ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿಗಾಗಿ ಹಿರಿಯ ವಯಸ್ಸಿನ ಅಜ್ಜಿಯನ್ನು ಮಣಿಕಂಠ ಯುವಕ ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.

ಇದನ್ನೂ ಓದಿ : ಶೃಂಗೇರಿ/ಕೊಪ್ಪ: ಅಪ್ರಾಪ್ತೆ ಗರ್ಭಿಣಿ, ಪೋಕ್ಸೋ ಪ್ರಕರಣದ ಅಡಿಯಲ್ಲಿ ಯುವಕನ ಬಂಧನ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕೆರೆಕಟ್ಟೆ ನಿವಾಸಿ ಸೀತಮ್ಮ ಎಂಬ 112 ವರ್ಷದ ವಯೋ ವೃದ್ದೆಯನ್ನು ಕೆರೆಕಟ್ಟೆಯ ಮಣಿಕಂಠ ಯುವಕ ಸಂಘ ಗುರುತಿಸಿ ಸನ್ಮಾನಿಸಿದೆ. 


ಅಜ್ಜಿಗೆ ಎಂಟು ಜನ ಮಕ್ಕಳಿದ್ದು, ಒಟ್ಟು ಐದು ತಲೆಮಾರನ್ನು ಕಂಡಿದ್ದಾರೆ. ಈ ಅಜ್ಜಿಯನ್ನು ಗುರುತಿಸಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಅವರನ್ನು ಸನ್ಮಾನಿಸಿದ ಯುವಕರು ಅಜ್ಜಿಯ ಆಶೀರ್ವಾದ ಪಡೆದರು. 

ಸಮರ್ಪಕವಾದ ರಸ್ತೆಯನ್ನು ಸಹ ಹೊಂದದೆ ಈ ಗ್ರಾಮಕ್ಕೆ ತೆರಳಿದ ಮಣಿಕಂಠ ಯುವಕ ಸಂಘ ಕೆರೆಕಟ್ಟೆ ಇದರ ಪದಾಧಿಕಾರಿಗಳು ಹಾಗೂ ಸದಸ್ಯರು ಹಿರಿಯರನ್ನು ಎಲ್ಲರೂ ಗೌರವಿಸುವಂತೆ ಮನವಿ ಮಾಡಿದರು.