ಬಾಳೆಹೊನ್ನೂರು : (ನ್ಯೂಸ್ ಮಲ್ನಾಡ್ ವರದಿ)  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಸಾವರ್ಕರ್ ಕುರಿತ ಹೇಳಿಕೆ ಕುರಿತಂತೆ ಪ್ರತಿಭಟನೆ, ಆರೋಪ ಪ್ರತ್ಯಾರೋಪದ ಬಿಸಿಕೊಡಗಿನಿಂದ ಚಿಕ್ಕಮಗಳೂರು ವ್ಯಾಪಿಸಿದ್ದು ಚರ್ಚೆ ಬಹಳ ಜೋರಾಗಿದ್ದರೆ, ಮತ್ತೊಂದೆಡೆ ಸಿದ್ದರಾಮಯ್ಯ ರಾಜ್ಯ ಸರ್ಕಾರ ಹಾಗೂ ಆರೆಸ್ಸೆಸ್ ವಿರುದ್ಧ ಕೆಂಡಕಾರುತ್ತಿದ್ದಾರೆ.

ಇದನ್ನೂ ಓದಿ : ಸಿದ್ದರಾಮಯ್ಯ ವಿರುದ್ಧ ಕಪ್ಪು ಪಟ್ಟಿ ಪ್ರದರ್ಶನ; ಬಿಜೆಪಿ ಕಾರ್ಯಕರ್ತರ ಬಂಧನ

ಇಂದು ಬೆಳಿಗ್ಗೆ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸದ ಸಂದರ್ಭದಲ್ಲಿ ಹೇಳಿಕೆ ನೀಡಿದ್ದ ಅವರು ಗಾಂಧಿ ಕೊಂದವರಿಗೆ ನಾನು ಯಾವ ಲೆಕ್ಕ ಎಂದು ಕಿಡಿಕಾರಿದ್ದರು.


ನಂತರ ಶೃಂಗೇರಿಗೆ ಭೇಟಿ ನೀಡಿ ಗುರುಗಳ ಹಾಗೂ ಶಾರದಾಂಬೆ ದರ್ಶನ ಪಡೆದು ನಂತರ ಮಳೆಯಿಂದ ಹಾನಿಗೀಡಾದ ಪ್ರದೇಶಕ್ಕೆ ಭೇಟಿ ನೀಡಿ ತದನಂತರ ಬಾಳೆಹೊನ್ನೂರು ರಂಭಾಪುರಿ ಪೀಠಕ್ಕೆ ತೆರಳಿ ಅಲ್ಲಿ ಗುರುಗಳ ಆಶೀರ್ವಾದ ಪಡೆದರು.

ಆದರೆ ಈ ನಡುವೆ ಸಿದ್ದರಾಮಯ್ಯನವರ ಭೇಟಿ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದ ರಂಭಾಪುರಿ ಶ್ರೀಗಳು ಇಂದು ಸಿದ್ದರಾಮಯ್ಯ ಅವರ ಮನಸ್ಸಿನ ದುಗುಡವನ್ನು ಬಿಚ್ಚಿಟ್ಟು ಮಾತನಾಡಿದ್ದಾರೆ. ಧರ್ಮದ ವಿಷಯದಲ್ಲಿ ಕೆಲವರು ನನ್ನನ್ನು ದಾರಿ ತಪ್ಪಿಸಿದರು ಅದಕ್ಕಾಗಿ ಪಶ್ಚಾತ್ತಾಪ ಆಗಿದೆ, ಆದರೆ ಇನ್ಮುಂದೆ ಧರ್ಮದ ವಿಷಯಕ್ಕೆ ಹೋಗುವುದಿಲ್ಲ, ರಾಜ್ಯದ ಅಭಿವೃದ್ಧಿ, ಜನರ ಕಲ್ಯಾಣ ಮಾತ್ರ ನನ್ನ ಮುಂದಿನ ಗುರಿ ಆಗಿದೆ ಎಂದಿದ್ದಾರೆ ಎಂದರು.