ನರಸಿಂಹರಾಜಪುರ : (ನ್ಯೂಸ್ ಮಲ್ನಾಡ್ ವರದಿ) ಕಾನೂನು ಬಾಹಿರವಾಗಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಅನೇಕರನ್ನು ಕಾರ್ಯಾಚರಣೆಯ ಮೂಲಕ ಪೊಲೀಸರು ಸೆರೆ ಹಿಡಿದು ವಶಕ್ಕೆ ಪಡೆದಿದ್ದಾರೆ.
ವಿಡಿಯೋ ನೋಡಿ : ಶೃಂಗೇರಿ ಜನರ ಆತಂಕಕ್ಕೆ ಕಾರಣವಾದ ಮನೆಗಳಿಗೆ ಬೆಂಕಿ ಹಚ್ಚುವ ಸೈಕೋಪಾತ್ ಕಾಟ
ಗಾಂಜಾ ವ್ಯಸನಿ ಸೆರೆ :
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಿ.ಹೆಚ್ ಕೈಮರದಲ್ಲಿ ಅನುಮಾನಾಸ್ಪದವಾಗಿ ಓಡಾಟ ನಡೆಸುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಆತನು ಗಾಂಜಾ ಸೇವನೆ ಮಾಡಿರುವುದು ಧೃಢಪಟ್ಟಿತ್ತು. ಈ ಸಂಬಂಧ ಎನ್.ಡಿ.ಪಿ.ಎಸ್ ಆಕ್ಟ್ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿದ್ದು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
ಇಸ್ಪೀಟ್ ಆಡುತ್ತಿದ್ದವರು ಪೊಲೀಸರ ಬಲೆಗೆ :
ಮುತ್ತಿನಕೊಪ್ಪ ಗ್ರಾಮಪಂಚಾಯತ್ ವ್ಯಾಪ್ತಿಯ ಬೈರಾಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಇಸ್ಪೀಟ್ ಆಡುತ್ತಿದ್ದ ಐವರನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಇಸ್ಪೀಟ್ ಗಾಗಿ ಇಟ್ಟುಕೊಂಡಿದ್ದ 60,000 ರೂಪಾಯಿನಗದನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳಾದ ಮೋಹನರಾಜ್, ಶಿವಕುಮಾರ್, ಪೀರ್ ಹುಸೇನ್, ಸತೀಶ್ ನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಮದ್ಯ ಮಾರಾಟ ಮಾಡುತ್ತಿದ್ದ ಶಿವಾನಂದನ ಬಂಧನ :
ಕಾರಿನಲ್ಲಿ ಅಕ್ರಮವಾಗಿ ಮದ್ಯಮಾರಾಟ ನಡೆಸುತ್ತಿದ್ದ ಶಿವಾನಂದ ಎಂಬಾತನನ್ನು ಮಾಹಿತಿಯಮೇರೆಗೆ ಪೊಲೀಸರು ಬಂಧಿಸಿ ಆರೋಪಿಯ ಬಳಿ ಪರವಾನಗಿ ಹೊಂದದೇ ಇದ್ದ 48 ಮದ್ಯದ ಪೌಚುಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಬಂಧನಕ್ಕೊಳಪಡಿಸಿರುವ ಪೊಲೀಸರು ಈ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.
ಅಕ್ರಮ ಕೃತ್ಯಗಳನ್ನು, ಕಾನೂನು ಬಾಹಿರ ಚಟುವಟಿಕೆಗಳನ್ನು ಯಾರೇ ನಡೆಸುತ್ತಿದ್ದರೂ ಕೂಡ ಅಂತಹವರ ಮೇಲೆ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದು ಸಾರ್ವಜನಿಕರು ಇಂತಹ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಸಿದ್ದಾರೆ. ಅನುಮಾನಾಸ್ಪದ ರೀತಿಯಲ್ಲಿ ಯಾರಾದರೂ ಕಂಡುಬಂದಲ್ಲಿ ಯಾವುದೇ ಭಯವಿಲ್ಲದೆ ಮಾಹಿತಿ ನೀಡುವಂತೆ ಅಧಿಕಾರಿಗಳು ತಿಳಿಸಿದ್ದು, ಈ ಕಾರ್ಯಾಚರಣೆಯಲ್ಲಿ ನರಸಿಂಹರಾಜಪುರ ಠಾಣೆಯ ಅಧಿಕಾರಿವರ್ಗ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

%20-%20Copy.jpeg)



0 Comments