ ಎಸ್ ಪಿ ಲಕ್ಷ್ಮಿ ಪ್ರಸಾದ್ ಅವರಿಗೆ ದೂರು ಸಹ ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ತನಿಖೆಯಲ್ಲಿ ತೊಡಗಿದ್ದಾರೆ.