ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಅಪ್ರಾಪ್ತ ಯುವಕಿಯೋರ್ವಳನ್ನು ಗರ್ಭವತಿ ಮಾಡಿದ ಯುವಕನನ್ನು ಪೊಲೀಸರು ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಬಂಧಿಸಿದ್ದಾರೆ.

ಇದನ್ನೂ ಓದಿ : ಶೃಂಗೇರಿ : ಮನೆಯ ಹೊರಭಾಗದಲ್ಲಿ ನಿಲ್ಲಿಸಿದ್ದ ಬೈಕ್ ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಾಲೇಜಿಗೆ ತೆರಳುತ್ತಿದ್ದ ಅಪ್ರಾಪ್ತೆಯನ್ನು ಗರ್ಭವತಿ ಮಾಡಿ ಆಕೆಗೆ ಮಗುವೂ ಜನಿಸಿದ್ದು ಈ ಕೃತ್ಯದ ಹಿಂದಿದ್ದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅಗಳಗಂಡಿ ಮೂಲದ ಧ್ರುವ ಕುಮಾರ್ ಎಂಬ 27 ವರ್ಷಪ್ರಾಯದ ವ್ಯಕ್ತಿಯು ಬಂಧಿತ ಆರೋಪಿ.


ಈತನನ್ನು ನಿನ್ನೆ ಬಂಧಿಸಿದ್ದ ಶೃಂಗೇರಿ ಠಾಣೆಯ ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿ ಚಿಕ್ಕಮಗಳೂರಿನ ಕಾರಾಗೃಹಕ್ಕೆ ಕರೆದೊಯ್ದಿದ್ದಾರೆ. ಈ ಸಂಬಂಧ ಮುಂದಿನ ಪ್ರಕ್ರಿಯೆಯನ್ನು ಆರಂಭಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.