ಮೂಡಿಗೆರೆ : ಅಕ್ರಮವಾಗಿ ಇಸ್ಪೀಟ್ ಆಟದಲ್ಲಿ ಭಾಗಿಯಾಗಿದ್ದ ಆರು ಜನರ ತಂಡವನ್ನು ಪೊಲೀಸರು ಕಾರ್ಯಾಚರಣೆಯ ಮೂಲಕ ವಶಕ್ಕೆ ಪಡೆದಿದ್ದಾರೆ. 

ಇದನ್ನೂ ಓದಿ : ತೀರ್ಥಹಳ್ಳಿ : ನಿಯಂತ್ರಣ ತಪ್ಪಿ ಬಿದ್ದು ಬೈಕ್ ಸವಾರನ ದುರ್ಮರಣ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಚಂದುವಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಜೂಜಾಟ ಆಡುತ್ತಿದ್ದ ಆರೋಪಿಗಳಾದ ಡೇವಿಡ್ ಬಿನ್ ಫ್ರಾನ್ಸಿಸ್ ಚಂದುವಳ್ಳಿ ಗ್ರಾಮ, ರವಿ ಬಿನ್ ಸೋಮ ಚಂದುವಳ್ಳಿ ಗ್ರಾಮ, ದೇಜು ಬಿನ್ ಲೇಟ್ ಸೋಮ ಗಬ್ಗಲ್ ಗ್ರಾಮ , ರತ್ನಾಕರ ಬಿನ್ ಲೇಟ್ ಚನ್ನ ಮೇಸ್ರ್ತಿ ಜಾವಳಿ ಗ್ರಾಮ, ಸುಧಾಕರ ಬಿನ್ ಶಂಕರ ಕೆಳ ಮರ್ಕಲ್ ಗ್ರಾಮ, ಸತೀಶ್ ಬಿನ್ ಲೇಟ್ ನಾಗರಾಜ್ ಗಬ್ಗಲ್ ಗ್ರಾಮ ಈ ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.


ದಾಳಿ ನಡೆಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಜೂಜಾಟ ಆಡುತ್ತಿದ್ದವರ ಬಳಿಯಿದ್ದ 3500 ನಗದು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಬಾಳೂರು ಠಾಣೆಯ ಪಿ.ಎಸ್.ಐ. ಪವನ್ ಕುಮಾರ್ ಸಿ.ಸಿ., ಹೇಮಂತ್, ಮನು, ಮಂಜುನಾಥ್, ಜಾಫರ್, ಸತೀಶ್ ಇದ್ದರು.

ತನು ಕೊಟ್ಟಿಗೆಹಾರ, ವರದಿಗಾರರು