ಕಳಸ : (ನ್ಯೂಸ್ ಮಲ್ನಾಡ್ ವರದಿ) ಕಳೆದ ಕೆಲ ದಿನಗಳ ಹಿಂದೆ ಮನೆಯಿಂದ ಇದ್ದಕ್ಕಿದ್ದಂತೆ ರಾತ್ರಿಯ ವೇಳೆ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಇಂದು ನದಿಯಲ್ಲಿ ಪತ್ತೆಯಾಗಿದೆ. 

ಇದನ್ನೂ ಓದಿ : ಮತ್ತೆ ಬಂದ ಮಳೆರಾಯ, ಐದು ದಿನ ಭಾರೀ ಮಳೆ ಸಾಧ್ಯತೆ : ಯಲ್ಲೋ ಅಲರ್ಟ್ ಘೋಷಣೆ.

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹಿರೇಬೈಲು ಯಳಂದೂರು ಗ್ರಾಮದ ರಮೇಶ್ H.P ಅವರು ಮನೆಯಿಂದ ಇದ್ದಕ್ಕಿದ್ದಂತೆ ರಾತ್ರಿಯ ವೇಳೆ ನಾಪತ್ತೆಯಾಗಿದ್ದರು. ರಮೇಶ್ ಅವರನ್ನು ಪತ್ತೆ ಮಾಡುವ ಸಲುವಾಗಿ ಸ್ನೇಹಿತರು ಹಾಗೂ ಕುಟುಂಬವರ್ಗ ಅನೇಕ ಕಡೆಗಳಲ್ಲಿ ಶೋಧ ಕಾರ್ಯನಡೆಸಿತ್ತು. ಎಷ್ಟೇ ಹುಡುಕಿದರೂ ಅವರ ಕುರಿತಾದ ಸುಳಿವು ದೊರೆಯದೇ ಇದ್ದ ಕಾರಣ ಅವರನ್ನು ಹುಡುಕಿಕೊಡುವಂತೆ ಕಳಸದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.


ಆದರೆ ಅವರ ಮೃತದೇಹ ಇಂದು ಸುಭದ್ರಾ ನದಿಯಲ್ಲಿ ಪತ್ತೆಯಾಗಿದೆ. ಮಾಗುಂಡಿ ಸಮೀಪ ಈ ನದಿಯು ಭದ್ರಾ ನದಿಯನ್ನು ಸೇರುತ್ತದೆ ಎನ್ನಲಾಗಿದ್ದು ಈ ನದಿಯಲ್ಲಿ ನಾಪತ್ತೆಯಾಗಿದ್ದ ರಮೇಶ್ ಅವರ ಮೃತದೇಹ ಪತ್ತೆಯಾಗಿದೆ. ಮೃತರನ್ನು ಕಳೆದುಕೊಂಡಿರುವ ಕುಟುಂಬವರ್ಗ ಹಾಗೂ ಸ್ನೇಹಿತರು ಅತೀವವಾದ ನೋವನ್ನು ಹೊರಹಾಕಿದ್ದಾರೆ.

ಘಟನಾ ಸಂಬಂಧ ಕಳಸದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಮರಣೋತ್ತರ ಪರೀಕ್ಷೆಯ ಬಳಿಕ ಅಂತ್ಯಕ್ರಿಯೆಗೆ ಮೃತದೇಹವನ್ನು ಹಸ್ತಾಂತರಿಸಿದ್ದಾರೆ. ಪೊಲೀಸರ ಸಂಪೂರ್ಣ ತನಿಖೆಯ ನಂತರವಷ್ಟೇ ಈ ಕುರಿತಾಗಿನ ಇನ್ನಷ್ಟು ಮಾಹಿತಿಗಳು ಹೊರಬೀಳಲಿದೆ.