ಬಾಳೆಹೊನ್ನೂರು : (ನ್ಯೂಸ್ ಮಲ್ನಾಡ್ ವರದಿ) ಮನೆಯ ಗಾಡ್ರೇಜ್ ಬೀರುವಿನಲ್ಲಿರಿಸಲಾಗಿದ್ದ ಚಿನ್ನಾಭರಣ ಹಾಗೂ ನಗದನ್ನು ಖತರ್ನಾಕ್ ಕಳ್ಳರು ದೋಚಿರುವ ಘಟನೆ ವರದಿಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅರಳಿಕೊಪ್ಪ ನಿವಾಸಿ ಸುರೇಶ್ ಕೆ.ಕೆ ಎಂಬುವವರ ಮನೆಯ ಗಾಡ್ರೇಜ್ ಬೀರುವಿನಲ್ಲಿ ಇಡಲಾಗಿದ್ದ ಚಿನ್ನದ ಸರ, ಕಿವಿ ಓಲೆ, 03 ಉಂಗುರಗಳು, 1ಗ್ರಾಂ ನ ಗುಂಡು, ಕಿವಿಯ ಬುಗುಡಿ, ಹಾಗೂ 35000 ರೂಪಾಯಿ ನಗದನ್ನು ಕಳ್ಳತನ ನಡೆಸಿ ಎಸ್ಕೇಪ್ ಆಗಿದ್ದಾರೆ ಎಂಬುದಾಗಿ ಮನೆಯವರು ದೂರು ನೀಡಿದ್ದಾರೆ.
ಯಾವುದೇ ಸುಳಿವು ಅಥವಾ ಕಳ್ಳತನ ಆದ ಕುರಿತಾದ ಯಾವುದೇ ಮಾಹಿತಿಗಳು ಲಭ್ಯವಾಗದಂತೆ ಕಳ್ಳರು ಕೈಚಳಕ ತೋರಿದ್ದಾರೆ. ಆಗಸ್ಟ್ 16 ರಂದು ಮನೆಯ ಬೆಡ್ ರೂಮ್ ನಲ್ಲಿರುವ ಗಾಡ್ರೇಜ್ ಬೀರೂವನ್ನು ಸುರೇಶ್ ಅವರು ನೋಡಿದಾಗ ಹಣ ಹಾಗೂ ಆಭರಣ ಇಲ್ಲದೇ ಇರುವುದು ಗೊತ್ತಾಗಿದೆ.
ಈ ಸಂಬಂಧ ಬಾಳೆಹೊನ್ನೂರು ಠಾಣೆಗೆ ದೂರು ನೀಡಿರುವ ಅವರು ಆಗಸ್ಟ್ 10 ರಿಂದ 16 ರ ಬೆಳಗ್ಗೆ 7.30 ರ ಒಳಗೆ ಕಳ್ಳತನ ನಡೆದಿದೆ, ಅಂದಾಜು 175,500 ರೂಪಾಯಿ ಮೌಲ್ಯದ ಒಡವೆಗಳು ಹಾಗೂ 35,000 ರೂಪಾಯಿ ನಗದು ಇವುಗಳನ್ನು ಕಳ್ಳರು ಕದ್ದೊಯ್ದಿದ್ದು ಈ ಕೃತ್ಯವನ್ನು ಎಸಗಿದ ಕಳ್ಳನನ್ನು ಪತ್ತೆ ಮಾಡಿ ಕಳುವಾಗಿರುವ ವಸ್ತುಗಳನ್ನು ಪತ್ತೆ ಮಾಡಿಕೊಡಬೇಕೆಂದು ದೂರು ನೀಡಿದ್ದಾರೆ.
ಘಟನಾ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿರುವ ಬಾಳೆಹೊನ್ನೂರು ಠಾಣೆಯ ಪೊಲೀಸರು ಈ ಸಂಬಂಧ ಹೆಚ್ಚಿ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.



.jpeg)


0 Comments